ಸ್ಥಳೀಯ ಸಮಿತಿಯಿಂದ ಯುವ ಜನಾಂಗಕ್ಕೆ ಸ್ಪೂರ್ತಿ: ರಘು ಎ. ಮೂಲ್ಯ ಪಾದೆಬೆಟ್ಟು
ಮುಂಬಯಿ: ಸಮಾಜದ ಯುವ ಸದಸ್ಯರು ಸಮಾಜದ ಹಿರಿಯರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಾರ್ಯನಿರತರಾಗಿದ್ದಾರೆ. ಇದೇ ರೀತಿ ನಮ್ಮ ಯುವ ಸದಸ್ಯರು ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸುವಂತಾಗಲಿ. ಇದರಿಂದ ಸಂಘವು ಇನ್ನಷ್ಟು ಬಲಿಷ್ಥ ವಾಗುವುದು ಎಂದು ಕುಲಾಲ ಸಂಘ ಮುಂಬಯಿ ಯ ಅಧಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ನುಡಿದರು.
ಜ. 5ರಂದು ಗೋರೆಗಾಂವ್ ಪೂರ್ವದ ಜಯಪ್ರಕಾಶ್ ನಗರದ ನಂದಾದೀಪ ವಿದ್ಯಾಲಯದ ಸಭಾಗೃಹದಲ್ಲಿ ಚರ್ಚ್ ಗೇಟ್ – ದಹಿಸರ್ ಸಮಿತಿ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್ ಇವರ ಉಪಸ್ಥಿತಿಯಲ್ಲಿ ಜರಗಿದ ಸಂಘದ ಸ್ಥಳೀಯ ಸಮಿತಿಯ 8 ನೇ ವಾರ್ಷಿಕ ಸ್ನೇಹ ಮಿಲನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮಂಗಳೂರಿನ ಕುಲಾಲ ಭವನದ ಕಾರ್ಯವು ಅಂತಿಮ ಹಂತದಲ್ಲಿದ್ದು ಮೇ ತಿಂಗಳಲ್ಲಿ ಲೋಕಾರ್ಪಣೆ ಮಾಡಬೇಕಾಗಿದ್ದು ಎಲ್ಲರು ಸಹಕರಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಪ್ರತಿಯೊಂದು ಕಾರ್ಯದಲ್ಲಿ ಬಾಗವಹಿಸಿ ಸಂಘದ ಎಲ್ಲಾ ಕಾರ್ಯಕರ್ತರೊಂದಿಗೆ ಕೈಜೋಡಿಸಿ ಕುಲಾಲ ಸಂಘವನ್ನು ಇನ್ನೂ ಉನ್ನತ ಮಟ್ಟಕ್ಕೇರಿಸಬೇಕು ಎಂದರು.
ಸಂತಾಕ್ರೂಸ್ ಶ್ರೀ ಮಂತ್ರದೇವಿ ಮಂದಿರದ ಧರ್ಮದರ್ಶಿ ವಾಸುದೇವ ಬಂಜನ್ ಇವರು ಆಶೀರ್ವಚನ ನೀಡುತ್ತಾ ನಮ್ಮೆಲ್ಲರನ್ನೂ ಒಟ್ಟುಗೂಡಿಸಿ ಇಂತಹ ದೊಡ್ಡ ಕಾರ್ಯಕ್ರಮವನ್ನು ನಡೆಸುತ್ತಿರುವುದು ನಮಗೆಲ್ಲರಿಗೂ ಇಂದು ಸೌಭಾಗ್ಯದ ದಿನ. ಪರ್ವ ಕಾಲದಲ್ಲಿ ನಡೆಯುತ್ತಿರುವ ಈ ಸಮಾರಂಭಕ್ಕೆ ನಮ್ಮೆಲ್ಲರನ್ನೂ ಒಗ್ಗೂಡಿಸಿದ್ದು, ಮುಂದೆಯೂ ನಾವೆಲ್ಲರೂ ಇದೇ ರೀತಿ ಒಗ್ಗಟ್ಟಿನಿಂದ ಉತ್ತಮ ಕಾರ್ಯ ಮಾಡಿ ನಮ್ಮ ಶರೀರಕ್ಕೆ ಬೆಲೆ ನೀಡೋಣ. ಜಾಗತಿಕ ಮಟ್ಟದಲ್ಲಿ ನಮ್ಮ ಸಂಘವನ್ನು ಗುರುತಿಸುವಂತಾಗಲಿ ಎಂದರು.
