ಅಂತರಾಷ್ಟ್ರೀಯ

ಚೀನಾದಲ್ಲಿ ಮತ್ತೆ ಕಾಣಿಸಿಕೊಂಡ ಕೊರೋನಾ: ಚಾಂಗ್‌ಚುನ್‌ನಲ್ಲಿ ಲಾಕ್‌ಡೌನ್‌

Pinterest LinkedIn Tumblr

ಬೀಜಿಂಗ್‌: ಚೀನದಲ್ಲಿ ಎರಡು ವರ್ಷಗಳ ಬಳಿಕ ಮತ್ತೆ ಕೊರೋನಾ ಸೋಂಕಿನ ಭೀತಿ ಕಾಣಿಸಿಕೊಂಡಿದೆ.

vid

ಚೀನಾ ದೇಶದ ಈಶಾನ್ಯ ಭಾಗದ ಚಾಂಗ್‌ಚುನ್‌ ಎಂಬ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ದಿಢೀರನೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಸ್ಥಳೀಯ ಆಡಳಿತ ಚಾಂಗ್‌ಚುನ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದೆ.

ಸ್ಥಳೀಯ ನಿವಾಸಿಗಳು ಅಗತ್ಯವಿಲ್ಲದೆ ಮನೆಯಿಂದ ಹೊರಗೆ ಬರುವಂತಿಲ್ಲ ಮತ್ತು ಎಲ್ಲರೂ 3 ಹಂತಗಳ ಪರೀಕ್ಷೆಗೆ ಒಳಗಾಗಬೇಕು ಎಂದು ಆದೇಶಿಸಲಾಗಿದೆ. ಜತೆಗೆ ವರ್ಕ್‌ ಫ್ರಂ ಹೋಮ್‌ ಕೂಡ ಅನುಷ್ಠಾನ­ಗೊಳಿಸುವಂತೆ ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಸೂಚಿಸಲಾಗಿದೆ.

ಜಿನ್‌ ಎಂಬ ಪ್ರಾಂತ್ಯದಲ್ಲಿ 98 ಕೇಸುಗಳು ದೃಢಪಟ್ಟಿವೆ. ಶಾಂಘೈನಲ್ಲಿ ಕೂಡ ಒಮಿಕ್ರಾನ್‌ ರೂಪಾಂತರಿ ಸಂಖ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಮತ್ತು ಇತರ ಮುಂಜಾಗೃತಾ ಕ್ರಮಗಳನ್ನು ಜಾರಿ ಮಾಡಿದ್ದಾರೆ. ರಾಜಧಾನಿ ಬೀಜಿಂಗ್‌ನಲ್ಲಿ ಜನವಸತಿ ಪ್ರದೇಶಗಳಲ್ಲಿ ಲಾಕ್‌ಡೌನ್‌ ಮಾದರಿ ಕ್ರಮಗಳನ್ನು ಜಾರಿ ಮಾಡಲಾಗಿದೆ.

ನಿರೀಕ್ಷೆಗೂ ಮೀರಿ ಸೋಂಕು ಸಂಖ್ಯೆ ಪತ್ತೆಯಾಗಿರುವುದರಿಂದ ಪರೀಕ್ಷೆ ನಡೆಸಲು ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಅನ್ನು ಇದೇ ಮೊದಲ ಬಾರಿಗೆ ಬಳಕೆಗೆ ಮಾಡಲು ಚೀನ ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

Comments are closed.