ಮಗು ಹುಟ್ಟಿದ ಬಳಿಕ ಮೊದಲು ತಾಯಿಯ ಹಾಲನ್ನು ಸೇವಿಸುತ್ತದೆ ತದನಂತರ ಸೇವಿಸುವುದೇ ಹಸುವಿನ ಹಾಲನ್ನು. ಆದರೆ ವಯಸ್ಸಾದ ಬಳಿಕ ನಮ್ಮ ದೇಹಕ್ಕೆ ಹಸುವಿನ ಹಾಲು ಒಳ್ಳೆಯದು ಮಾಡುತ್ತದೆ ಎನ್ನುವುದರ ಜೊತೆಗೆ ಸ್ವಲ್ಪ ಮಟ್ಟಿಗೆ ಕೆಟ್ಟದ್ದು ಕೂಡ ಹೌದು ಎನ್ನುವ ವಿಷಯ ನಂಬಲು ಸಾಧ್ಯವೇ? ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನವಾದ ಒಂದು ದ್ರವ ಪದಾರ್ಥ ಅಂದರೆ ಅದು ಹಾಲು. ಹಾಲು ಕುಡಿದು ಆರೋಗ್ಯವಂತರಾಗಿರಿ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದಕ್ಕೆ ಮೂಲ ಕಾರಣ ಹಾಲಿನಲ್ಲಿ ಇರುವ ಒಳ್ಳೆಯ ಗುಣಲಕ್ಷಣಗಳು.
ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಉತ್ತಮ ಆರೋಗ್ಯ ಸಿಗತ್ತಂತೆ. ಅಡುಗೆ ಮನೆಯಲ್ಲಿ ಇರುವ ಅರಿಶಿನ ಮತ್ತು ಹಾಲು ಸೂಕ್ಷ್ಮ ಜೀವ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ನಮ್ಮ ನಿತ್ಯದ ಇತರ ಆಹಾರಗಳೊಂದಿಗೆ ಈ ಎರಡು ವಸ್ತುಗಳು ಹಾಲು ಮತ್ತು ಅರಿಶಿನ ಇವುಗಳನ್ನು ಒಟ್ಟಿಗೆ ಬೆರೆಸುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಇವು ಪರಿಸರದ ಸೂಕ್ಷ್ಮ ಜೀವಿಗಳ ಜೊತೆ ಹೋರಾಡಲು ಸಹಾಯ ಮಾಡುತ್ತದೆ ಹಾಗೂ ನಮ್ಮ ದೇಹವನ್ನು ಸಹ ಸುರಕ್ಷಿತವಾಗಿ ಇಡುತ್ತವೆ.
ನಮ್ಮ ದೇಹಕ್ಕೆ ಹಲವಾರು ಉಪಯೋಗ ಆಗುವ ಅರಿಶಿನ ಹಾಗೂ ಹಾಲಿನ ಉಪಯೋಗದ ಕುರಿತು ಅದರ ಪ್ರಾಮುಖ್ಯತೆಯ ಕುರಿತು ತಿಳಿದುಕೊಳ್ಳಿ.
ಉಸಿರಾಟದ ತೊಂದರೆಗೆ :– ಅರಿಶಿನ ಮತ್ತು ಹಾಲು ಬ್ಯಾಕ್ಟೀರಿಯದ ಸೋಂಕನ್ನು ಮತ್ತು ವೈರಸ್ ಸೋಂಕುಗಳನ್ನು ನಿವಾರಿಸುವ ಗುಣಗಳನ್ನು ಹೊಂದಿರುತ್ತದೆ. ಉಸಿರಾಟದ ಸಂಬಂಧಿ ತೊಂದರೆಗಳನ್ನ ನಿವಾರಿಸುತ್ತದೆ. ಅಸ್ತಮಾ ಹಾಗೂ ಗಂಟಲು ಊತಗಳನ್ನು ನಿವಾರಣೆ ಮಾಡುತ್ತವೆ.