ಗೌರವ ಅತಿಥಿಗಳಾಗಿ ಕರ್ನಾಟಕ ಸಮಾಜ ಸೂರತ್ ಇದರ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕೆ, ಜೈದೀಪ್ ಕನ್ಸ್ಟ್ರಕ್ಷನ್ ಅಂಬರ್ ನಾಥ್ ಇದರ ಮಾಲಕರಾದ ಜಗದೀಶ್ ಆರ್ ಭಂಜನ್, ಸಮಾಜ ಸೇವಕಿ ಶ್ರೀಮತಿ ಕುಸುಮ ಎಂ ಬಂಜನ್ , ಜ್ಯೋತಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ದೇವದಾಸ್ ಬಂಜನ್, ಸಾಯಿದೀಪ್ ಅಸೋಸಿಯೇಟ್ಸ್ ನ ಯೋಗೇಶ್ ಕುಮಾರ್ ಮೂಲ್ಯ, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಇರಾನಿ ಕೋಲನಿ ಮಲಾಡ್ ಅಧ್ಯಕ್ಷರಾದ ಮೋಹನ್ ಜಿ ಬಂಗೇರ, ನಿತ್ಯಾನಂದ ಡೈಸ್ ನ ಶ್ರೀಧರ ಮೂಲ್ಯ , ಉದ್ಯಮಿ ಮಾಲಕ ಪ್ರಸಾದ್ ಮೂಲ್ಯ ಆಗಮಿಸಿದ್ದರು.
ಕುಲಾಲ ಸಂಘ ಮುಂಬಯಿ ಚರ್ಚ್ ಗೇಟ್ – ದಹಿಸರ್ ಸಮಿತಿ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್ ಸ್ವಾಗತಿಸುತ್ತಾ ನಮ್ಮ ಸಂಘವು ಶೈಕ್ಷಣಿಕ ಸಾಮಾಜಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾನಗರದಲ್ಲಿ ಸಮಾಜ ಬಾಂಧವರಿಗೆ ಸ್ಪಂದಿಸುತ್ತಿದ್ದು ಮಹಾನರಗದಲ್ಲಿ ಇಂದು ಎಲ್ಲರೂ ಗುರುತಿಸುವಂತಾಗಿದೆ. ನಮಗೆ ಬೆನ್ನೆಲುಬುನಂತಿರುವ ಸುನಿಲ್ ಸಾಲ್ಯಾನ್ ಅವರ ಅನುಪಸ್ಥಿತಿ ಇದ್ದರೂ ಅವರ ಪ್ರೋತ್ಸಾಹ ಎಂದೂ ಮರೆಯುವಂತಿಲ್ಲ ಎಂದರು.
ಸಂಘದ ಸಮಿತಿಯ ಮಾಜಿ ಸದಸ್ಯ ದಿ. ಸದಾನಂದ್ ಜೆ ಪಿಲಾರ್ ಇವರ ಪತ್ನಿ ಶ್ರೀಮತಿ ಸುಂದರಿ ಪಿಲಾರ್, ಸಮಾಜ ಸೇವಕ ನಾರಾಯಣ್ ಸಾಲಿಯಾನ್ ದಂಪತಿ, ಯುವ ಮುಂದಾಳು ಹರೀಶ್ ಕೆ ಬಂಗೇರ ದಂಪತಿ, ಇವರನ್ನು ಸನ್ಮಾನಿಸಲಾಗಿದ್ದು ಶ್ರೀಮತಿ ಕಸ್ತೂರಿ ಅಶೋಕ್ ಸಾಲ್ಯಾನ್, ಕೃಪಾ ಜಗದೀಶ್ ಮೂಲ್ಯ, ದಿಶಾ ಕರ್ಕೇರ, ಇವರು ಸನ್ಮಾನ ಪತ್ರವನ್ನು ವಾಚಿಸಿದರು.
ಮೇಕಪ್ ಡಿಸೈನರ್ ಚಿದಾನಂದ್ ಕುಲಾಲ್ , ಕ್ರೀಡಾಪಟುಗಳಾದ ಕು. ದೈಯಿತಾ ಹರೀಶ್ ಬಂಗೇರ ಮತ್ತು ಕು. ದೃಶಿಕಾ ಸತೀಷ್ ಬಂಗೇರ ಇವರನ್ನು ಗೌರವಿಸಲಾಗಿದ್ದು ಕೃತಿ ಸಾಲ್ಯಾನ್, ಸುಮಿತ್ ಸಾಲ್ಯಾನ್ ಮತ್ತು ಸಾಕ್ಷಿ ಸಾಲ್ಯಾನ್ ಇವರು ಅಭಿನಂದನಾ ಪತ್ರವನ್ನು ವಾಚಿಸಿದರು. ಸಮಾಜದ ಮಕ್ಕಳಿಗೆ ಶೈಕ್ಷಣಿಕ ಸಹಾಯ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಕ್ಕಳ ಯಾದಿಯನ್ನು ರತ್ನ ಡಿ.ಕುಲಾಲ್, ಆರತಿ ಕೆ.ಸಾಲಿಯಾನ್, ಭಾರತಿ ಪಿ. ಅರ್ಕ್ಯಾನ್ ವಾಚಿಸಿದರು.
