ಪ್ರತಿಭಾ ವಿಕಸನಕ್ಕೆ, ಮಾತೃ ಸಂಸ್ಕೃತಿಯ ಉಳಿವಿಗೆ ಪ್ರಯತ್ನ: ನ್ಯಾ. ಜಗನ್ನಾಥ್ ಶೆಟ್ಟಿ
ಮುಂಬಯಿ: ಹದಿಮೂರು ವರ್ಷಗಳಿಂದ ನಮ್ಮ ಸಮಿತಿಯು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಊರಿನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಮಹಿಳೆಯರು ಸೇರಿ ಸಮಿತಿಯ ಎಲ್ಲರೂ
ಕ್ರಿಯಾಶೀಲರಾಗಿರುವುದು ಅಭಿಮಾನ ತಂದಿದೆ. ವರಮಹಾಲಕ್ಷ್ಮಿ ಪೂಜಾ ಸಮಿತಿಯು ಧಾರ್ಮಿಕ ಕಾರ್ಯದೊಂದಿಗೆ ಸದಸ್ಯರ ಮತ್ತು ಮಕ್ಕಳ ಪ್ರತಿಭಾ ವಿಕಸನದೊಂದಿಗೆ ಮಾತೃ ಸಂಸ್ಕೃತಿಯ ಉಳಿವಿಗೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ತಿಳಿಸಿದರು.
ಜು. 17 ರಂದು ಉತ್ಕರ್ಷ ವಿದ್ಯಾ ಮಂದಿರ, ಪುಷ್ಪ ಪಾರ್ಕ್ ದಪ್ತರೆ ರೋಡ್, ಮಲಾಡ್ ಪೂರ್ವ ಇಲ್ಲಿ ನಡೆದ ಮಲಾಡ್ ಪೂರ್ವ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಆಷಾಢ ಹಬ್ಬದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಅವರು, ನಮ್ಮ ಹಿಂದಿನ ಕಾರ್ಯಕ್ರಮಗಳಿಗಿಂದ ಇಂದಿನ ಕಾರ್ಯಕ್ರವನ್ನು ಕಂಡಾಗ ಒಂದು ಉತ್ತಮ ಬದಲಾವಣೆಯನ್ನು ಕಾಣಬಹುದು. ಮಹಿಳಾ ವಿಭಾಗದವರು ಆಟಿ ತಿಂಗಳ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ರೀತಿಯ ತಿಂಡಿಗಳನ್ನು ಮಾಡಿ ತಂದಿರುವರು. ಒಂದು ಅರ್ಥಪೂರ್ಣವಾದ ಕಿರು ನಾಟಕವನ್ನೂ ಪ್ರದರ್ಶಿಸಿದ್ದು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕಾಗಿದೆ ಎಂದರು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ ಮಾತನಾಡಿ, ಮಹಿಳೆಯರು ತಮಗೆ ಸಮಯ ಸಿಗದೇ ಇದ್ದರೂ ಕೂಡ ಕೇವಲ ಕೆಲವೇ ದಿನಗಳಲ್ಲಿ ತರಬೇತಿಯನ್ನು ಪಡೆದು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಅಲ್ಲದೆ ಮನೆಯಲ್ಲಿ ಊರಿನ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಇಲ್ಲಿ ತಂದಿರುತ್ತಾರೆ. ನಿಜವಾಗಿ ಅವರಿಗೆ ಸಮಿತಿಯಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ. ಈಗಾಗಲೇ ಭಜನೆ ಅಭ್ಯಾಸ ಶಿಬಿರ, ಹಾರ್ಮೋನಿಯಂ ಶಿಬಿರ, ಮನೆಮನೆಯಲ್ಲಿ ಭಜನೆ ಕಾರ್ಯಕ್ರಮಗಳನ್ನು ನಡೆಸುತ್ತಿರುವೆವು. ಕಾರ್ಯಕ್ರಮವನ್ನು ಆಯೋಜಿಸುವಾಗ ಮಹಿಳೆಯರಿಗೆ ತೊಂದರೆಗಳು ಕಷ್ಟಗಳು ಉಂಟಾಗಿರಬಹುದು. ಆದರೆ ಅವರೆಲ್ಲರೂ ನಿರ್ಭೀತವಾಗಿ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಲ್ಲರು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಿಲ್ಲವರ ಅಸೋಶಿಯೇಷನ್ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸಂತೋಷ್ ಪೂಜಾರಿಯವರು ಮಾತನಾಡಿ, ಹಿಂದೆ ನಮ್ಮ ಹಿರಿಯರಿಗೆ ಆಟಿ ತಿಂಗಳು ಕಷ್ಟದ ಸಮಯವಾಗಿದ್ದರೆ ಈಗ ಪರ್ವ ಕಾಲದಂತಿದೆ. ಈ ಸಮಿತಿಯು ನಮ್ಮೆಲ್ಲರನ್ನೂ ಒಂದೇ ವೇದಿಕೆಯಡಿ ತಂದಿದ್ದು ಇದಕ್ಕೆ ಕಾರಣರಾದ ದಿನೇಶ್ ಕುಲಾಲ್ ಮತ್ತಿತರನ್ನು ಅಭಿನಂದಿಸಬೇಕು ಎನ್ನುತ್ತಾ ಇಂದು ಈ ಸಮಾರಂಭದಲ್ಲಿ ಮಹಿಳೆಯರು ಅರ್ಥಪೂರ್ಣವಾದ ನಾಟಕವನ್ನು ಅಭಿನಯಿಸಿ ಇಂದಿನ ಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದರು.
ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಎಸ್ ಪೂಜಾರಿಯವರು ಮಾತನಾಡಿ, ಮಹಿಳಾ ವಿಭಾಗಲ್ಲ ಅಭಿನಂದನೆ ಸಲ್ಲಿಸಿದರು. ಮುಂದೆ ”ಮಕ್ಕಳ ಉತ್ಸವ” ಮಾಡಲಿದ್ದೇವೆ. ಪರಿಸರದ ಜನರಿಂದಾಗಿ ನಮಗೆ ಸ್ಪೂರ್ತಿ ತುಂಬಿದೆ ಎಂದರು.
ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್ ಸಾಲಿಗ್ರಾಮ ಅವರು ಮಾತನಾಡಿ, ಆಷಾಢ ಹಬ್ಬವು ಸಮಯದಲ್ಲಿ ಜಡಿಮಳೆಯಾಗುತ್ತಿದ್ದು ವಿಚಿತ್ರ ದಿನವಾಗಿದ್ದು ವಿಚಿತ್ರ ಸಮಯವಾಗಿದೆ. ಹಿಂದಿನ ಕಾಲದಲ್ಲಿ ತಿನ್ನಲೂ ಸಿಗದೆ ಕಷ್ಟಕರದ ಜೀವನ ನಡೆಸುತ್ತಿದ್ದರು. ಇಂತಹ ಕಾರ್ಯಕ್ರಮದ ಮೂಲಕ ಇದು ಮುಂದಿನ ಜನಾಂಗಕ್ಕೆ ತಿಳಿಯುವಂತಾಗಬೇಕಾಗಿದೆ ಎಂದರು.
ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷರಾದ ರತ್ನ ಡಿ. ಕುಲಾಲ್ ಅವರು ಮನೆಯಲ್ಲಿ ವಿವಿಧ ರೀತಿಯ ಖ್ಯಾದ್ಯಗಳನ್ನು ತಯಾರಿಸಿ ತಂದವರ ಹೆಸರನ್ನು ವಾಚಿಸಿದ್ದು ಎಲ್ಲರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಾಟಕ ತರಬೇತಿ ಸಮಯದಲ್ಲಿ ಮಕ್ಕಳ ಭಜನಾ ಸಮಯದಲ್ಲಿ ನಿವೇಶನವನ್ನು ಒದಗಿಸಿ ಕೊಟ್ಟವರಿಗೆ ಕೃತಜ್ನತೆ ಸಲ್ಲಿಸುತ್ತಾ ನಮ್ಮಲ್ಲಿ ಒಳ್ಳೆಯ ಮನಸ್ಸಿನವರಿದ್ದಾರೆ. ಆದುದರಿಂದ ನಮಗೆ ಯಾವುದೇ ಕಾರ್ಯಕ್ರಮಕ್ಕೆ ತೊಂದರೆಯಿಲ್ಲ ಎಂದರು.
ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಇದು 2ನೇ ವರ್ಷದ ಆಷಾಢ ಹಬ್ಬ ಆಚರಣೆ. ಕಳೆದ ವರ್ಷ ಕೋರೋನಾದಿಂದಾಗಿ ಅದ್ದೂರಿಯಲ್ಲಿ ಆಚರಿಸಲಾಗಲಿಲ್ಲ. ಮಹಿಳೆಯರ ಸಹಕಾರ ಹಾಗೂ ಪ್ರೋತ್ಸಾಹ ಮರೆಯುವಂತಿಲ್ಲ. ಇಂದು ಮಲಾಡ್ ನಲ್ಲಿ ಆಟಿ ಕಳಿಂಜ ನೋಡುವಂತಾಯಿತು ಎಂದರು.
ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಂಚಾಲಕರಾದ ಪತ್ರಕರ್ತ ದಿನೇಶ್ ಕುಲಾಲ್ ಮಾತನಾಡಿ, ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಮ್ಮ ಸಮಿತಿಯ ಎಲ್ಲಾ ಕಾರ್ಯಗಳು ಸುಸಾಂಗವಾಗಿ ನಡೆಯುತ್ತಿದೆ. ನಾವು ಎಲ್ಲರಿಗೂ ಅವಕಾಶವನ್ನು ನೀಡುದರೊಂದಿಗೆ ಅವರ ಪ್ರತಿಭಾ ವಿಕಸನಕ್ಕೆ ವೇದಿಕೆಯನ್ನು ಕಲ್ಪಿಸುವ ಪ್ರಯತ್ನವನ್ನು ಮಾಡುತ್ತಿರುವೆವು ಎಂದರು.
