Mumbai

ಮುಂಬಯಿ | ಪ್ರಸಿದ್ಧ ಜ್ಯೋತಿಷಿ, ವಾಸ್ತು ತಜ್ಞ ಅಶೋಕ್ ಪುರೋಹಿತ್ ಅವರ ಜ್ಯೋತಿಷ್ಯ ಕೇಂದ್ರ ಉದ್ಘಾಟನೆ

Pinterest LinkedIn Tumblr

ಸರ್ವ ಸಮಾಜದಿಂದ ದೊರೆಯುತ್ತಿರುವ ಬೆಂಬಲ ನೋಡಿದರೆ ಅಶೋಕ್ ಪುರೋಹಿತರು ಸುಲಭವಾಗಿ ಸಂಸತ್ತು ಪ್ರವೇಶಿಸಬಹುದು: ಡಾ.ಸ್ತಪತಿ ಕೆ.ದಕ್ಷಿಣಾಮೂರ್ತಿ

ಮುಂಬಯಿ: ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವ ವಿಶ್ವಕರ್ಮ ಸಮಾಜಕ್ಕೆ ಸಂಸತ್ತಿನಲ್ಲಿ ಪ್ರತಿನಿಧಿಗಳ ಕೊರತೆ ಇದೆ.ಅಶೋಕ್ ಪುರೋಹಿತರಿಗೆ ಸರ್ವ ಸಮಾಜದಿಂದ ದೊರೆಯುತ್ತಿರುವ ಬೆಂಬಲ ನೋ ಡಿದರೆ ಅವರು ಸುಲಭವಾಗಿ ಸಂಸತ್ತು ಅಥವಾ ರಾಜ್ಯ ಸಭೆಗೆ ಆಯ್ಕೆಯಾಗಬಹುದೆಂದು ಭಾವಿಸುತ್ತೇನೆ.ರಾಜಕೀಯ ದಲ್ಲಿ ವಿಶ್ವಕರ್ಮ ಪ್ರತಿನಿಧಿಗಳ ಕೊರತೆಯನ್ನು ಅಶೋಕ್ ಪುರೋಹಿತ್ ರು ಸುಲಭವಾಗಿ ನೀಗಿಸಬಹುದೆಂಬ ವಿಶ್ವಾಸವಿದೆ ಎಂದು ಹೆರಿಟೇಜ್ ತಜ್ಞರ ಸಮಿತಿಯ ಸದಸ್ಯ, ಎಚ್‌ಆರ್‌ಸಿಇ, ತಮಿಳುನಾಡು ಮತ್ತು ವಾಸ್ತು ವೇದಿಕ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಸ್ತಪತಿ ಕೆ.ದಕ್ಷಿಣಾಮೂರ್ತಿ ಅವರು ನುಡಿದರು.

ಸಾಂತಾಕ್ರೂಜ್ ಪೂರ್ವ ವಕೋಲ ಕದಂವಾಡಿಯಲ್ಲಿ ನಗರದ ಪ್ರಸಿದ್ಧ ಜ್ಯೋತಿಷಿ, ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ, ಅಶೋಕ್ ಪುರೋಹಿತ್ ಅವರ ಸ್ವಂತ ನೂತನ  ಜ್ಯೋತಿಷ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ನುಡಿದರು.

