ಮನುಷ್ಯನ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ತರಬಲ್ಲ ಏಕೈಕ ಹಣ್ಣು ಅದು ಪಪ್ಪಾಯಿ. ವಿಟಮಿನ್ ‘ಸಿ’ ಹೇರಳವಾಗಿರುವ ಈ ಹಣ್ಣು, ದೇಹದ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖಪಾತ್ರ ವಹಿಸಲಿದೆ.
ಸರ್ವ ಕಾಲದಲ್ಲೂ ದೊರೆತಿರುವ ಹಣ್ಣುಗಳ ಪೈಕಿ ಈ ಹಣ್ಣು ತುಂಬಾ ಹೆಸರುವಾಸಿಯಾಗಿದೆ. ವರ್ಷದ ಎಲ್ಲಾ ಕಾಲದಲ್ಲೂ ದೊರೆಯುವ ಪಪ್ಪಾಯಿ ಅಥವಾ ಪರಂಗಿಹಣ್ಣು ಸೇವನೆಯಿಂದ ಹತ್ತು ಹಲವು ಪ್ರಯೋಜನಗಳಿವೆ. ಇದರಲ್ಲಿರುವ ಮಾನವನಿಗೆ ಬೇಕಾಗಿರುವ ಎಲ್ಲಾ ವಿಟಮಿನ್ಸ, ರೋಗ ನಿರೋಧಕ ಶಕ್ತಿ ಇದೆ.
ಪಪ್ಪಾಯಿ ಸೇವನೆಯಿಂದ ಸಿಗುವ ಉಪಯೋಗಗಳು:
1. *ವಿಟಮಿನ್ ‘ಸಿ’* ಹೇರಳವಾಗಿರುವ ಈ ಹಣ್ಣು, ದೇಹದ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖಪಾತ್ರ ವಹಿಸಲಿದೆ.
ಪರಂಗಿಹಣ್ಣನ್ನು ಕತ್ತರಿಸಿ ತಿನ್ನಬಹುದಾಗಿದೆ ಹಾಗೂ ‘ಜ್ಯೂಸ್’ ತಯಾರಿಸಿಯೂ ಸೇವಿಸಬಹುದು. ಪ್ರೋಟೀನ್ ಮಿನರಲ್ಸ್ ಅಂಶಗಳು ಇದರಲ್ಲಿ ಸಾಕಷ್ಟಿವೆ.
2. ಇದರಲ್ಲಿ *ರೋಗ ನಿರೋಧಕ* ಶಕ್ತಿವೃದ್ಧಿ, ಜೀರ್ಣಕ್ರಿಯೆ ಸುಧಾರಣೆ, ಕಣ್ಣು ದೃಷ್ಟಿ ರಕ್ಷಣೆ ಮಾಡುವಲ್ಲಿ ಹೆಚ್ಚು ನೆರವಾಗಲಿದೆ.
ನಿತ್ಯವೂ ತಿನ್ನಬಹುದಾದ ಪರಂಗಿಹಣ್ಣಿನಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುವ ಗುಣ ಇರುವುದಲ್ಲದೆ, ನಿರೋಧಕ ಶಕ್ತಿಯನ್ನು ವೃದ್ಧಿಸಲಿದೆ.
3. ಪರಂಗಿಹಣ್ಣಿನಲ್ಲಿರುವ ಫೈಬರ್, ವಿಟಮಿನ್ ‘ಸಿ’ ಮತ್ತು ಉತ್ಕರ್ಷಣ ನಿರೋಧಿ ಅಂಶಗಳು, ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಇದರಿಂದ ಹೃದಯಾಘಾತ ಹಾಗೂ ಅಧಿಕ ರಕ್ತದ ಒತ್ತಡದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
4. *ತೂಕ ತಗ್ಗಿಸಲಿದೆ* ಅತಿಯಾದ ತೂಕ ಹೊಂದಿರುವವರು, ತಮ್ಮ ದೈನಂದಿನ ಆಹಾರದಲ್ಲಿ ಪರಂಗಿ ಹಣ್ಣನ್ನು ಸೇರಿಸಿಕೊಂಡು ತಿನ್ನುವುದರಿಂದ ತೂಕ ಕ್ರಮೇಣ ಕಡಿಮೆಯಾಗಲಿದೆ.
ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿರುವ ಈ ಹಣ್ಣು ಸೇವನೆಯಿಂದ ತೂಕ ಇಳಿಯಲು ನೆರವಾಗುತ್ತದೆ.
5. *ನಿರೋಧಕ ಶಕ್ತಿ* ವೃದ್ಧಿಸಲಿದೆ ಎಂದರೆ, ದೇಹದಲ್ಲಿನ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಒದಗಿಸುತ್ತದೆ. ಪರಂಗಿ ಹಣ್ಣಿನ ಒಂದು ತುಂಡಿನಲ್ಲಿ ಶೇ. 200ರಷ್ಟು ವಿಟಮಿನ್ `ಸಿ’ ಅಂಶಗಳಿರುತ್ತದೆ ಎನ್ನಲಾಗಿದೆ.