ಮಹಿಳಾ ವಿಭಾಗದ ಸದಸ್ಯರಿಂದ ನೃತ್ಯ, ಭಾವಗೀತೆ, ಬಳಿಕ ಬಾಬಾ ಪ್ರಸಾದ್ ಅರಸ ನಿರ್ದೇಶಿಸಿದ ಕಿರು ನಾಟಕ, ಯುವ ವಿಭಾಗದ ಸದಸ್ಯರಿಂದ ನೃತ್ಯ, ಆಟಿ ಕಳಂಜೆಯ ಆಗಮನವನ್ನು ಎಲ್ಲರೂ ಭಕ್ತಿಯಿಂದ ಸ್ವಾಗತಿಸಿದರು. ಕಳಿಂಜೆಯಾಗಿ ಸುದೀಪ್ ಪೂಜಾರಿ ಮತ್ತು ಸಹಾಯಕರಾಗಿ ನವೀನ್ ಸಾಲ್ಯಾನ್ ಸಹಕರಿಸಿದರು. ಆಟಿ ಕಳಂಜೆಯ ಬಗ್ಗೆ ಸನತ್ ಪೂಜಾರಿ ತಿಳಿಸಿದರು.
ವೇದಿಕೆಯಲ್ಲಿ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷರುಗಳಾದ ಶೀಲಾ ಎಂ ಪೂಜಾರಿ, ಲಲಿತ ಎಸ್ ಗೌಡ ಉಪಸ್ಥಿತರಿದ್ದರು. ಆಶಾಡ ಹಬ್ಬದ ಬಗ್ಗೆ ಭಾರತಿ ಎಸ್ ಆಚಾರ್ಯ ಅವರು ಮಾಹಿತಿಯನ್ನು ನೀಡಿದರು. ಲಾಸ್ಯಾ ಕುಲಾಲ್ ಅವರು ಪ್ರಾರ್ಥನೆ ಮಾಡಿದರು. ಜೊತೆ ಕಾರ್ಯದರ್ಶಿ ಗೀತಾ ಜೆ. ಮೆಂಡನ್ ಕೊನೆಗೆ ಧನ್ಯವಾದ ಸಮರ್ಪಿಸಿದರು. ಶೋಭಾ ರಾವ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸದಸ್ಯರು ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳ ಸವಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಯುವ ವಿಭಾಗದ ಕಾರ್ಯದರ್ಶಿ ಸೌಮ್ಯ ಜೆ. ಮೆಂಡನ್, ಉಪಾಕಾರ್ಯಧ್ಯಕ್ಷರುಗಳಾದ ದಿವ್ಯ ಪೂಜಾರಿ ಅಮೀನ್, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ಯೋಗೇಶ್ವರಿ ಗೌಡ, ದಿನೇಶ್ ಪೂಜಾರಿ,ಸುಂದರ್ ಪೂಜಾರಿ, ಲಕ್ಷ್ಮಣ್ ರಾವ್, ಮಹಾಬಲ ಪೂಜಾರಿ, ಜಯ ಪೂಜಾರಿ, ರಾಮ ಪೂಜಾರಿ, ಈಶ್ವರ್ ಕುಲಾಲ್, ಸನತ್ ಪೂಜಾರಿ, ಶಶಿಧರ್ ಹೆಗ್ಡೆ, ಆನಂದ್ ಕೋಟ್ಯಾನ್, ಗೋಪಾಲ್ ಪೂಜಾರಿ, ಕುಮರೇಶ್ ಆಚಾರ್ಯ, ಮಹಾಬಲ ಪೂಜಾರಿ, ಸುಂದರ ಪೂಜಾರಿ, ದಿನೇಶ್ ಪೂಜಾರಿ ,ಸನತ್ ಪೂಜಾರಿ, ಉದಯ ಸಾಲ್ಯಾನ್, ನಿತ್ಯಾನಂದ ಪೂಜಾರಿ, ಸಿದ್ದರಾಮ ಗೌಡ, ಸುರೇಂದ್ರ ಆಚಾರ್ಯ , ಶೈಲೇಶ್ ಪೂಜಾರಿ, ಸೋಮನಾಥ್ ವಾಗ್ಲೆ, ಹರೀಶ್ ಪೂಜಾರಿ ಕಾರ್ನಾಡ್, ದಿನೇಶ್ ಕಾಮತ್ ,ಸದಾನಂದ ರಾವ್, ಸೂರಪ್ಪ ಕುಂದರ್, ಉಮೇಶ್ ಸಿ ಪೂಜಾರಿ, ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ / ವರದಿ : ಈಶ್ವರ ಎಂ. ಐಲ್
Comments are closed.