ಮುಂದುವರಿದು ಮಾತನಾಡಿದ ಅವರು,”ವಿಶ್ವಕರ್ಮ ಸಮುದಾಯ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿವೆ.ಶಿಲ್ಪಿ ಮಾಡಿದ ಶಿಲ್ಪವನ್ನು ದೇವರಾಗಿಸುವುದು ಭಕ್ತರು.ಶಿಲ್ಪಿ ಬರೀ ಕಲ್ಲನ್ನು ಕೆತ್ತಿ‌ಮೂರ್ತಿ ಯಾಗುಸುವುದಷ್ಟೇ ಅಲ್ಲ.ಭಕ್ತರನ್ನು ಹರಸುವ ದೇವರೂಪವನ್ನು ಸೃಷ್ಟಿ ಸುತ್ತಾನೆ.ಇಂದಿನ ಕಾರ್ಯಕ್ರಮ ನೋಡಿದರೆ ಇದೊಂದು ಕಚೇರಿ ಉದ್ಘಾಟನೆ ಯಂತೆ ಕಾಣುತ್ತಿಲ್ಲ, ಸ್ನೇಹ ಸಮ್ಮಿಲನದಂತೆ ಕಾಣುತ್ತಿದೆ.ಎಲ್ಲಾ ಸಮುದಾಯದ,ಜಾತಿ ಧರ್ಮದ ವರು ಸೇರಿರುವುದು ಕಂಡು ಆನಂದವಾಗುತ್ತಿದೆ.ಪುರೋಹಿತರ ಮಾರ್ಗದರ್ಶನದಿಂದ ಎಲ್ಲರಿಗೂ ಒಳಿತಾಗಲಿ’ ಎಂದು ಹರಸಿ ಅಶೋಕ್‌ ಪುರೋಹಿತರನ್ನು ಅಭಿನಂದಿಸಿದರು.

ಪ್ರಾಸ್ತಾವಿಕ ವಾಗಿ ಮಾತನಾಡಿದ ಅಶೋಕ್ ಪುರೋಹಿತ್ ಅವರು ಎಲ್ಲರನ್ನೂ ಸ್ವಾಗತಿಸಿ ಅಭಿನಂದಿಸಿದರು.ತನ್ನ ಆಹ್ವಾನವನ್ನು ಸ್ವೀಕರಿಸಿ ವಿದೇಶದಿಂದ ಮತ್ತು ನಗರದ ವಿವಿಧ ಮೂಲೆಗಳಿಂದ ಆಗಮಿಸಿದ ಅತಿಥಿ‌ ಗಣ್ಯರು ಹಾಗೂ ಅಭಿಮಾನಿಗಳನ್ನು ಕಂಡು ಆನಂದ ತುಲಿತನಾಗಿದ್ದೇನೆ.ಮಹಿಳೆಯೊಬ್ಬಳು ಮನ ಮಾಡಿದರೆ ಮನೆ, ಊರು,ದೇಶವನ್ನು ಹೇಗೆ ಸುಧಾರಣೆ ಗೊಳಿಸಬಲ್ಲಳು ಎಂಬುದಕ್ಕೆ ಮೀನಾಕ್ಷಿ‌ ಶಿಂದೆ ಅವರು ಮೇಯರ್ ಆಗಿದ್ದ ಸಮಯ ಮಾಡಿದ್ದ ಸುಧಾರಣಾ ಕಾರ್ಯಗಳೇ ಉತ್ತಮ ಉದಾಹರಣೆ ಎಂದು‌ ನುಡಿದರು.ಅನುಪಸ್ಥಿತಿಯಲ್ಲಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಸಂದೇಶದ ಬಗ್ಗೆ ಪ್ರಸ್ತಾಪಿಸಿದ ಪುರೋಹಿತ್ ಅವರು, ‘ ಪಾವನ ಮೂರ್ತಿ ಅಯೋಧ್ಯೆಯ ಬಾಲ ರಾಮನನ್ನು ಕೆತ್ತಿದ ಕೈ ಇಲ್ಲಿ ಇರಬೇಕಿತ್ತು ಎಂದು ಹೇಳಿದರು.

