ಕುಂದಾಪುರ: ವಕ್ವಾಡಿ ಫ್ರೆಂಡ್ಸ್ ವಕ್ವಾಡಿ, ಆಸರೆ ಟ್ರಸ್ಟ್ ವಕ್ವಾಡಿ ಇವರ ಸಹಯೋಗದಲ್ಲಿ ರೋಜ್ ವೆಲ್ಟ್ ಫಾರ್ಮ ಇವರ ಆಶ್ರಯದಲ್ಲಿ ಸೂಪರ್ ಸ್ಪೆಷಲಿಸ್ಟ್ ತಜ್ಞ ವೈದ್ಯರಿಂದ ಉಚಿತ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯ ಆರೋಗ್ಯ ತಪಾಸಣೆ ಶಿಬಿರ ಭಾನುವಾರ ವಕ್ವಾಡಿ ಫಾರ್ಚೂನ್ ಹೋಟೆಲ್ ಬಳಿ ಆದ್ಯ ಕ್ಲಿನಿಕ್ ನಲ್ಲಿ ನಡೆಯಿತು.
ನುರಿತ ವೈದ್ಯರಾದ ಡಾ. ರಾಮ್ ಪ್ರಕಾಶ್ ಕಲ್ಗುಜ್ಜಿಕರ್, ಡಾ. ಉತ್ಸವ್ ಸಿ. ಶೆಟ್ಟಿ ಈ ಶಿಬಿರದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭ ರಕ್ತ ತಪಾಸಣೆ ಕೂಡ ನಡೆಸಲಾಯಿತು.
ಆಸರೆ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಣ್ಣಗಲ್ ಮನೆ, ಹೆಲ್ತ್ ಕೇರ್ ಲ್ಯಾಬ್’ನ ಸಚಿನ್ ಪೈ, ಹಿರಿಯರಾದ ಅರುಣ್ ಕಲ್ಗುಜ್ಜಿಕರ್ ಇದ್ದರು.
ರಾಘವೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿ, ಸತೀಶ್ ಪೂಜಾರಿ ವಂದಿಸಿದರು.
Comments are closed.