ಮನೆಯಲ್ಲಿಯೇ ಸಿಗುವಂತ ಈ ಸಾಮಗ್ರಿಗಳನ್ನು ಬಳಸಿ ಶರೀರದ ನಿಶ್ಯಕ್ತಿ ಹೇಗೆ ನಿವಾರಿಸಿಕೊಳ್ಳಬೇಕು ಹಾಗೂ ದೇಹಕ್ಕೆ ಶಕ್ತಿ ಹೇಗೆ ಪಡೆಯಬೇಕು ಅನ್ನೋದನ್ನ ಈ ಮೂಲಕ ತಿಳಿಯೋಣ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರಿಂದ ಉತ್ತಮ ಅರೋಗ್ಯ ಪಡೆದುಕೊಳ್ಳಲಿ.
ಕೆಲವೊಮ್ಮೆ ದೇಹಕ್ಕೆ ನಿಶ್ಯಕ್ತಿ ಉಂಟಾಗಿ ಅನಾರೋಗ್ಯಕ್ಕೆ ಹಿಡಾಗುವಂತ ಪರಿಸ್ಥಿತಿ ಉಂಟಾಗಬಹುದು ಆದ್ರೆ ನಾವುಗಳು ಸೇವಿಸುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತದೆ. ಇನ್ನು ಶರೀರಕ್ಕೆ ಶಕ್ತಿ ಬೇಕು ಈ ರೀತಿಯ ಆಹಾರ ಸೇವನೆ ಮಾಡುವುದು ಉತ್ತಮ.
ಪ್ರತಿದಿನ ವ್ಯಾಯಾಮ ಮಾಡುವ ಜೊತೆಗೆ ಪೌಷ್ಟಿಕಾಂಶ ಭರಿತವಾದ ಆಹಾರಗಳನ್ನು ಸೇವನೆ ಮಾಡೋದು ಉತ್ತಮ. ನಿಶಕ್ತಿ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಅನ್ನೋರು ಎರಡು ಮೂರೂ ಚಮಚ ಕಡಲೆಕಾಳನ್ನು ತಣ್ಣೀರಿನಲ್ಲಿ ರಾತ್ರಿ ನೆನಸಿಟ್ಟು ಬೆಳಗ್ಗೆ ಒಣದ್ರಾಕ್ಷಿ ಜೊತೆಗೆ ತಿಂದು ನಂತರ ಹಾಲು ಕುಡಿದರೆ ನಿಶಕ್ತಿ ಕಡಿಮೆಯಾಗುವುದರ ಜೊತೆಗೆ ದೇಹಕ್ಕೆ ಶಕ್ತಿ ಲಭಿಸುತ್ತದೆ.
ಮತ್ತೊಂದು ವಿಧಾನ ಯಾವುದು ಅಂದ್ರೆ ಒಣದ್ರಾಕ್ಷಿಯನ್ನು ಕೂಡ ರಾತ್ರಿ ನೆನಸಿ ಬೆಳಗ್ಗೆ ತಿನ್ನುವುದರಿಂದ ಶರೀರಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಇವುಗಳನ್ನು ಬೆಳಗ್ಗೆ ಸೇವಿಸಿದ ನಂತರ ಒಂದು ಕಪ್ ತಾಜಾ ಹಾಲು ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಶರೀರ ಉತ್ತಮ ರೀತಿಯಲ್ಲಿ ಶಕ್ತಿಯುತವಾಗಿ ಬೆಳೆಯುತ್ತದೆ. ನಾನಾ ರೀತಿಯ ಬೇಕರಿ ಹೋಟೆಲ್ ಆಹಾರಗಳನ್ನು ಹಾಗೂ ಜಂಕ್ ಫುಡ್ ಸೇವನೆ ಮಾಡುವ ಬದಲು ನೈಸರ್ಗಿಕವಾಗಿ ಪ್ರೊಟೀನ್ ಅಂಶವನ್ನು ನೀಡುವಂತ ಆಹಾರವನ್ನು ತಿನ್ನುವುದು ಉತ್ತಮ. ಮತ್ತೊಂದು ವಿಷಯ ಏನೆಂದರೆ ನೆಗಡಿ ಸಮಸ್ಯೆ ಇದ್ರು ಬಿಸಿ ಬಿಸಿ ಕಡಲೆಕಾಳುಗಳನ್ನು ಸೇವಿಸುವುದರಿಂದ ನೆಗಡಿ ಕಡಿಮೆಯಾಗುವುದು.
Comments are closed.