ಕ್ಯಾನ್ಸರ್ ಅರಿಶಿನ ಮತ್ತು ಹಾಲು ಉರಿಯೂತ ಗುಣಗಳನ್ನು ಹೊಂದಿರುವುದರಿಂದ ಚರ್ಮ, ಶ್ವಾಸಕೋಶ, ಸ್ತನ ಮತ್ತು ಗುಧ ನಾಳಗಳಲ್ಲಿ ಕಂಡುಬರುವ ಕ್ಯಾನ್ಸರ್ ಲಕ್ಷಣಗಳನ್ನು ತಡೆಯುತ್ತವೆ. ಹಾನಿಕಾರಕ ಡಿ ಎನ್ ಏ ಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತವೆ ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಸಹ ತಡೆಯುತ್ತವೆ.
ನಿದ್ರಾಹೀನತೆ :– ಬಿಸಿ ಅರಿಶಿನ ಹಾಲು ಅಮೈನೋ ಆಮ್ಲ, ಟ್ರಿಪ್ಲೋ ಪ್ಲಾಮ್ ಅನ್ನು ಉತ್ಪತ್ತಿ ಮಾಡತ್ತೆ. ಇದು ಶಾಂತಿಯುತ ಮತ್ತು ಸುಖ ನಿದ್ರೆಗೆ ಸಹಾಯ ಮಾಡುತ್ತದೆ. ಹಾಗೆ ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ. ಅರಿಶಿನ ಹಾಲು ವೈರಸ್ ಮದ್ದು ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ. ಇದು ನೋಯುತ್ತಿರುವ ಗಂತಳಿಗೂ ಸಹ ಉತ್ತಮ ಪರಿಹಾರ ನೀಡುತ್ತದೆ.
ಸಂಧಿ ವಾತದ ನಿವಾರಣೆ :- ಅರಿಶಿನ ಹಾಲು ಸಂಧಿವಾತದ ನಿವಾರಣೆ ಹೋಗಲಾಡಿಸಲು ಹಾಗೂ ಅದಕ್ಕೆ ಸಂಬಂಧಿಸಿದ ಊತವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಕೀಲು ಮತ್ತು ಸ್ನಾಯು ನೋವುಗಳನ್ನು ಸಹ ಕಡಿಮೆ ಮಾಡಲು ಸಹಾಯಕಾರಿ ಆಗುತ್ತದೆ. ನೋವು ಮತ್ತು ವೇದನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅರಿಶಿನ ಹಾಲಿನಲ್ಲಿ ಸಕಲ ರೋಗಗಳನ್ನು ನಿವಾರಿಸುವ ಶಕ್ತಿ ಇರುತ್ತದೆ. ಇದು ದೇಹದಲ್ಲಿರುವ ಬೆನ್ನು ಮೂಳೆಗಳನ್ನ ಬಲಪಡಿಸಿ ಅದರ ನೋವುಗಳನ್ನು ನಿವಾರಿಸುತ್ತವೆ. ಉತ್ಕರ್ಷಣಾ ನಿವಾರಣಾ ಗುಣಗಳನ್ನು ಹೊಂದಿದ್ದು ಹಲವಾರು ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಅರಿಶಿನ ಹಾಲು ಹೊಂದಿದೆ.
ರಕ್ತ ಶುದ್ದೀಕರಣ ಮಾಡಲು ಉಪಯೋಗ :- ಆಯುರ್ವೇದದ ಸಂಪ್ರದಾಯದಲ್ಲಿ ಅರಿಶಿನ ಹಾಲು ಅತ್ಯುತ್ತಮ ರಕ್ತ ಶುದ್ಧೀಕರಣ ಎಂದು ಹೇಳುತ್ತಾರೆ. ಇದು ದೇಹದಲ್ಲಿನ ರಕ್ತ ಶುದ್ಧೀಕರಣ ಮತ್ತು ಪುನಚ್ಚೆತನಮಾಡಲು ಸಹಾಯ ಮಾಡುತ್ತದೆ. ಇದು ದುಗ್ಧ ನಾಳ ಮತ್ತು ಎಲ್ಲ ರಕ್ತ ನಾಲಗಳನ್ನು ಶುದ್ಧ ಮಾಡಲು ಸಹಾಯ ಮಾಡುತ್ತದೆ. ಅರಿಶಿ ಅದ ಹಾಲು ಲಿವರ್ ಗೆ ಉತ್ತಮ ಇದು ಪಿತ್ತ ಜನಕಾಂಗದ ಕೆಲಸವನ್ನು ಸರಿಯಾಗಿ ನಿರ್ವಹಿಸುವಂತೆ ಮಾಡುತ್ತದೆ. ರಕ್ತ ಶುದ್ಧೀಕರಣದ ಮೂಲಕ ಲಿವರ್ ಅನ್ನು ಬೆಂಬಲಿಸುತ್ತದೆ. ಹಾಗೆ ಮೂಳೆಗಳ ಆರೋಗ್ಯಕ್ಕೂ ಸಹ ಉತ್ತಮ.