ಸಂಘದ ಗೌರವಾಧ್ಯಕ್ಷ ಪಿ. ದೇವದಾಸ ಎಲ್ ಕುಲಾಲ್, ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ ಸಾಲ್ಯಾನ್, ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ , ದೊಡ್ಡಯ್ಯ ಮೂಲ್ಯ ಪುನಾ, ಜ್ಯೋತಿ ಕ್ರೆಡಿಟ್ ಸೊಸೈಟಿ ಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್, ಅಮೂಲ್ಯ ಸಂಪಾದಕ ಆನಂದ ಮೂಲ್ಯ, ಸಿ ಎಸ್ ಟಿ ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಬಂಗೇರ, ಮೀರಾರೋಡ್ ವಿರಾರ್ ನ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ ಮೂಲ್ಯ, ಠಾಣಾ ಕಸಾರ ಕರ್ಜರ್ ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ. ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಅರುಣ್ ಡಿ ಬಂಗೇರ , ಕಾರ್ಯದರ್ಶಿ ಸತೀಶ್ ಬಿ ಬಂಗೇರ, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಆಶಾಲತಾ ಎಸ್ ಮೂಲ್ಯ, ಉಪಕಾರ್ಯಧ್ಯಕ್ಷೆ ರತ್ನ ಡಿ.ಕುಲಾಲ್ , ಕಾರ್ಯದರ್ಶಿ ಆರತಿ ಕೆ.ಸಾಲಿಯಾನ್ , ಕೋಶಾಧಿಕಾರಿ ಭಾರತಿ ಪಿ. ಅರ್ಕ್ಯಾನ್ ಮೊದಲಾದವರು ವೇದಿಕೆಯಲ್ಲಿದ್ದ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ಅವರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಶ್ರೀಮತಿ ಜಯಂತಿ ಪ್ರಾರ್ಥನೆ್ ಮಾಡಿದರು. ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಅರುಣ್ ಡಿ ಬಂಗೇರ ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತರು. ಸಮಿತಿಯ ಸದಸ್ಯರು ಮತ್ತು ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಗಮಿಸಿದ ಮುಂಬಯಿ ಬಾಜಪ ಕಾರ್ಯದರ್ಶಿ ಮೋಹನ್ ಗೌಡ ಸಮಾರಂಭಕ್ಕೆ ಶುಭ ಕೋರಿದರು. ಕಾರ್ಯಕ್ರಮವನ್ನು ಕುಮಾರಿ ದುರ್ಗಾ ಬಂಗೇರ ಮತ್ತು ಅನ್ವಿತ್ ಕುಲಾಲ್ ನಿರ್ವಹಿಸಿದ್ದು ಪತ್ರಕರ್ತ ಬಿ. ದಿನೇಶ್ ಕುಲಾಲ್ ಸಹಕರಿಸಿದರು.
BOX
===
ಸಂಘದ ಸ್ಥಾಪಕರು ಮತ್ತು ಗುರು ಹಿರಿಯರ ಆಶೀರ್ವಾದ ಹಾಗೂ ದೇವರ ಆಶ್ರೀರ್ವಾದದಿಂದ ಸಂಘದ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿದೆ. ಇದೇ ರೀತಿ ನಾವೆಲ್ಲರೂ ಪ್ರೀತಿ ಒಗ್ಗಟ್ಟಿನಿಂದ ಇದ್ದು ಮಂಗಳೂರಿನ ಕುಲಾಲ ಭವನವನ್ನು ಆದಷ್ಟು ಬೇಗ ಲೋಕಾರ್ಪಣೆ ಮಾಡೋಣ.
