ಮುಂಬಯಿ: ನನ್ನ ಜೀವನ ಯಶಸ್ಸಿಯಲ್ಲಿ ಪ್ರಥಮ ಹೆಜ್ಜೆಯನ್ನು ಇಡಲು ಕಾರಣ ನಮ್ಮ ದೇವಾಡಿಗ ಸಂಘ ಮುಂಬೈ. ನನ್ನ ಯಶಸ್ಸಿಗೆ ಅವಕಾಶ ನೀಡಿದ ಸಂಘ ಮುಂಬೈ ದೇವಾಡಿಗ ಸಂಘ. ಆಗ ನನಗೆ ವಿದ್ಯಾರ್ಥಿವೇತನ ಸಿಕ್ಕಿದ ಕಾರಣ ಶಿಕ್ಷಣವನ್ನು ಮುಂದುವರಿಸಿ ರಾಜ್ಯದಬಮುಖ್ಯಮಂತ್ರಿಯಾದೆ. ಈ ಸಂಘದ ಋಣವನ್ನು ತೀರಿಸಲು ನನಗೆ ಎಂದಿಗೂ ಸಾಧ್ಯವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಾ. ವೀರಪ್ಪ ಮೊಯಿಲಿ ಹೇಳಿದರು.
ಅವರು ದೇವಾಡಿಗ ಸಂಘ ಮುಂಬಯಿಯು ಶತಮಾನೋತ್ಸವವನ್ನು ಅಂಗವಾಗಿ ಏಪ್ರಿಲ್ 5 ಮತ್ತು 6ರಂದು ನಡೆಯುವ ಎರಡು ದಿನಗಳ ಕಾರ್ಯಕ್ರಮದ ಆರಂಭದ ಮೊದಲ ದಿನವಾದ ಏಪ್ರಿಲ್ 5ರಂದು ಬೆಳಿಗ್ಗೆ ನವಿ ಮುಂಬಯಿಯ ನೆರುಲ್ ನ ದೇವಾಡಿಗ ಭವನದಲ್ಲಿ ಜರಗಿದ ಸಮಾಜದ ಸಾಧಕರಿಗೆ ಹಾಗೂ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾನು ಈ ಸಂಘದ ಪ್ರತಿಯೊಂದು ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ. ಮುಂಬೈಯ ಸಂಘದಿಂದಲೇ ನನಗೆ ರಾಜಕೀಯದಲ್ಲಿ ಭಾಷಣ ಮಾಡುವಂತಹ ಇಚ್ಛಾಶಕ್ತಿ ಕೂಡ ದೊರಕಿದೆ. ನನಗೆ ಇಲ್ಲಿನ ಹಲವಾರು ಗಣ್ಯರು ಹಿರಿಯರು ಸಹಕರಿಸಿದ್ದು ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ಒಬ್ಬರ ಯಶಸ್ಸಿನ ಹಿಂದೆ ಸಮಾಜದ ಬೆಂಬಲ ಖಂಡಿತ ಇರಲಿದೆ. ಯಶಸ್ಸಿಗೆ ಸಮಾಜದವರ, ಹೊರಗಿನವರ ಸಹಕಾರ ಪ್ರೋತ್ಸಾಹಿಸಬೇಕು. ಧೈರ್ಯವಿದ್ದಲ್ಲಿ ಸಾಧನೆ ಮಾಡಲು ಸಾಧ್ಯ. ಇದು ನಾನು ಮುಂದಿನ ಜನಾಂಗಕ್ಕೆ ನೀಡುವ ಸಂದೇಶ. ನಮ್ಮ ಸಮಾಜದಲ್ಲಿ ಸರಸ್ವತಿ ಉಳಿದಿದೆ. ಅದನ್ನು ಉಳಿಸಬೇಕಾದದು ನಮ್ಮ ಮುಂದಿನ ಜನಾಂಗದ ಕೆಲಸವಾಗಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಪರಂಪರೆ ಇದೆ ಇತಿಹಾಸವಿದೆ. ಯಾವುದೇ ಕಾರ್ಯಕ್ರಮಕ್ಕೆ ಮಂಗಳವಾದ್ಯ ನಡೆಯಬೇಕಿದ್ದರೆ ಅದು ದೇವಾಡಿಗ ಸಮಾಜದವರಿಂದ ಮಾತ್ರವಾಗಿದೆ. ಮೂರು