ಗೌರವ ಅತಿಥಿಯಾಗಿ ಆಗಮಿಸಿದ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಮಾತನಾಡಿ,’ ಕಚೇರಿ ಒಂದರ ಉದ್ಘಾಟನೆ ಗೆ ಇಷ್ಟು‌ಜನ ಸೇರುತ್ತಾರೆ ಎಂದರೆ ನಂಬಲು ಅಸಾಧ್ಯ. ಜ್ಯೋತಿಷ್ಯದಲ್ಲಿ ಅಶೋಕ್ ಪುರೋಹಿತರು ಸ್ಟಾರ್ ಇದ್ದಂತೆ‌. ಜಾತಿ ಮತಭೇದವಿಲ್ಲದೆ ಅವರು‌ ನಿಖರವಾದ ಪರಿಹಾರ ಸೂಚಿಸುತ್ತಾರೆ.ಆ ಕಾರಣ ದಿಂದ ಇಷ್ಟೊಂದು ಅನುಯಾಯಿ, ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಈ ಸಭೆಯೇ ನಿದರ್ಶನ ” ಎಂದರು.

“ಪುರೋಹಿತರನ್ನು ಹಿಂದೂ ಕ್ರಿಶ್ಚಿಯನ್ ರಿಗಿಂತ ಹೆಚ್ಚಾಗಿ‌ ಗಲ್ಫ್ ರಾಷ್ಟ್ರಗಳಲ್ಲಿ ಅರೇಬಿಕ್ ಜನರೂ ಪ್ರೀತಿಸುತ್ತಾರೆ.ವರ್ಷ ಕ್ಕೆ ಮೂರ್ನಾಲ್ಕು ಬಾರಿ ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ಪುರೋಹಿತರು ಅಲ್ಲಿಯೂ ಸ್ವಂತ ಕಚೇರಿಯನ್ನು ಹೊಂದುವಂತಾಗಲಿ ಎಂದು ಸರ್ವೋತ್ತಮ ಶೆಟ್ಟಿ ಹಾಗು ಹರೀಶ್ ಶೇರಿಗಾರ್ ಅವರು ಆಶಿಸಿದರು.

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ  ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಂದು ಬೆಳಿಗ್ಗೆ 9.30 ರ ಸುಮುಹೂರ್ತದಲ್ಲಿ ಕಚೇರಿಯನ್ನು ಶಾಸ್ತ್ರೋಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿ‌ಶುಭ ಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಅಯೋಧ್ಯೆಯ  ಶ್ರೀ ರಾಮ ಲಲ್ಲಾ ಮೂರ್ತಿ ಶಿಲ್ಪಿ ಡಾ.ಅರುಣ್ ಯೋಗಿರಾಜ್ ಅವರು ಆಗಮಿಸಬೇಕಿತ್ತು.ಆದರೆ ಕಾರ್ಯ ಒತ್ತಡದಿಂದ ಕೊನೆಕ್ಷಣದಲ್ಲಿ ಬರಲಾಗದ ಬಗ್ಗೆ ತಿಳಿಸಿದರು.

