ಬೆಳಗ್ಗೆ ಎದ್ದು ಬ್ರಶ್ ಮಾಡಿದ ನಂತರ ಈ ಮೆಂತೆಯನ್ನು ನೀರಿನ ಸಮೇತ ಚೆನ್ನಾಗಿ 15 ನಿಮಿಷ ಕುದಿಸಿ ಶೋಧಿಸಿಕೊಂಡು ಖಾಲಿ ಹೊಟ್ಟೆ ಯಲ್ಲಿ ನೀರನ್ನು ಕುಡಿಯಬೇಕು. ಅನಂತರ ಶೋಧಿಸಿದ ಮೆಂತೆಕಾಳನ್ನು ಸಹ ಅಗೆದು ನುಂಗಬೇಕು ಮೊದಲು ಒಂದೆರಡು ದಿನ ಕಷ್ಟವಾದರೂ ನಂತರ ತಾನಾಗಿಯೇ ರೂಢಿಯಾಗುತ್ತದೆ. ಆದರೆ ಶರೀರದಲ್ಲಿ ಜಾಸ್ತಿ ಉಷ್ಣ ಪ್ರಕೃತಿ ಇರುವಂತಹವರು ಇದನ್ನು ಅನುಸರಿಸಬಾರದು. ಈ ರೀತಿ ಮೆಂತೆಕಾಳನ್ನು ತಿನ್ನುವುದರಿಂದ ನಮ್ಮ ಕೀಲುನೋವಿಗೆ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ.
ಮೊಣಕಾಲಿನ ನೋವು ಅದನ್ನು ಅನುಭವಿಸುವವರಿಗೆ ತಿಳಿದಿರುತ್ತದೆ ಇದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ ಕಡಿಮೆಯೇನೂ ಆಗುವುದಿಲ್ಲ. ಮೊಣಕಾಲು ನೋವನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿ ಆದಂತಹ ಕೆಲವು ಮನೆಮದ್ದುಗಳಿವೆ. ಮೊಣಕಾಲು ನೋವನ್ನು ಕಡಿಮೆ ಮಾಡಿಕೊಳ್ಳಲು ನಾವು ಮನೆಯಲ್ಲೇ ಮಾಡಿಕೊಳ್ಳಬಹುದಾದ ಅಂತಹ ಔಷಧಿಗಳಲ್ಲಿ ಉಪಯೋಗವಾಗುವಂಥದ್ದು ಮೆಂತೆಕಾಳು, ಮೆಂತೆಕಾಳು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಇರುವ ಒಂದು ಔಷಧೀಯ ವಸ್ತುವಾಗಿದ್ದು ಇದನ್ನು ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ.
ಮೆಂತ್ಯೆ ಕಾಳಿನಲ್ಲಿ ಸ್ವಲ್ಪ ಕಹಿ ಅಂಶ ಜಾಸ್ತಿ ಇದ್ದರೂ ಸಹ ಔಷಧೀಯ ಗುಣಗಳು ಹೇರಳವಾಗಿ ಇರುತ್ತವೆ ಮುಖ್ಯವಾಗಿ ಮೆಂತೆಕಾಳು ಮೊಣಕಾಲು ನೋವಿಗೆ ತುಂಬಾ ಪರಿಣಾಮಕಾರಿಯಾಗಿ ಸಹಾಯಮಾಡುತ್ತದೆ ಹಾಗಾಗಿ ಮೊಣಕಾಲು ನೋವು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ರಾತ್ರಿ ಮಲಗುವ ಮುಂಚೆ ಒಂದು ಬೌಲಿನಲ್ಲಿ 2 ಸ್ಪೂನ್ ನಷ್ಟು ಮೆಂತೆಕಾಳನ್ನು ಹಾಕಿ ಎರಡು ಮೂರು ಬಾರಿ ಚೆನ್ನಾಗಿ ತೊಳೆದು ನೀರು ಹಾಕಿ ರಾತ್ರಿ ಇಡೀ ನೆನೆಯಲು ಬಿಡಬೇಕು.
ಅಷ್ಟೆ ಅಲ್ಲ ಮೊಣಕಾಲು ನೋವು ಜಾಸ್ತಿ ಇರುವಂತಹವರು ತಮ್ಮ ಪ್ರತಿನಿತ್ಯದ ಆಹಾರದಲ್ಲಿ ಎಳ್ಳು ಹಾಗೂ ಕ್ಯಾಲ್ಸಿಯಂ ಇರುವಂತಹ ಪದಾರ್ಥಗಳು ಇರುವಂತೆ ನೋಡಿಕೊಳ್ಳಬೇಕು. ಇವೆಲ್ಲವುಗಳ ಹಾಗೆಯೇ ಮೊಣಕಾಲು ನೋವಿಗೆ ಕೊಬ್ಬರಿ ಎಣ್ಣೆ ಕೂಡ ತುಂಬಾ ಸಹಾಯಕಾರಿಯಾಗಿದೆ ನೋವು ಇರುವ ಜಾಗದಲ್ಲಿ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚಿ ಮಸಾಜ್ ಮಾಡಬೇಕು. ಈ ರೀತಿ ಮಾಡುವುದರಿಂದ ಮೂಳೆಗಳು ಬಲವಾಗಿ ಮೊಳಕಾಲು ನೋವು ಶಾಶ್ವತವಾಗಿ ದೂರವಾಗುತ್ತದೆ. ಇವಿಷ್ಟು ಮೊಣಕಾಲು ನೋವಿಗೆ ನಾವು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದುಗಳು.
Comments are closed.