ಮಹಾ ಕಾವ್ಯಗಳನ್ನು ಬರೆದವರಿದ್ದರೆ ಅದು ದೇವಾಡಿಗ ಸಮಾಜದ ವೀರಪ್ಪ ಮೊಯ್ಲಿ ಎನ್ನುವ ಅಭಿಮಾನದ ಮಾತು ನನ್ನ ಇಚ್ಛಾಶಕ್ತಿಯನ್ನು ವೃದ್ಧಿಸಿದೆ ಇದೀಗ ವಿಶ್ವಸಂಸ್ಕೃತಿಯ ಮಹಾ ಯಾನ ಎಂಬ ಕಾವ್ಯವನ್ನು ಬರೆಯುತ್ತಿದ್ದೇನೆ. ಮುಂಬೈಯ ದೇವಾಡಿಗ ಸಂಘ ಸಮಾಜವನ್ನು ಬಲಿತುಕೊಳ್ಳುವಿಸವಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡಲಿ ನೂರು ವರ್ಷದ ಈ ಸವಿನೆನಪು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿ ಎಂದು ನುಡಿದರು.
ಶತಮಾನೋತ್ಸವ ಆಚರಣೆ ಸಮಿತಿಯ ಕಾರ್ಯಾಧ್ಯಕ್ಷ, ವಿಶ್ವ ದೇವಾಡಿಗ ಸಂಘದ ಅಧ್ಯಕ್ಷ ಧರ್ಮಪಾಲ್ ಯು ದೇವಾಡಿಗ ಅವರು ಮಾತನಾಡಿ, 1925ರಲ್ಲಿ ಮುಂಬೈಗೆ ಆಗಮಿಸಿದ ನಮ್ಮ ಹಿರಿಯರು ದೇವಾಡಿಗ ಸಮಾಜವನ್ನು ಸ್ಥಾಪಿಸುವ ಕನಸ್ಸನ್ನು ನನಸಾಗಿಸಿದ್ದು, ಆಗಿನ ನಮ್ಮ ಹಿರಿಯರು ಬಹಳ ಕಷ್ಟಪಟ್ಟು ಇಲ್ಲಿ ದುಡಿದಿದ್ದಾರೆ. ನಮ್ಮ ಊರಿನಿಂದ ಬರುವ ನಮ್ಮ ಸಮಾಜ ಬಾಂಧವರಿಗೆ ಇರಲು, ಕೂಡ ಒಂದು ಸ್ಥಳ ಬೇಕು ಎಂಬ ಉದ್ದೇಶದಿಂದ ಕೂಡಾ ದೇವಾಡಿಗ ಸುಧಾರಕ ಸಂಘವನ್ನು ಅಂದು ಸ್ಥಾಪಿಸಿದರು. ಬ್ರಿಟಿಷರ ಕಾಲದಲ್ಲಿ ನಮ್ಮ ಸಮಾಜದ ಹಿರಿಯರು ಈ ಸಂಘಟನೆ ಸ್ಥಾಪಿಸಿದ್ದು ನಿಜಕ್ಕೂ ಅಭಿನಂದನಾರ್ಹ. ಸಂಘ ಸ್ಥಾಪನೆಯಾದ ನಂತರ ಅದನ್ನು ಉತ್ತಮ ರೀತಿಯಲ್ಲಿ ನಮ್ಮ ಹಿರಿಯರು ಮುಂದುವರಿಸಿದ್ದು ಇದು ನಮ್ಮೆಲ್ಲರ ಸೌಭಾಗ್ಯ. ಮುಂದೆ ಸಂಘವು ಕೆಲವು ಉಪಸಮತಿಗಳನ್ನು ಹಾಗೂ ಮಹಿಳಾ ವಿಭಾಗವನ್ನು ಸ್ಥಾಪಿಸಿ ಸದಸ್ಯರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದೇವೆ. ವೀರಪ್ಪ ಮೊಯ್ಲಿ ಅಂತ ಮಹಾನ್ ವ್ಯಕ್ತಿಗಳು ನಮ್ಮ ಸಂಘವನ್ನು ಯಾವತ್ತು ಮರೆತಿಲ್ಲ. ಅದೇ ರೀತಿ ಸಂಘದಲ್ಲಿ ಅಧ್ಯಕ್ಷರಾಗಿ ದುಡಿದ ಎಲ್ಲರೂ ಅರ್ಥಪೂರ್ಣವಾಗಿ ತಮ್ಮ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಅದೇ ರೀತಿ ನಮ್ಮ ಯುವ ಜನಾಂಗವೂ ಸಂಘದಲ್ಲಿ ಕ್ರೀಯಾಶೀಲರಾಗಿದ್ದು ಅವರೆಲ್ಲರಿಗೂ ಅಭಿನಂದನೆ ಎಂದರು.