ಗೌರವ ಅತಿಥಿಗಳಾಗಿ ಗುರೂಜಿ ಉಮೇಶ್ ಆಚಾರ್ಯ,   ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ,ಸರ್ವೋತ್ತಮ ಶೆಟ್ಟಿ (ಅಧ್ಯಕ್ಷ ಅಬುಧಾಬಿ ಕರ್ನಾಟಕ ಸಂಘ ಮತ್ತು  ಅಧ್ಯಕ್ಷ ಯುಎಇ ಬಂಟ್ಸ್),ಹರೀಶ್ ಶೇರಿಗಾರ್ (ಮಾಲಕರು:ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ ಕಂಪನಿ),ಶ್ರೀಮತಿ ಮೀನಾಕ್ಷಿ ಶಿಂಧೆ( ಮಾಜಿ ಮೇಯರ್ ಥಾಣೆ),ಹುರ್ಲಾಡಿ ರಘುವೀರ್ ಎ ಶೆಟ್ಟಿ ( ಸಮಾಜ ಸೇವಕ ಕರ್ನಾಟಕ/ ಮುಂಬಯಿ) , ಚಂದ್ರಶೇಖರ ಪಾಲೆತ್ತಾಡಿ( ಸಂಪಾದಕರು ಕರ್ನಾಟಕ ಮಲ್ಲ ದೈನಿಕ),ಅಣ್ಣಿ ಸಿ ಶೆಟ್ಟಿ( ಧರ್ಮ ದರ್ಶಿ: ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ),ಶ್ರೀನಿವಾಸ್ ಪಿ. ಸಾಪಲ್ಯ ( ಅಧ್ಯಕ್ಷ ರು ಸಾಫಲ್ಯ ಸೇವಾ ಸಂಘ ಮುಂಬಯಿ  ), ಡಾ.ಸುರೇಂದ್ರಕುಮಾರ್ ಹೆಗ್ಡೆ (ಅಧ್ಯಕ್ಷ ರು: ಕನ್ನಡಿಗ ಕಲಾವಿದರ ಪರಿಷತ್ ಮುಂಬಯಿ),ಶ್ರೀಮತಿ ಲಕ್ಷ್ಮಿ ಕೋಟ್ಯಾನ್(ಚೇರ್ ಪರ್ಸನ್ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ),ತೋನ್ಸೆ ವಿಜಯಕುಮಾರ್ ಶೆಟ್ಟಿ( ಕಲಾ ಜಗತ್ತು ಮುಂಬಯಿ), ಧರ್ಮದರ್ಶಿ ದೇವ್  ಪೂಜಾರಿ(ಅಸಲ್ಫ ಶ್ರೀ ದತ್ತಾತ್ರೇಯ ದುರ್ಗಾಂಬಿಕ ದೇವಸ್ಥಾನ),ಜಯೇಶ್ ಸೋಂಪುರ(ಐಟಿ ಕನ್ಸಲ್ಟೆನ್ಟ್ ಸಾಂತಾಕ್ರೂಸ್), ಸದಾನಂದ ಆಚಾರ್ಯ(ಮಾಜಿ ಅಧ್ಯಕ್ಷ ರು ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿ),ಸುರೇಶ್ ಕಾಂಚನ್(ಅಧ್ಯಕ್ಷ ರು ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ), ಉತ್ತಮ್  ಶೆಟ್ಟಿ ಗಾರ್ (ಅಧ್ಯಕ್ಷ ರು‌ ಪದ್ಮಶಾಲಿ ಸೇವಾ ಸಂಘ ಮುಂಬಯಿ),ಸೂರ್ಯಕಾಂತ ಸುವರ್ಣ (ಅಧ್ಯಕ್ಷ ಭಾರತ್ ಕೋ ಆಪರೇಟಿವ್. ಬ್ಯಾಂಕ್, ಮುಂಬೈ), ರವಿರಾಜ್ ಶೆಟ್ಟಿ( ಜನರಲ್ ಸೆಕ್ರೆಟರಿ ಯು ಎ ಇ ಬಂಟ್ಸ್),ಕೃಷ್ಣ ಶೆಟ್ಟಿಗಾರ್(ಪದ್ಮಶಾಲಿ ಸಂಘ),  ಎಲ್ ವಿ.ಅಮೀನ್ (ಮಾಜಿ ಅಧ್ಯಕ್ಷ ರು ಬಿಲ್ಲವರ ಅಸೋಸಿಯೇಷನ್ ಮುಂಬಯಿ),ಜಯಕೃಷ್ಣ ಶೆಟ್ಟಿ(ಸಂಸ್ಥಾಪಕರು ಜಯಕೃಷ್ನ ಪರಿಸರ ಪ್ರೇಮಿ ಸಮಿತಿ ), ನವೀನ್ ಪಡು ಇನ್ನ (ಸ್ಥಾಪಕ ಅಧ್ಯಕ್ಷ ಕಮಲ ಕಲಾ ವೇದಿಕೆ),  ಶ್ಯಾಮ ಎನ್ ಶೆಟ್ಟಿ , (ಸಮಾಜ ಸೇವಕ, ),ನಾಗ್ವಾನ್, ರಮೇಶ್ ಸಾವಂತ್, ಕರ್ನೂರು ಮೋಹನ್ ರೈ,ಕದ್ರಿ ಸುರೇಶ್ ಕುಮಾರ್ , ದಾಮೋದರ ಆಚಾರ್ಯ, ಸುರೇಶ್ ಕೆ., ಜಯಂತಿ ಉಳ್ಳಾಲ್ ಇವರುಗಳು ಆಗಮಿಸಿದ್ದಾರೆ.

