Karnataka

ದುಬೈ ಫಾರ್ಚ್ಯೂನ್ ಗ್ರೂಫ್ ಸಂಸ್ಥೆಗೆ 2.5 ಕೋಟಿ ವಂಚನೆ ಪ್ರಕರಣ; ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ನೇಮಕ

Pinterest LinkedIn Tumblr

ಉಡುಪಿ: ಅನಿವಾಸಿ ಭಾರತೀಯ, ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಫಾರ್ಚೂನ್ ಗ್ರೂಫ್ ಆಫ್ ಹೋಟೆಲೊಂದರಲ್ಲಿ ಅಕೌಂಟೆಂಟ್ ಆಗಿದ್ದು 2.5 ಕೋಟಿಗೂ ಅಧಿಕ ಹಣ ವಂಚಿಸಿದ ಬ್ರಹ್ಮಾವರದ ನಾಗೇಶ್ ಪೂಜಾರಿ ಎಂಬಾತನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದೂರು ದಾಖಲಾಗಿದ್ದು ನ್ಯಾಯಾಲಯದಲ್ಲಿ ಪ್ರಕರಣ ನಡೆಸಲು‌‌ ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಕಾನೂನು ಅಧಿಕಾರಿ (ಹಿರಿಯ) ಶಿವಪ್ರಸಾದ್ ಆಳ್ವ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ.

(ಶಿವಪ್ರಸಾದ್ ಆಳ್ವ)

ಆದೇಶದಲ್ಲಿ ಏನಿದೆ?: ಶಿವಪ್ರಸಾದ್ ಆಳ್ವ, ಕಾನೂನು ಅಧಿಕಾರಿ (ಹಿರಿಯ), ಮಂಗಳೂರು ವಲಯ, ಮಂಗಳೂರು ಇವರನ್ನು ಮಾನ್ಯ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಉಡುಪಿ (ಸಂಚಾರಿ ನ್ಯಾಯಾಲಯ ಬ್ರಹ್ಮಾವರ) ಇಲ್ಲಿನ ಬ್ರಹ್ಮಾವರ ಪೊಲೀಸ್ ಠಾಣೆ ಕ್ರೈಂ.ನಂ:95/2023ರ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದಿನ ಆದೇಶದವರೆಗೆ ನಿಯೋಜಿಸಿದೆ. ಇವರು ಪ್ರಕರಣದ ವಿಚಾರಣೆ ದಿನಾಂಕಗಳಂದು ನ್ಯಾಯಾಲಯಗಳಲ್ಲಿ ಹಾಜರಿದ್ದು, ಪ್ರಕರಣವನ್ನು ನಡೆಸುವಂತೆ ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ) ಸರಕಾರದ ಅಧೀನ ಕಾರ್ಯದರ್ಶಿಯವರು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ನೇಮಿಸಿ ಆದೇಶಿಸಿದ್ದಾರೆ.

Comments are closed.