ಆರೋಗ್ಯ

ಪ್ರತಿದಿನ ಪೈನ್ ಕಿಲ್ಲರ್ ಮಾತ್ರೆ ನುಂಗುವ ಬದಲು ಈ ಪ್ರಯತ್ನವನ್ನೊಮ್ಮೆ ಮಾಡಿ ನೋಡಿ.

Pinterest LinkedIn Tumblr

ಪ್ರತಿ ಮನುಷ್ಯನಿಗೂ ಒಂದಲ್ಲ ಒಂದು ದಿನ ಚಿಕ್ಕ ಪುಟ್ಟ ದೈಹಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅಂತಹ ಸಮಸ್ಯೆಗಳಿಗೆ ಇಂಗ್ಲಿಷ್ ಮಾತ್ರೆ ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬಾರದು ಇದರಿಂದ ಶರೀರದ ಮೇಲೆ ಪ್ರಭಾವ ಬೀರಬಹುದು ಆದ್ದರಿಂದ ಒಂದಿಷ್ಟು ಮನೆ ಮದ್ದುಗಳನ್ನು ಕೂಡ ತಿಳಿದು ನೈಸರ್ಗಿಕ ಚಿಕಿತ್ಸೆ ರೀತಿಯಲ್ಲಿ ಪರಿಹಾರವನ್ನು ಪಡೆಯಬಹುದು.

ನೈಸರ್ಗಿಕವಾದ ಚಿಕಿತ್ಸೆ ಯಾವುದೆಂದರೆ ನಾವು ಮಾಡುವ ಸ್ನಾನದ ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಗೂ ಅಡುಗೆ ಸೋಡಾವನ್ನು ಬೆರಸಿ, ಆ ನೀರಿನಿಂದ ಸ್ನಾನ ಮಾಡುವುದರಿಂದ ಏನ್ ಲಾಭವಿದೆ ಅನ್ನೋದನ್ನ ನೋಡುವುದಾದರೆ, ಶರೀರದ ದಣಿವು ನಿವಾರಿಸುತ್ತೆ ಹಾಗೂ ಶರೀರ ದ  ಮಾಂಸ ಖಂಡಗಳು ನೋವು ಆಗುತ್ತಿದ್ರೆ ನೋವು ಕಡಿಮೆಯಾಗುತ್ತದೆ. ಮೈ ಕೈ ನೋವು ದಣಿವು ಆಗುತ್ತಿದೆ ಅನ್ನೋರು ಪ್ರತಿದಿನ ಪೈನ್  ಕಿಲ್ಲರ್ ಮಾತ್ರೆ ನುಂಗುವ ಬದಲು ಈ ಪ್ರಯತ್ನವನ್ನೊಮ್ಮೆ ಮಾಡಿ ನೋಡಿ.

ಮನೆಯಲ್ಲಿಯೇ ಮತ್ತೊಂದು ಮನೆಮದ್ದು ಮಾಡಿಕೊಳ್ಳಬಹದು ಅದು ಜ್ವರಕ್ಕೆ, ಜ್ವರ ನಿವಾರಣೆಗೆ ಮನೆಮದ್ದು ಹೇಗೆ ಮಾಡಿಕೊಳ್ಳಬಹುದು ಅನ್ನೋದನ್ನ ನೋಡುವದಾದರೆ ತುಳಸಿ ಎಲೆ ಹಾಗೂ ಅದರ ಎರಡರಷ್ಟು ಶುಂಠಿಯನ್ನು ಬಳಸಿ ಕಷಾಯ ಮಾಡಿಕೊಂಡು ಕುಡಿಯೋ ದ್ರಿಂದ  ಜ್ವರ ನಿಯಂತ್ರಣಕ್ಕೆ ಬರುತ್ತದೆ ಅಲ್ಲದೆ ಕೆಮ್ಮು ಏನಾದ್ರು ಬರುತ್ತಿದ್ರೆ ಶುದ್ಧವಾದ ಜೇನುತುಪ್ಪವನ್ನು ದಿನಕ್ಕೆ ಮೂರೂ ಬಾರಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

Comments are closed.