ಆರೋಗ್ಯ

ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ಮಾಡಲು ಈ ನೀರು ಸಹಕಾರಿ.

Pinterest LinkedIn Tumblr

ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಗೆ, ದೇಹದಲ್ಲಿ ಸೇರಿಕೊಂಡ ಅನಗತ್ಯವಾದ ವಿಷದ ಅಂಶಗಳನ್ನು ಹೊರ ಹಾಕಲು ಈ ನೀರು ಸಹಾಯಕಾರಿ.ಈ ನೀರಿನ ಸೇವನೆಯಿಂದ ನಮಗೆ ಆಗುವಂತಹ ಹಲವು ಆರೋಗ್ಯಕರ ಲಾಭಗಳ ಕುರಿತಾಗಿ ತಿಳಿದುಕೊಳ್ಳೋಣ. ಹೆಚ್ಚಿನದಾಗಿ ಡಾಕ್ಟರ್‌ಗಳು ಸಹ ಈ ಸಮಸ್ಯೆಗೆ ಇದೆ ಸಲಹೆಯನ್ನು ನೀಡುತ್ತಾರೆ.

ಅದುವೇ ಬಾರ್ಲಿ ನೀರು. ಬಾರ್ಲಿಯಲ್ಲಿ ಇರುವಂತಹ ವಿಟಾ ಗ್ಲುಕೋನ್ ಅಂಶವು ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುವುದರ ಜೊತೆಗೆ ಉರಿ ಮೂತ್ರ ಹಾಗೂ ಮೂತ್ರದ ಸೋಂಕು ಹಾಗೂ ಮೂತ್ರದ ಮುಂತಾದ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ತುಂಬಾ ಪ್ರಯೋಜನಕಾರಿ. ಮೂತ್ರದ ಸೋಂಕು ಕಡಿಮೆ ಆಗುವವರೆಗೂ ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರನ್ನು ಸೇವಿಸುವುದು ಒಳ್ಳೆಯದು.

ಬಾರ್ಲಿ ನೀರು ದೇಹದಲ್ಲಿ ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ ಈ ಮೂಲಕ ದೇಹದಲ್ಲಿರುವ ಬೇಡವಾದ ಅನಗತ್ಯವಾದ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುವುದರಿಂದ ಬಾರ್ಲಿ ನೀರು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ.

ಉಷ್ಣದಿಂದ ಆಗುವ ಸಮಸ್ಯೆಗಳು, ಅಜೀರ್ಣದ ಸಮಸ್ಯೆಗಳು, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಗೂ ಸಹ ಬಾರ್ಲಿ ನೀರನ್ನು ಸೇವಿಸುವುದು ಒಳ್ಳೆಯದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಅದಲ್ಲದೇ ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆಗಳು ಇದ್ದಾಗಲೂ ಸಹ ಬಾರ್ಲಿ ನೀರನ್ನು ಸೇವಿಸಬಹುದು ಎಂದು ಹೇಳಲಾಗಿದೆ.

Comments are closed.