– ಪಿ. ದೇವದಾಸ ಎಲ್ ಕುಲಾಲ್, ಗೌರವ ಅಧ್ಯಕ್ಷ, ಕುಲಾಲ ಸಂಘ ಮುಂಬಯಿ
====
ಸಮಿತಿಯ ಕಾರ್ಯಕ್ರಮವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದು, ಯುವಕರು ಹಿರಿಯರೊಂದಿಗೆ ರಾತ್ರಿ ಹಗಲು ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂದು ನಮ್ಮ ಯುವ ಜನಾಂಗವು ಕ್ರೀಡಾ ಕ್ಷೇತ್ರವೂ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಗಳಿಸುತ್ತಿದ್ದು ನಮ್ಮ ಸಂಘವು ದಾನಿಗಳ ಸಹಾಯದಿಂದ ಎಲ್ಲಾ ಸಾಧಕರನ್ನು ಪ್ರೋತ್ಸಾಹಿಸುತ್ತಿದೆ. ಅಭಿನಂದನೆಗಳು.
– ಕರುಣಾಕರ ಬಿ ಸಾಲ್ಯಾನ್, ಗೌ. ಪ್ರಧಾನ ಕಾರ್ಯದರ್ಶಿ ಕುಲಾಲ ಸಂಘ ಮುಂಬಯಿ
====
ಸ್ಥಳೀಯ ಸಮಿತಿಯ 8 ನೇ ವಾರ್ಷಿಕ ಸ್ನೇಹ ಮಿಲನವನ್ನು ಬಹಳ ಯಶಸ್ವಿಯಾಗಿ ನಡೆಸುತ್ತಿದ್ದು ಕಾರ್ಯಾಧ್ಯಕ್ಷರಾದ ಆನಂದ ಕೆ. ಕುಲಾಲ್ ಅವರಿಗೆ ಅಭಿನಂದನೆಗಳು. ನಮ್ಮ ಸಮಾಜದ ಮಕ್ಕಳು ಬಹುಮುಖ ಪ್ರತಿಭೆಯನ್ನು ಹೊಂದಿದ್ದು ನಾವೆಲ್ಲರೂ ನಮ್ಮ ಯುವ ಜನಾಂಗವನ್ನು ಪ್ರೋತ್ಸಾಹಿಸೋಣ
– ಸುಚಿತಾ ಡಿ. ಬಂಜನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಕುಲಾಲ ಸಂಘ ಮುಂಬಯಿ
====
ಸನ್ಮಾನಿತರ ನುಡಿ :
ನನ್ನ ಸಾಧನೆಯ ಹಿಂದೆ ದೊಡ್ಡ ತಂಡವೇ ಇದೆ. ಒಬ್ಬನಿಂದ ಎಲ್ಲವೂ ಸಾಧ್ಯವಿಲ್ಲ. ಆದುದರಿಂದ ನನಗೆ ಪ್ರೋತ್ಸಾಹಿಸಿದ ಎಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಿರುವೆನು. ಸಂಘದ ಭವಿಷ್ಯದ ಜವಾಬ್ಧಾರಿಯು ಯುವ ಜನಾಂಗಕ್ಕಿದೆ. ಸನ್ಮಾನಿಸಿದಕ್ಕೆ ಕೃತಜ್ಣತೆಗಳು.
-ಹರೀಶ್ ಕೆ ಬಂಗೇರ,
==
ನಮ್ಮ ಸಂಘವು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ. ಇದೆ ರೀತಿ ಸಂಘವು ಕಾರ್ಯ ನಿರ್ವಹಿಸುತ್ತಿರಲಿ ಎಂದು ಶುಭ ಹಾರೈಸುತ್ತಿರುವೆನು.
– ನಾರಾಯಣ್ ಸಾಲಿಯಾನ್,
==
ನನ್ನ ಸಣ್ಣ ಕಾರ್ಯವನ್ನು ಗುರುತಿಸಿ ಗೌರವಿಸಿದಕ್ಕೆ ಕುಲಾಲ ಸಂಘಕ್ಕೆ ಅಭಿನಂದನೆಗಳು. ಮುಂಬಯಿಗೆ ಬಂದ ಸಂದರ್ಭದಲ್ಲಿ ನನಗೆ ಸಮಾಜದಲ್ಲಿ ಬೆರೆತು ಬಾಳಲು ಮುಜುಗರವಿತ್ತು. ನಂತರ ಸಂಘಕ್ಕೆ ಬಂದು ಈಗ ಒಂದು ಪರಿವಾರದಂತೆ ಇದ್ದೇನೆ. ಯಾವುದೇ ಕೆಲಸ ಸಣ್ಣದು ಯಾ ದೊಡ್ಡದು ಅಲ್ಲ. ಎಲ್ಲಾ ಕ್ಶ್ವೇತ್ರವು ಸಾಧನೆಗೆ ಅರ್ಹವಾಗಿದೆ.
– ಚಿದಾನಂದ್ ಕುಲಾಲ್ ,
=====
ವರದಿ : ಈಶ್ವರ ಎಂ. ಐಲ್
Comments are closed.