6. ಪಪ್ಪಾಯಿ ಹಣ್ಣಿನಲ್ಲಿ *ಸಕ್ಕರೆ ಪ್ರಮಾಣ ಕಡಿಮೆ* ಇದ್ದು, ಮಧುಮೇಹಿಗಳೂ ತಿನ್ನಬಹುದಾಗಿದೆ.
ಮಧುಮೇಹ ಇಲ್ಲದವರೂ ಮಧುಮೇಹವನ್ನು ದೂರದಲ್ಲಿಡಲು ಈ ಹಣ್ಣನ್ನು ಸೇವಿಸಬಹುದು.
7. *ಕಣ್ಣುಗಳಿಗೆ ಒಳ್ಳೆಯದು*: ಕಣ್ಣುಗಳ ದೃಷ್ಟಿ ರಕ್ಷಣೆಗೆ ಪಪ್ಪಾಯದಲ್ಲಿರುವ ವಿಟಮಿನ್ `ಎ’ ಹೆಚ್ಚು ಸಹಕಾರಿ. ಕಣ್ಣು ಮಂಜಾಗುವುದು, ಪೊರೆ ಬರುವುದನ್ನು ದೂರ ಮಾಡಲಿದೆ.
8. *ಜೀರ್ಣಕ್ರಿಯೆ ಸುಧಾರಿಸಬಲ್ಲದು*: ಜೀರ್ಣಕ್ರಿಯೆ ಸಾಮರ್ಥ್ಯ ಹೆಚ್ಚಿಸುವ ಗುಣ ಈ ಹಣ್ಣಿನಲ್ಲಿದೆ. ಜೀರ್ಣಕ್ರಿಯೆಗೆ ತೊಂದರೆ ಮಾಡದಂತಹ ಆಹಾರ ಪದಾರ್ಥಗಳನ್ನು ಸೇವನೆ
ಮಾಡದೇ ಇರುವುದು ಕಷ್ಟಸಾಧ್ಯವಾದರೂ, ತಿಂದ ಮೇಲೆ ಅವನ್ನು ಜೀರ್ಣಿಸಿಕೊಳ್ಳಲು ಪಪ್ಪಾಯಿ ತಿನ್ನುವುದು ಅಗತ್ಯ.
9. *ಸಂಧಿವಾತಕ್ಕೆ ರಾಮಬಾಣ:* ಎಂಬುದು ಆಘಾತಕಾರಿ ರೋಗವಾಗಿದ್ದು, ಮಾನವನ ಆಯಸ್ಸು ಕಡಿಮೆ ಮಾಡಲಿದೆ. ಇದರಿಂದ ದೂರವಿರಲು, ಪಪ್ಪಾಯಿ ಸೇವಿಸಬೇಕು. ಇದರಲ್ಲಿರುವ ಆಂಟಿಇನ್ಫ್ಲಾಮೇಟರಿ ಅಂಶಗಳು, ವಿಟಮಿನ್ ‘ಸಿ’ಯೊಂದಿಗೆ ಸೇರಿ, ಸಂಧಿವಾತದ ಮೂಲವನ್ಮು ನಿಯಂತ್ರಿಸಲು ನೆರವಾಗಲಿದೆ.
ವಿಟಮಿನ್ `ಸಿ’ ಅಂಶ ಇರುವ ಆಹಾರ ಸೇವನೆ ಮಾಡುವುದರಿಂದ ಸಂಧಿವಾತ ರೋಗದಿಂದ ಗುಣಮುಖರಾಗಿ ರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಮಕ್ಕಳಿಗೂ ತಿನ್ನಿಸಬಹುದು
10. ಮಗು ಒಂದರಿಂದ ಒಂದೂವರೆ ವರ್ಷದಾಟಿದ ಬಳಿಕ ಚೆನ್ನಾಗಿ ಹಣ್ಣಾಗಿರುವ ಪಪ್ಪಾಯಿ ಹಣ್ಣನ್ನು ಸೇವಿಸಲು ನೀಡಬೇಕು. ಸರ್ವಗುಣ ಸಂಪನ್ನ ಪಪ್ಪಾಯಿ ನೀಡುವುದರಿಂದ ಮಗುವಿನ ದೇಹದ ಪ್ರತಿರೋಧಕ ಶಕ್ತಿ ವೃದ್ಧಿಯಾಗಲಿದೆ. ಮಗು ಸರಿಯಾಗಿ ಮಲ ವಿಸರ್ಜನೆ ಮಾಡುತ್ತಿಲ್ಲವೆಂದಾದರೆ, ಆಗ ಮಗುವಿಗೆ ದಿನಕ್ಕೆ ಎರಡು ಸಲ ಪಪ್ಪಾಯಿ ಪೇಸ್ಟ್ ತಿನ್ನಿಸಿ ಅದು ಮಲಬದ್ಧತೆ ನಿವಾರಿಸುವಲ್ಲಿ ಸಹಕರಿಸುತ್ತದೆ.
ವರದಿ ಕೃಪೆ : ವಾಟ್ಸಪ್
Comments are closed.