Mumbai

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್ | ಸತ್ಕಾರ್ಯದಿಂದ ದೇವರ ಅನುಗ್ರಹ ಪ್ರಾಪ್ತಿ: ಪ್ರವೀಣ್ ಭೋಜ ಶೆಟ್ಟಿ

Pinterest LinkedIn Tumblr

ಮುಂಬಯಿ: ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಬೆಂಗಳೂರಿನ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ಯವರು ಮಹಿಳೆಯರಿಗೆ ಮಾದರಿ. ಮುಂಬಯಿ ಬಂಟರ ಸಂಘವು ಇತರ ಬಂಟರ ಸಂಘಕ್ಕೆ ಮಾದರಿ. ಮುಂಬಯಿ ಬಂಟರ ಸಂಘದಲ್ಲಿರುವಷ್ಟು ಒಗ್ಗಟ್ಟು ಇತರ ಯಾವುದೇ ಬಂಟರ ಸಂಘದಲ್ಲಿಲ್ಲ. ಅವೆನ್ಯೂ ಹೋಟೇಲಿನ ಮಾಲಕರಾದ ರಘುರಾಮ ಶೆಟ್ಟಿಯವರು ಗುಣಮುಖರಾರಿ ಇಂದು ನಮ್ಮೊಂದಿಗಿರುವುದು ನಮ್ಮೆಲ್ಲರ ಸೌಬಾಗ್ಯ. ಅವರು ಮಾಡಿದ ಸತ್ಕಾರ್ಯ, ದಾನ ಧರ್ಮಗಳಿಂದ ದೇವರು ಅವರಿಗೆ ಅನುಗ್ರಹಿಸಿದ್ದಾರೆ, ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜಶೆಟ್ಟಿಯವರು ಎಲ್ಲರಿಗೂ ನವರಾತ್ರಿಯ ಶುಭಾಶಯಗಳನ್ನಿತ್ತರು.

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ನಿಮಿತ್ತ ಅ. 4 ರಂದು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಇವರ ನೇತೃತ್ವದಲ್ಲಿ, ಯಕ್ಷಗಾನ ತಾಳಮದ್ದಳೆ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮವು ಕಾಂದಿವಲಿ ಪೂರ್ವ ಅವೆನ್ಯೂ ಹೋಟೇಲಿನ ಸಭಾಂಗಣದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಮಕ್ಕಳ ಪ್ರಾರ್ಥನೆಯೊಂದಿಗೆ ದೇವಿಗೆ ಆರತಿ ಬೆಳಗಿಸಿದ ಬಳಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಯವರು ಸಮಾರಂಭಕ್ಕೆ ಆಗಮಿಸಿದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ನವರಾತ್ರಿಯ ಶುಭಾಶಯಗಳನ್ನು ಅರ್ಪಿಸಿದರು.

ಮುಖ್ಯ ಅತಿಥಿಯಾಗಿ ಅಗಮಿಸಿದ ಬಂಟರ ಸಂಘ ಬೆಂಗಳೂರಿನ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ಯವರು ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿಯವರಿಂದ ಗೌರವ ಸ್ವೀಕರಿಸಿ ಮಾತನಾಡುತ್ತಾ ಇಂದು ಈ ವೇದಿಕೆಯಲ್ಲಿ ನಡೆದ ಬಂಟರ ಸಂಘದ ಮಹಿಳಾ ವಿಭಾಗದ ಸದಸ್ಯರ ಯಕ್ಷಗಾನ ತಾಳಮದ್ದಳೆ, ನುರಿತ ಕಲಾವಿದರಿಗಿಂತಲೂ ಬಹಳ ಯಶಸ್ವಿಯಾಗಿ ನಡೆದಿದೆ. ಇದನ್ನು ನೋಡುವ ಒಂದು ಸುವರ್ಣವಕಾಶ ನನಗೆ ದೊರಕಿದೆ. ಮುಂಬಯಿಯ ಬಂಟರ ಸಂಘವು ಅತೀ ದೊಡ್ಡ ಬಂಟರ ಸಂಘ. ಪ್ರಾದೇಶಿಕ ಸಮಿತಿಯ ಮೂಲಕ ಸಂಘದ ಚಟುವಟಿಕೆಗಳು ಪ್ರತಿಯೊಬ್ಬರಿಗೂ ತಲಪುತ್ತಿದ್ದು ಬೆಂಗಳೂರಲ್ಲೂ ಪ್ರಾದೇಶಿಕ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ. ತುಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ನಮ್ಮ ಮಹಿಳೆಯರಿಗೆ ಇದೇ ರೀತಿ ಸಂಘದಲ್ಲಿ ಸಮಾಜ ಸೇವೆ ಮಾಡಲು ಸೂಕ್ತ ಅವಕಾಶ ಸಿಕ್ಕಲಿ ಎಂದರು.

