ಆರೋಗ್ಯ

ಮಹಾರಾಷ್ಟ್ರಕ್ಕೆ ವಿದೇಶದಿಂದ ಬರುವ ಪ್ರಯಾಣಕರಿಗೆ ಆರ್.ಟಿ-ಪಿಸಿಆರ್ ರಿಪೋರ್ಟ್ ಕಡ್ಡಾಯ

Pinterest LinkedIn Tumblr

ಮುಂಬೈ: ಮಹಾರಾಷ್ಟ್ರಕ್ಕೆ ಬರುವ ಎಲ್ಲ ವಿದೇಶಿ ಪ್ರಯಾಣಿಕರು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಪಡಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

(ಸಾಂದರ್ಭಿಕ ಚಿತ್ರ)

ಯುರೋಪಿಯನ್ ರಾಷ್ಟ್ರಗಳು, ಮಧ್ಯ ಪೂರ್ವ ರಾಷ್ಟ್ರಗಳು ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಮಹಾರಾಷ್ಟ್ರಕ್ಕೆ ಬರುವ ಎಲ್ಲಾ ವಿದೇಶಿ ಪ್ರಯಾಣಿಕರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಆದೇಶ ಹೊರಡಿಸಿದ್ದಾರೆ.

ದೇಶಕ್ಕೆ ಬರುವ ಮುನ್ನ ನೆಗೆಟಿವ್ ಆರ್.ಟಿ- ಪಿಸಿಆರ್ ವರದಿಯನ್ನು ಕೇಂದ್ರ ಸರ್ಕಾರ ಕಡ್ಡಾಯಪಡಿಸಿದೆ. ಆ ನಿಯಮ ಮಹಾರಾಷ್ಟ್ರಕ್ಕೆ ಬರುವ ಎಲ್ಲಾ ವಿದೇಶಿ ಪ್ರಯಾಣಿಕರಿಗೆ ಅನ್ವಯವಾಗಲಿದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

Comments are closed.