ಕುಂದಾಪುರ: ಜಿಲ್ಲಾ ಪ್ರಶಸ್ತಿ ಪುರಸ್ಕೃತ ನವಶಕ್ತಿ ಯುವಕ ಮಂಡಲ ರಿ. ಅರಸಮ್ಮಕಾನು, ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘ ಬೆಳ್ವೆ, ಲಯನ್ಸ್ ಕ್ಲಬ್ ಆರ್ಡಿ, ಬೆಳ್ವೆ – ಗೋಳಿಯಂಗಡಿ ಲಿಯೋ ಕ್ಲಬ್ ಯುವಶಕ್ತಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ಕುಂದಾಪುರ ಘಟಕದ ಸಂಯುಕ್ತ ಆಶ್ರಯದಲ್ಲಿ ದಿವಂಗತ ಸುಧಾಕರ ಪೂಜಾರಿ ಅವರ ಸ್ಮರಣಾರ್ಥವಾಗಿ 13ನೇ ವರ್ಷದ ರಕ್ತದಾನ ಶಿಬಿರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿಯ ಅಧ್ಯಕ್ಷರಾದ ಎಸ್. ಜಯರಾಮ ಶೆಟ್ಟಿ ಮಾತನಾಡಿ, ನವಶಕ್ತಿ ಯುವಕ ಮಂಡಲವು ಗ್ರಾಮೀಣ ಭಾಗದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಸೇವೆಯನ್ನು ಮಾಡುತ್ತಿರುವುದು ಪ್ರಸಂಶನೀಯ. ಸುಮಾರು 13 ವರ್ಷಗಳಿಂದ ರಕ್ತದಾನದ ಶಿಬಿರವನ್ನು ಈ ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವುದು ಶ್ರೇಷ್ಠ ಕಾರ್ಯ ಎಂದರು .
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಘಟಕ ಕುಂದಾಪುರ ಇದರ ಚೇರ್ಮನ್ ಎಸ್. ಜಯಕರ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನದಂತ ಶ್ರೇಷ್ಠವಾದ ಕಾರ್ಯಕ್ರಮವನ್ನು ಆಯೋಜಿಸಿರುವುದು, ಅತ್ಯಂತ ಸಂತೋಷದ ವಿಷಯ, ದಾನದಲ್ಲಿ ಶ್ರೇಷ್ಠವಾದ ದಾನವು ರಕ್ತದಾನವಾಗಿದೆ. ಈ ರಕ್ತವನ್ನು ಸಂಗ್ರಹಣೆ ಮಾಡುವಲ್ಲಿ ಕುಂದಾಪುರದ ರೆಡ್ ಕ್ರಾಸ್ ಘಟಕ ಅನೇಕ ಪ್ರಶಸ್ತಿಯನ್ನು ಪಡೆದು ಮುಂಚೂಣಿಯಲ್ಲಿದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ ವಹಿಸಿದ್ದರು.
ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ಆರ್ಡಿ -ಬೆಳ್ವೆ, ಗೋಳಿಯಂಗಡಿ ಕೋಶಾಧಿಕಾರಿ ಬಿ. ಜಯಪ್ರಕಾಶ್ ಶೆಟ್ಟಿ,
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಸಮ್ಮಕಾನು ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕ ಶ್ರೀಕಾಂತ್ ಆಚಾರ್ಯ, ಯುವಕ ಮಂಡಲದ ಕಾರ್ಯದರ್ಶಿ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.
ಯುವಕ ಮಂಡಲದ ಗೌರವ ಅಧ್ಯಕ್ಷ ಕೀರ್ತಿ ಕುಮಾರ್ ಶೆಟ್ಟಿ ನಿರೂಪಿಸಿದರು. ನವಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ ಹೆಗ್ಡೆ ಸ್ವಾಗತಿಸಿದರು.
ರಕ್ತದಾನ ಶಿಬಿರದಲ್ಲಿ ಸುಮಾರು 145 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು 115 ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
Comments are closed.