ಆರೋಗ್ಯ

ಪಾದಯಾತ್ರೆಯಲ್ಲ ಬೇಕಿದ್ದರೆ ಮ್ಯಾರಥಾನ್ ಬೇಕಾದ್ರೂ ಮಾಡಲಿ…ಆದರೆ ಈಗಲ್ಲ: ಸಚಿವ ಡಾ. ಸುಧಾಕರ್

Pinterest LinkedIn Tumblr

ಬೆಂಗಳೂರು: ಮೇಕೆದಾಟು ವಿಚಾರವಾಗಿ ಕಾಂಗ್ರೆಸ್‌‌ ಮಾಡುವ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಪಾದಯಾತ್ರೆ ಮಾಡಲಿ, ಬೇಕಿದ್ದರೆ ಮ್ಯಾರಥಾನ್‌‌ ಬೇಕಾದರೂ ಮಾಡಲಿ..ಆದರೆ ಈಗ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯನ್ನು ಮೂರು ತಿಂಗಳು ಮುಂದೂಡಿ ಮಾರ್ಚ್‌-ಎಪ್ರಿಲ್‌‌ನಲ್ಲಿ ಮಾಡಲಿ ಎಂದಿದ್ದಾರೆ. ಕೋವಿಡ್​ ಉಲ್ಭಣಗೊಂಡಿದೆ. ಬಿಬಿಎಂಪಿ ಚುನಾವಣೆ ಬಂತು ಅಂತ ಹೀಗೆ ಮಾಡ್ತಿದ್ದಾರಾ ಅನ್ನಿಸುತ್ತಿದೆ. ಈಗ ಕೊರೊನಾ ಉಲ್ಬಣವಾಗುತ್ತಿದೆ. ಜನಹಿತ ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪಾದಯಾತ್ರೆ ಮಾಡಲಿ ಎಂದು ಹೇಳಿದ್ದಾರೆ.

ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಆರಂಭವಾಗುತ್ತೆ. ಆದ್ರೆ ಸಿಎಂ ಕೆಲ ಜಿಲ್ಲಾಡಳಿತಗಳಿಗೆ ಪರಿಸ್ಥಿತಿ ನೋಡಿಕೊಂಡು ನಿರ್ಬಂಧ ಹೇರಲು ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆಯವರೆಗೂ ವೀಕೆಂಡ್ ಕರ್ಫ್ಯೂ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

 

Comments are closed.