ಅಂದು ಸಂಜೆ 5.30 ರಿಂದ 6.00 ರವರೆಗೆ ಅತಿಥಿಗಳ ಮೆರವಣಿಗೆ ನಡೆದು ನಂತರ ಸಾಂಕೇತಿಕವಾಗಿ ಕಚೇರಿಯನ್ನು ಉದ್ಘಾಟಿಸಲಾಯಿತು. ಆ ಬಳಿಕ  ಅತಿಥಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಡಾ.ದಕ್ಷಿಣಾ ಮೂರ್ತಿಯವರನ್ನು ಅಶೋಕ್ ಪುರೋಹಿತ್ ದಂಪತಿ ಹಾಗೂ ಗೌರವ ಅತಿಥಿಗಳು ವಿಶೇಷವಾಗಿ ಗೌರವಿಸಿದರು.

ಅಶೋಕ್ ‌ಪುರೋಹಿತ್ ದಂಪತಿಯನ್ನು ಕಮಲ ಕಲಾವೇದಿಕೆಯ ನವೀನ್ ಪಡು ಇನ್ನ ಹಾಗೂ ಅಭಿಮಾನಿಗಳು ಗೌರವಿಸಿದರು.ಅಮೂಲ್ಯ ಆಚಾರ್ಯ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಆರಂಭದಲ್ಲಿ ರಾಘವೇಂದ್ರ ಭಟ್ ಅವರಿಂದ ಪ್ರಾರ್ಥನೆ, ಚೇತನ್ ಪುರೋಹಿತ್ ರಿಂದ ವೇದಘೋಷ,ಸಂಧ್ಯಾ ಚೇತನ್ ರಿಂದ ಗಣೇಶ ಸ್ತುತಿ ನಡೆಯಿತು. ಚಿನ್ಮಯ್ ಹಾಗು ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲೊಬ್ಬರಾಗಿ ಆಗಮಿಸಬೇಕಿದ್ದ ಪ್ರಸಿದ್ಧ ಶಿಲ್ಪಿ ಡಾ.ಅರುಣ್ ಯೋಗಿರಾಜ್  ಕೊನೆಕ್ಷಣದಲ್ಲಿ ಕಾರ್ಯದ ಒತ್ತಡದಿಂದಾಗಿ ಗೈರುಹಾಜರಾಗಿದ್ದರು.

ಕಾರ್ಯಕ್ರಮದ ಆಯೋಜಕರಾದ ಅಶೋಕ್ ಪುರೋಹಿತ್ ಕೆಲವು ತಿಂಗಳ ಹಿಂದೆಯೇ ಅವರ ಬರುವಿಕೆಯನ್ನು‌ ಖಾತ್ರಿ ಪಡಿಸಿಕೊಂಡಿದ್ದರು.ಅಶೋಕ್ ಪುರೋಹಿತರಂತೆ ಮುಂಬಯಿ‌ ಅಭಿಮಾನಿಗಳು ಅರುಣ್ ಯೋಗಿರಾಜ್ ಅವರ ಭೇಟಿಗೆ ಉತ್ಸುಕರಾಗಿದ್ದರು. ಆದರೆ ತುರ್ತು ಶಿಲ್ಪಕಾರ್ಯ ಒಂದರ ಪೂರ್ಣ ಗೊಳಿಸುವಿಕೆಯ ಒತ್ತಡದಲ್ಲಿರುವುದರಿಂದ ಅವರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ.