ಮೂಳೆಗಳನ್ನು ಗಟ್ಟಿಯಾಗಿ ಶಕ್ತಿಯುತವಾಗಿ ಇಡಲು ಕ್ಯಾಲ್ಸಿಯಂ ಅನ್ನು ಪೂರೈಕೆ ಮಾಡುತ್ತದೆ. ಹಾಗೆ ಕರುಳಿನ ಆರೋಗ್ಯವನ್ನು ಕಾಪಾಡಿ ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ. ಹೊಟ್ಟೆ ಹುಣ್ಣುಗಳನ್ನು ಸಹ ಕಡಿಮೆ ಮಾಡುತ್ತದೆ. ಅರಿಶಿನದ ಹಾಲು ಒಂದು ಪ್ರಭಲ ನಂಜು ನಿರೋಧಕ. ಮುಟ್ಟಿನ ಸೆಳೆತ ಮತ್ತು ನೋವುಗಳನ್ನು ಕಡಿಮೆ ಮಾಡುತ್ತದೆ. ಗರ್ಭಿಣಿ ಮಹಿಳೆಯರು ಸುಲಭ ಹೆರಿಗೆಗೆ ಅರಿಶಿನ ಹಾಲನ್ನು ಸೇವಿಸುವುದು ಒಳ್ಳೆಯದು. ಅಂಡಾಶಯದ ವೇಗವಾದ ಸಂಚಲನಕ್ಕೆ ಅರಿಶಿನ ಹಾಲನ್ನು ಸೇವಿಸಬೇಕು. ಚರ್ಮ ಕೆಂಪಾಗುವುದನ್ನು ಅರಿಶಿನದ ಹಾಲು ತಡೆಗಟ್ಟುತ್ತದೆ. ಹತ್ತಿಯನ್ನು ಅರಿಶಿನದ ಹಾಲಿನಲ್ಲಿ ನೆನೆಸಿ ಮುಖದಲ್ಲಿ ಕೆಂಪಾದ ಚರ್ಮದ ಮೇಲೆ ೫/೧೦ ನಿಮಿಷಗಳ ಕಾಲ ಇಟ್ಟರೆ ಕೆಂಪಾದ ಚರ್ಮ ನಿವಾರಣೆ ಆಗುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ಸಹ ಅರಿಶಿನದ ಹಾಲು ಸಹಾಯ ಮಾಡುತ್ತದೆ. ಆಹಾರದಲ್ಲಿರುವ ಕೊಬ್ಬಿನ ಅಂಶಗಳನ್ನು ತೆಗೆದು ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಲಿನ ಬಗ್ಗೆ ಒಳ್ಳೆಯದನ್ನೇ ಕೇಳಿ ಬಂದಿರುವ ನಮಗೆ ಇತ್ತೀಚಿನ ಹಲವು ಸಂಶೋಧನೆಗಳು ನೀಡುವ ಮಾಹಿತಿಗಳು ಹಾಲಿನ ಅಡ್ಡ ಪರಿಣಾಮದ ದೆಸೆಯಿಂದ ಹಾಲು ಸಹ ನಮ್ಮ ಜೀವಕ್ಕೆ ತೊಂದರೆಯನ್ನ ನೀಡುತ್ತದೆ ಎನ್ನುವ ಗಾಳಿಮಾತು ಗಳನ್ನು ಎಬ್ಬಿಸುತ್ತ ಇದೆ. ಆದರೆ ಹಾಲು ಮಾತ್ರ ಎಂದೆಂದಿಗೂ ಸಕಲ ಜೀವ ರಾಶಿಗೂ ಅದ್ಭುತವಾದ ಅಮೃತ.
Comments are closed.