ಈ ಸಂದರ್ಭದಲ್ಲಿ ಧರ್ಮಪಾಲ್ ದೇವಾಡಿಗ ಅವರು ಡಾ. ವೀರಪ್ಪ ಮೊಯ್ಲಿ ಅವರನ್ನು ಗೌರವಿಸಿದರು.
ಗೌರವ ಅತಿಥಿಗಳಾಗಿ ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಅಧ್ಯಕ್ಷ ಅಶೋಕ್ ಮೊಯ್ಲಿ, ದೇವಾಡಿಗ ಸಂಘ ಬೆಂಗಳೂರು ಅಧ್ಯಕ್ಷ ರಮೇಶ್ ಎನ್ ದೇವಾಡಿಗ, ಉಡುಪಿ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಅಂಬಲಪಾಡಿ, ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ ಟ್ರೇಡಿಂಗ್ ಇದರ ಸಿಎಂಡಿ ಹರೀಶ್ ಶೇರಿಗಾರ್, ದುಬೈ ದೇವಾಡಿಗ ಸಂಘದ ಅಧ್ಯಕ್ಷ ದಿನೇಶ್ ಕುಮಾರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ವಿಶ್ವಾಸ್ ಎಂ ಅತ್ತವರ್, ಈದ್ ಅಲ್ ಬಸ್ತಿ ಮುಕ್ತ ಎಲ್‌ಎಲ್‌ಸಿ ದುಬೈ ಇದರ ನಾರಾಯಣ್ ಎಂ ದೇವಾಡಿಗ, ಭಾಸ್ಕರ್ ಶೇರಿಗಾರ್ ಯುಎಸ್ಎ, ದುಬೈ ಉದ್ಯಮಿ ದಿನೇಶ್ ಸಿ ದೇವಾಡಿಗ, ಶ್ರೀ ಏಕನಾಥೇಶ್ವರ ದೇವಸ್ಥಾನ ಟ್ರಸ್ಟ್ ಬಾರ್ಕೂರ್ ಇದರ ಅಧ್ಯಕ್ಷ ಅಣ್ಣಯ್ಯ ಬಿ ಶೇರಿಗಾರ್, ಹರೀಶ್ ಚಂದ್ರ ದೇವಾಡಿಗ ದುಬೈ, ಮುಂಬೈಯ ಉದ್ಯಮಿ ನಾಗರಾಜ್ ಜಿ ದೇವಾಡಿಗ, ಪೂನೆ ಉದ್ಯಮಿ ನರೇಶ್ ಮೊಯ್ಲಿ, ದೆಹಲಿಯ ಉದ್ಯಮಿ ಮಹಾಬಲ ದೇವಾಡಿಗ,ಮಂಗಳೂರಿನ ಎಸ್ ಡಿ ಎಂ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜ್ ಮಾಜಿ ನಿರ್ದೇಶಕ ಡಾ. ದೇವರಾಜ್ ಕಂಕನಾಡಿ, ಬೆಂಗಳೂರಿನ ಎಚ್ ಎಸ್ ದೇವಾಡಿಗ, ಹರ್ಷ ಮೊಯ್ಲಿ, ಪ್ರಮೀಳಾ ಪ್ರವೀಣ್ ದೇವಾಡಿಗ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರನ್ನು ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸಿದರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಬಾಂಧವರನ್ನು ಗುರುತಿಸಿ ಪ್ರಶಸ್ತಿಗಳನ್ನು ಪ್ರಧಾನಿಸಲಾಯಿತು.
