ಕಹಿ ಕಹಿಯಾಗಿರುವ ಈ ಬೇವಿನ ಸೊಪ್ಪು ದೇಹಕ್ಕೆ ಸಿಹಿ ನೀಡುವಂತ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ, ಹುಳುಕಡ್ಡಿ ಅಥವಾ ಕೂದಲು ಉದುರುವಿಕೆ ತಡೆಯುವಲ್ಲಿ ಬೇವಿನ ಸೊಪ್ಪು ತುಂಬಾನೇ ಸಹಕಾರಿ, ಅದೇ ರೀತಿ ಅಂಗೈ ಅಂಗಾಲು ಉರಿ ಸಮಸ್ಯೆಗೆ ಬೇವಿನ ಹೂವುಗಳನ್ನು ಒಂದು ದಿನ ಇಡೀ ನೀರಿನಲ್ಲಿ ನೆನಸಿ ಮಾರನೇ ದಿನ ಅದನ್ನು ಕಿವುಚಿ ಶೋಧಿಸಿ ನೀರನ್ನು ಮೂರು ಗಂಟೆಗಳಿಗೊಮ್ಮೆ ಸೇವಿಸಿದರೆ ಅಂಗಾಲು ಹಾಗೂ ಅಂಗೈ ಉರಿ ಶಮನವಾಗುವುದು.
ಇನ್ನು ಅತಿ ಹೆಚ್ಚಾಗಿ ಸೀನು ಏನಾದ್ರು ಬರುತ್ತಿದ್ದರೆ, ಬೇವಿನ ಸೊಪ್ಪಿನ ರಸ ಹಿಂಡಿ, ನಾಲ್ಕೈದು ಹನಿ ಮೂಗಿನ ಹೊಳ್ಳೆಗಳಿಗೆ ಬಿಟ್ಟರೆ ಅತಿಯಾದ ಸೀನು ಶಮನಗೊಳ್ಳುವುದು. ಹೌದು ತಾಜಾ ಬೇವಿನ ಎಲೆಗಳನ್ನು ಮೊಸರಿನಲ್ಲಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಹುಳುಕಡ್ಡಿ ವಾಸಿಯಾಗುವುದು. ಬೇವಿನ ಸೊಪ್ಪಿನ ಕಷಾಯದಿಂದ ಆಗ್ಗಾಗೆ ತಲೆ ತೊಳೆಯುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು, ಹಾಗು ಬಹಳ ಸಮಯದವರೆಗೆ ಕೂದಲು ನೆರೆಯುವುದಿಲ್ಲ.
ಕಿವಿನೋವು : ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಹಬೆ ಹೋರಾಡುತ್ತಿರುವಾಗ ಆ ಹಬೆಯನ್ನು ಕಿವಿಗೆ ಹಾಯಿಸಿದರೆ ಕಿವಿನೋವು ಕಡಿಮೆಯಾಗುತ್ತದೆ. ಇನ್ನು ವಾಕರಿಕೆ ಸಮಸ್ಯೆಗೆ ಬೇವಿನ ಸೊಪ್ಪನ್ನು ಜಜ್ಜಿ ರಸ ತಗೆದು ಅದಕ್ಕೆ ನೀರು ಬೆರಸಿ ಚನ್ನಾಗಿ ಮಿಶ್ರಣ ಮಾಡಿ ಸೇವಿಸಿದರೆ ವಾಕರಿಕೆ ಶಮನವಾಗುವುದು.
ಗಂಟಲು ನೋವು; ಬೇವಿನ ಸೊಪ್ಪು ರಸದೊಂದಿಗೆ ಜೇನುತುಪ್ಪವನ್ನು ಬೆರಸಿ ಬಿಸಿಮಾಡಿ ಗಂಟಲಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸುತ್ತಿದ್ದರೆ ಗಂಟಲು ಹುಣ್ಣು ವಾಸಿಯಾಗುವುದು
Comments are closed.