ಸಮಿತಿಯ ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಯವರು ಮಾತನಾಡುತ್ತಾ ದೊಡ್ಡ ಮನಸ್ಸುಗಳು ತುಂಬಿದ ಈ ಸಭೆಯ ವೇದಿಕೆಯಲ್ಲಿ ಬಹಳ ಉತ್ತಮವಾಗಿ ಉತ್ಸಾಹಬರಿತವಾಗಿ ನಮ್ಮ ಮಹಿಳೆಯರು ಯಕ್ಷಗಾನ ತಾಳಮದ್ದಳೆಯನ್ನು ಪ್ರದರ್ಶಿಸಿದ್ದಾರೆ. ಇಂದು ದೇವಿಯ ದಿನ. ಸೂರ್ಯ ಚಂದ್ರರು ಬದಲಾಗಲಿಲ್ಲ ಆದರೆ ಜನರ ಮನಸ್ಸು ಬದಲಾಗುತ್ತಿದೆ. ಜನ ಸಾಮಾನ್ಯರ ಸೇವೆಯೊಂದಿಗೆ ಸಂತೋಷಕರ ಜೀವನ ನಮ್ಮೆಲ್ಲರದಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಐ. ಆರ್. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಸಲಹೆಗಾರರಾದ ಶೈಲಜಾ ಎ. ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ
ಉಪಸ್ಥಿತರಿದ್ದರು.

ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು , ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ವನಿತ ವೈ. ನೋಂಡ, ಜೊತೆ ಕೋಶಾಧಿಕಾರಿ ಸರೋಜಾ ಬಿ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕರಾದ ನಿಟ್ಟೆ ಮುದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ,ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ, ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಚಂದ್ರಿಕಾ ಶೆಟ್ಟಿ, ಪದ್ಮಾವತಿ ಶೆಟ್ಟಿ, ವಿನೋದಾ ಡಿ. ಶೆಟ್ಟಿ, ವಿನೋದಾ ಎ. ಶೆಟ್ಟಿ, ಇತರ ಪ್ರಾದೇಶಿಕ ಸಮಿತಿಗಳ ಹಾಗೂ ಉಪವಿಭಾಗಗಳ ಕಾರ್ಯಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳೂ ಮತ್ತು ಸದಸ್ಯರುಗಳು ಆಗಮಿಸಿದ್ದರು.

ಮಕ್ಕಳಿಂದ ಸ್ಲೋಕ ಬಳಿಕ ಗೌರಿ ಪ್ರಸಾದ್ ಶೆಟ್ಟಿ ಯವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಿತಿಯ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ರಘುನಾಥ ಎನ್ ಶೆಟ್ಟಿ ಕಾಂದಿವಲಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು, ಉಷಾ ಶೆಟ್ಟಿ ಸಕಹರಿಸಿದರು. ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಸರಿತಾ ಮಹೇಶ್ ಶೆಟ್ಟಿ ವಂದಿಸಿದರು.

ಕಟೀಲು ಸದಾನಂದ ಶೆಟ್ಟಿ ನಿರ್ದೇಶನದಲ್ಲಿ ಪ್ರಾದೇಶಿಕ ಸಮಿತಿಯ ಮಹಿಳಾ ಸದಸ್ಯರಿಂದ “ಅಂಬಾ ಶಪಥ” ಯಕ್ಷಗಾನ ತಾಳಮದ್ದಳೆ ಯಶಸ್ವಿಯಾಗಿ ನಡೆಯಿತು ಸಬಾಕಾರ್ಯಕ್ರಮದ ನಂತರ ನಡೆದ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಹಿರಿ ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಥಮ ಬಾರಿ ನಮ್ಮ ಪ್ರಾದೇಶಿಕ ಸಮಿತಿಯ ಮಹಿಳಾ ಸದಸ್ಯರಿಂದ ತಾಳಮದ್ದಳೆ ನಡೆದಿದ್ದು, ಎಲ್ಲಾ ಪಾತ್ರ ಗಳನ್ನು ನಿರ್ವಹಿಸಿದ ನಮ್ಮ ಮಹಿಳೆಯರು ಹೆಚ್ಚಿನವರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಿದ್ದು ತುಳು ಸಂಭಾಷಣೆಯನ್ನು ಇಂಗ್ಲಿಷ್ ನಲ್ಲಿ ಬರೆದು ಕಲಿತು ಉತ್ತಮ ಪ್ರದರ್ಶನ ನೀಡಿದ್ದು ಸ್ಲಾಘನೀಯ. ಅಭಿನಂದನೆಗಳು. ಹಿಮ್ಮೇಳನದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರೊಂದಿಗೆ, ಸೇರಿದ ಎಲ್ಲಾ ದೇವಿ ಭಕ್ತರಿಗೆ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಪರವಾಗಿ ನವರಾತ್ರಿಯ ಶುಭಾಶಯಗಳು: ಪ್ರೇಮನಾಥ ಶೆಟ್ಟಿ ಕೊಂಡಾಡಿ, ಕಾರ್ಯಧ್ಯಕ್ಷರು ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ

ವರದಿ : ಈಶ್ವರ ಎಂ. ಐಲ್

Comments are closed.