ಉಡುಪಿ: ಉಡುಪಿಯ ಪ್ರಸಿದ್ಧ ಪ್ರವಾಸೀ ತಾಣ ಸೈಂಟ್ ಮೇರಿಸ್ ದ್ವೀಪದಲ್ಲಿ ,ಅಲ್ಲಿಯ ಸಿಬ್ಬಂದಿಯೊಬ್ಬರು ಪ್ರವಾಸಿಗರ ಮೇಲೆ ದರ್ಪ ಪ್ರದರ್ಶಿಸುವ ವಿಡಿಯೋ ವೈರಲ್ ಆಗುತ್ತಿದೆ. ಪ್ರವಾಸಿಗ ಕಮ್ ಯೂಟ್ಯೂಬರ್ ಓರ್ವರು ಇಲ್ಲಿಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಸೈಂಟ್ ಮೇರೀಸ್ ದ್ವೀಪದ ಒಳಗಡೆ ಕ್ಯಾಮರಾಕ್ಕೆ ನಿಷೇಧ ಇದ್ದು ಒಳಗಡೆ ಕೊಂಡೊಯ್ಯುವ ಹಾಗಿಲ್ಲ.
ಶುಲ್ಕ ಪಾವತಿಸಿ ಲಗೇಜು ರೂಮ್‌ನಲ್ಲಿ ಕ್ಯಾಮರಾ ಇಡಬಹುದು ಎಂದು ಅಲ್ಲಿಯ ಸಿಬ್ಬಂದಿ ಹೇಳಿದ್ದಾರೆ. ಆದರೆ ಸೇಫ್ ಆಗಿ ಇಡಲು ಸರಿಯಾದ ವ್ಯವಸ್ಥೆ ಕೂಡ ಅಲ್ಲಿರಲಿಲ್ಲ. ಬಾಗಿಲೇ ಇಲ್ಲದ ರೂಮ್‌ನಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮರಾ ಇಡುವುದು ಹೇಗೆ ಎಂದು ಪ್ರವಾಸಿಗ ಪ್ರಶ್ನಿಸಿದ್ದಾರೆ. ಈ ವೇಳೆ ಅಲ್ಲಿಯ ಸಿಬ್ಬಂದಿ
ಕ್ಯಾಮರವನ್ನೇ ತೆಗೆದು ಬಿಸಾಡುತ್ತೇನೆ ಎಂದು ಬೆದರಿಕೆ ರೀತಿಯಲ್ಲಿ ಉಡಾಫೆ ಮಾತಾಡಿದ್ದಾನೆ. ಅಲ್ಲದೆ ಪ್ರವಾಸಿಗ ಇರುವಲ್ಲಿ ಬಂದು ಮತ್ತಷ್ಟು ಕೂಗಾಡಿದ್ದಾನೆ.
ಮಲ್ಪೆ ಮತ್ತು ಸೈಂಟ್ ಮೇರೀಸ್ ಪ್ರವಾಸಿತಾಣಗಳಲ್ಲಿ ನಿರ್ವಹಣೆ ವಹಿಸಿಕೊಂಡವರ ಉಡಾಫೆ ವರ್ತನೆ ಕೆಲವೊಮ್ಮೆ ಜಾಸ್ತಿಯಾಗುತ್ತಿದೆ. ಇದೀಗ
ಸೈಂಟ್ ಮೇರಿಸ್ ದ್ವೀಪದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಮಲ್ಪೆ ಅಭಿವೃದ್ಧಿ ಸಮಿತಿ ವಿರುದ್ಧ ಆಕ್ರೋಶ ಹೊರಹಾಕಿರುವ ಪ್ರವಾಸಿಗ, ವಾಗ್ವಾದದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಜಿಲ್ಲೆಯ ಪ್ರವಾಸೋಧ್ಯಮದ ಸ್ಥಿತಿಯ ಬಗ್ಗೆ ಪ್ರವಾಸಿಗರು ಆಲೋಚಿಸುವಂತಾಗಿದೆ.
Comments are closed.