ಶತಮಾನೋತ್ಸವ ಆಚರಣೆಯ ಸಮಿತಿಯ ಮುಖ್ಯ ಸಂಯೋಜಕ ಹಿರಿಯಡ್ಕ ಮೋಹನ್ ದಾಸ್ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ದೇವಾಡಿಗ ಸಂಘ ಮುಂಬಯಿ ಇದರ ಉಪಾಧ್ಯಕ್ಷ ನರೇಶ್ ಎಸ್ ದೇವಾಡಿಗ, ಮಾಲತಿ ಜೆ ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ, ವಿಶ್ವನಾಥ್ ಬಿ ದೇವಾಡಿಗ, ಕೋಶಾಧಿಕಾರಿಗಳಾದ ಸುರೇಖಾ ಎಚ್ ದೇವಾಡಿಗ ಹಾಗೂ ಸುರೇಶ್ ಆರ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಪ್ರಭಾಕರ್ ಎಸ್ ದೇವಾಡಿಗ, ನಿತೀಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಜಯಂತಿ ಎಂ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ಬ್ರಿಜ್ ಎಸ್ ನೇಟ್ಟಕರೆ, ಹಾಗೂ ಸುವರ್ಣ ಮಹೋತ್ಸವ ಆಚರಣ ಸಮಿತಿಯ ಸದಸ್ಯರು ಮತ್ತು ದೇವಾಡಿಗ ಸಂಘ ಮುಂಬಯಿ ಇದರ ಆಡಳಿತ ಸಮಿತಿ ಮತ್ತು ಇತರ ಉಪ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಶ್ವಿನಿ ದೇವಾಡಿಗ, ಸೋನಾಲಿ ಶೇರಿಗಾರ್ ನಿರೂಪಿಸಿದರು. ಹಾಗೂ ಶಾರದಾ ಮೊಯ್ಲಿ, ಸಂಪೂರ್ತಿ ಮೊಯ್ಲಿ , ಹರ್ಷ ದೇವಾಡಿಗ, ತನ್ವಿ ದೇವಾಡಿಗ, ದೀಕ್ಷಿತ್ ದೇವಾಡಿಗ, ಮೊದಲಾದವರು ಸಹಕರಿಸಿದರು.
ಜಯಲಕ್ಷ್ಮಿ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ದೀಪ ಪ್ರಚಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗೌರವ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ ವಂದಿಸಿದರು. ಬೆಳಗ್ಗಿನಿಂದಲೇ ಸಭಾಂಗಣದಲ್ಲಿ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಮಧ್ಯಾಹ್ನ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ನೃತ್ಯ ಹಾಗೂ ಸಾಧಕರಿಗೆ ಸಮಾಜ ಸೇವಕರಿಗೆ ಸನ್ಮಾನದ ವೇದಿಕೆ ಸಿದ್ಧಗೊಂಡಿತ್ತು.