ಈ ಬಗ್ಗೆ ವಿಡಿಯೋ ಸಂದೇಶ ಒಂದನ್ನು‌ ಕಳುಹಿಸಿರುವ ಯೋಗಿರಾಜ್ ಅವರು ಆ ಮೂಲಕ ಆಯೋಜಕರು ಮತ್ತು ಮುಂಬಯಿ‌ ಅಭಿಮಾನಿಗಳ ಅಶೋಕ್ ಪುರೋಹಿತರ ಈ ವಿದ್ಯೆಯಿಂದ ಮುಂಬಯಿ ತುಳುಕನ್ನಡಿಗರ ಕಷ್ಟಗಳಿಗೆ ಪರಿಹಾರ ದೊರೆಯುವಂತಾಗಲಿ, ವಿಜ್ಞಾನ ಆಧಾರಿತ ಜ್ಯೋತಿಷ್ಯ ದಿಂದ ಸಿಗುವ ಪರಿಹಾರವು ನಿಖರವಾಗಿರುತ್ತದೆ.ಆ ರೀತಿಯ ಮಾರ್ಗದರ್ಶನ ತಮ್ಮಿಂದ ಸಿಗುವಂತಾಗಲಿ ಎಂದಿರುವ ಅವರು   ಕಾರ್ಯಕ್ರಮ ಕ್ಕೆ ಶುಭ ಕೋರಿದ್ದು‌ ಮುಂದೆ ಮುಂಬಯಿಗೆ ಬಂದಾಗ ಜ್ಯೋತಿಷ್ಯಾಲಯಕ್ಕೆ ಭೇಟಿ ನೀಡುವುದಾಗಿ‌ ಭರವಸೆ ನೀಡಿದ್ದಾರೆ.

ಜೋತಿಷ್ಯವು ಜನರಿಗೆ ದಾರಿ ದೀಪಕದಂತೆ: ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ
‘ಕತ್ತಲೆಯಲ್ಲಿ ದೀಪ ತೋರಿಸುವ ಶಾಸ್ತ್ರ ಅದು ಜ್ಯೋತಿಷ್ಯ ಶಾಸ್ತ್ರ. ಜೋತಿಷ್ಯವು ಜನರಿಗೆ ದಾರಿ ದೀಪಕದಂತೆ. ಜಗತ್ತೇ ಜ್ಯೋತಿಷ್ಯದ ಆಧಾರದ ಮೇಲೆ ಸಾಗುತ್ತಿದೆ’ ಎಂದು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ನುಡಿದರು. ಅಶೋಕ್ ಪುರೋಹಿತರ ಜ್ಯೋತಿಷ್ಯಾಲಯವನ್ನು ಬೆಳಿಗ್ಗೆ ಶಾಸ್ರೋಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾಶಂಸನೆಗೈದರು. ಮುಂದುವರಿದು ಮಾತನಾಡಿದ ಅವರು ‘ವಾಸ್ತು ಶಾಸ್ತ್ರ ಸಹಿತ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ ಪ್ರಪಂಚದಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಅಶೋಕ್‌ ಪುರೋಹಿತರಿಗೆ ಅಭಿನಂದನೆಗಳು. ನಮ್ಮದು ಇಪ್ಪತ್ತೈದು ವರ್ಷಗಳ ಸಂಬಂಧ. ನನ್ನ ಮೇಲೆ ಅಚಲವಾದ ನಂಬಿಕೆ, ಗುರುಭಕ್ತಿಯನ್ನು ಇಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರೂ ನಡುವೆ ಬಿಡುವಿನ ವೇಳೆ ಬಂದು ಸ್ನೇಹದ ಸಂಕೇತವಾಗಿ ದೀಪ ಬೆಳಗಿಸಿ ಶುಭಹಾರೈಸುತ್ತಿದ್ದೇನೆ. ಅವರಿಗೆ ನಾಗ ದೇವರು, ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರ ಸಂಪೂರ್ಣ ದಯೆ ಇರಲಿ, ಅವರಿಂದ ಸಮಾಜದ ನೊಂದ ಜನರಿಗೂ ಸಹಾಯವಾಗಲಿ’ ಎಂದು ಶುಭ ಹಾರೈಸಿದರು.

(ವರದಿ: ಏಳಿಂಜೆ ನಾಗೇಶ್)

Comments are closed.