ಸ್ವಾತಂತ್ರ ಪೂರ್ವದ ಕಾಲದಲ್ಲಿ ನಮ್ಮ ಹಿರಿಯರು ಬಹಳ ಕಷ್ಟದ ದಿನಗಳಲ್ಲಿ ಸಮಾಜಕ್ಕೆ ಶಕ್ತಿ ತುಂಬ ಉದ್ದೇಶದಿಂದ ದೇವಾಡಿಗ ಸುಧಾರಕ ಸಂಘ ಪ್ರಾರಂಭಗೊಂಡಿತು. ಅಂತ ಹಂತವಾಗಿ ಸಂಘ ಬಲಿಷ್ಠಗೊಂಡು ಬಹಳಷ್ಟು ಸಮಾಜ ಬಾಂಧವರಿಗೆ ಆಶಯವಾಗಿದೆ. ದೇವಾಡಿಗ ಭವನ ನಿರ್ಮಾಣದ ಮೂಲಕ ಜಗತ್ತಿನ ಎಲ್ಲಾ ದೇವಾಡಿಗ ಸಂಘಗಳಿಗೆ ಆದರ್ಶವಾಗಿ ಬೆಳೆದು ನಿಂತಿದೆ . ಇನ್ನಷ್ಟು ಬಲಿಷ್ಠ ಗೊಳಿಸುವ ಕಾರ್ಯಕ್ಕೆ ಯುವ ಯುವ ಸಮುದಾಯ ಮುಂದೆ ಬರಬೇಕು.- ಡಾ. ವೀರಪ್ಪ ಮೊಯ್ಲಿ
ಶತಮಾನೋತ್ಸವ ಸಂಭ್ರಮದೊಂದಿಗೆ ದೇವಾಡಿಗ ಸಮಾಜ ಒಗ್ಗಟ್ಟು- ಪ್ರವೀಣ್ ದೇವಾಡಿಗ: ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ದೇವಾಡಿಗ ಸ್ವಾಗತಿಸುತ್ತಾ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರಥಮನೋತ್ಸವದ ಕಾರ್ಯಕ್ರಮಗಳನ್ನು ತಿಳಿಸುತ್ತಾ ಶತಮಾನದ ಹಿಂದೆ ಸಮಾನ ಮನಸ್ಸಿನ ದೇವಾಡಿಗ ಸಮುದಾಯದ ಕೆಲವರು ಒಂದೆಡೆ ಸೇರಿ ಸಮಾಜ ಬಾಂಧವರನ್ನು ಒಗ್ಗೂಡಿಸಲು ಹಾಗೂ ಸಮಾಜ ಬಾಂಧವರ ಸಮಸ್ಯೆಗೆ ಸ್ಪಂದಿಸಲು ಮುಂಬಯಿಯಲ್ಲಿ ದೇವಾಡಿಗ ಸಂಘವನ್ನು ಸ್ಥಾಪಿಸಿದರು. ಪ್ರತೀ ವರ್ಷ ಸಮಾಜ ಪರ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುದರೊಂದಿಗೆ ಕೋವಿಡ್ 19 ಮಹಾಮಾರಿಯ ಸಮಯದಲ್ಲಿ ಸಂಘವು ಅಸಾಯಕರಿಗೆ ಮಾಡಿದ ಸಹಕಾರ ಎಂದೂ ಮರೆಯುವಂತಿಲ್ಲ. ಶತಮಾನೋತ್ಸವ ಕೇವಲ ಆಚರಣೆಗೆ ಸೀಮಿತವಾಗಿರದೆ ಸಮಾಜದ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಪೂರಕವಂತೆ ಹಾಗೂ ದೇವಾಡಿಗ ಸಮಾಜ ಬಾಂಧವರಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಒಗ್ಗಟ್ಟಿನಿಂದ ಇದ್ದು ಸಮಾಜ ಬಾಂಧವರ ಸಮಸ್ಯೆ ನಿವಾರಣೆಯೊಂದಿಗೆ ಸಮಾಜ ಅಭಿವೃದ್ದಿಯಾಗುವಂತಾಗಲಿ ಎಂದು ನುಡಿದರು.
(ಚಿತ್ರ, ವರದಿ: ದಿನೇಶ್ ಕುಲಾಲ್)
Comments are closed.