ಮುಂಬೈ: ಮಂಗಳೂರು ಮೂಲದ ಸದ್ಯ ಮುಂಬೈನಲ್ಲಿ ನೆಲೆಸಿರುವ ಪ್ರಭಾ ನಾರಾಯಣ ಸುವರ್ಣ ಮತ್ತು ಗುಲ್ವಾಡಿ ಟಾಕೀಸ್ ನಿರ್ಮಾಣದ ಯಾಕೂಬ್ ಖಾದರ್ ಗುಲ್ವಾಡಿ ಅವರ ಚೊಚ್ಚಲ ನಿರ್ದೇಶನದ “ಟ್ರಿಪಲ್ ತಲಾಖ್ ” ಬ್ಯಾರಿ ಭಾಷೆಯ ಸಿನಿಮಾ 2019 ನೇ ಸಾಲಿನ ಕರ್ನಾಟಕ ( ಕನ್ನಡದ ಅತ್ಯುತ್ತಮ ಪ್ರಾದೇಶಿಕ ಬಾಷೆಯ ಚಿತ್ರ ) ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಬಹುಮುಖ ಪ್ರತಿಭೆಯ ಪ್ರಭಾ ನಾರಾಯಣ್ ಸುವರ್ಣ ಇವರ ಹುಟ್ಟಿದ್ದು ಮಂಗಳೂರಿನಲ್ಲಿ.
ಕಳೆದ ಐದು ದಶಕಗಳಿಂದ ಹೆಚ್ಚು ಕಾಲ ಮುಂಬೈನಲ್ಲೆ ನೆಲೆಸಿರುವ ಇವರು ಕಳೆದ 35 ವರ್ಷಗಳಿಂದ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿ, ವಾಲೆಂಟರಿ ರಿಟೈರ್ಮೆಂಟ್ ತೆಗೆದುಕೊಂಡು ಇದೀಗ ತಮ್ಮ ಆಸಕ್ತಿಯ ಕ್ಷೇತ್ರವಾದ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ,ಸಿನಿಮಾ, ಪ್ರವಾಸ, ಸಮಾಜ ಸೇವೆಯಲ್ಲೆ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿರುವ ಪ್ರಭಾ ಸುವರ್ಣ ಸಧ್ಯ ಮುಂಬೈನ ಯಂಗ್ ಮೆನ್ಸ್ ನೈಟ್ ಹೈಸ್ಕೂಲಿನಲ್ಲಿ ಗ್ರಾಂಡ್ ಪ್ಯಾಟ್ರನ್, ಬ್ರಹ್ಮಕುಮಾರಿಯಲ್ಲಿ ಸೇವಾಧಾರಿಯಾಗಿ, ಜಾಗೃತಿ ಬಳಗದಲ್ಲಿ ಫೋರ್ಟ್ ಚಾಪ್ಟರ್ ಚೇರ್ ಪರ್ಸನ್, ಗೌವರ್ನಿಂಗ್ ಕೌನ್ಸಿಲ್, ಡಿಗ್ನಿಟಿ ಫೌಂಡೇಶನ್, ಮುಂಬಯಿ ಕನ್ನಡ ಸಂಘ, ಮಾತುಂಗ ಕನ್ನಡ ಸಂಘ, ಸಾಯನ್ ಮೆಸಾನಿಕ್ ಲೇಡೀಸ್ ಆರ್ಗ ನೈಜೇಷನ್ ನಲ್ಲಿ ಎರಡು ವರ್ಷ ಉಪಾಧ್ಯಕ್ಷೆ ಆಗಿ,ಆಜೀವ ಸದಸ್ಯೆಯಾಗಿ, ಟಾಟಾ ಕ್ಯಾನ್ಸರ್ ನ ಫುಟ್ಬಾತಿನಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುವವರಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿದ್ದಾರೆ.
ಇದಲ್ಲದೆ ಮುಂಬೈ, ಬೆಂಗಳೂರು, ಮಂಗಳೂರು, ಅಬುದಾಬಿ, ಮಸ್ಕತ್, ದುಬೈ, ಅಮೇರಿಕಾ, ಯೂರೋಪ್, ರಷ್ಯಾ, ಖಜಕಿಸ್ತಾನ್, ಉಜು ಬೈಕಿಸ್ತಾನ್, ಅಲ್ಟ್ರಾಡಿ, ಮಾಸ್ಕೋ, ಆಸ್ಟ್ರೇಲಿಯಾ, ಜಪಾನ್, ಕೆನಡಾ, ಫಿಲಿಫೈನ್ಸ್, ವಿಯೆಟ್ನಾಂ ಮುಂತಾದ 40 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ನಡೆದ ಕವಿಗೋಷ್ಟಿ ಮತ್ತು ಇತರೆ ಗೋಷ್ಠಿಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಸದಾ ಲವಲವಿಕೆಯಿಂದ ಇರುವ ಪ್ರಭಾ ಸುವರ್ಣ ತಮ್ಮ ಸಹ ನಿರ್ಮಾಣದ ಟ್ರಿಪಲ್ ತಲಾಖ್, ಅಂಗದಾನ, ಭೋಜರಾಜ್ ಎಂ.ಬಿ.ಬಿ.ಎಸ್. ಚಲನಚಿತ್ರದಲ್ಲಿ ನಟಿಸಿ ಅಲ್ಲು ಸೈ ಎನಿಕೊಂಡಿರುವ ಇವರು ತಮ್ಮ ಈ ವಯಸ್ಸಿನಲ್ಲಿ “ಏಜ್ ಇಸ್ ಜಸ್ಟ್ ನಂಬರ್” ಎಂದು ಹೇಳಿಕೊಳ್ಳುತ್ತ ವಿಶ್ವಾದ್ಯಂತ ನಡೆಯುವ ಹಿರಿಯರ ವಿಭಾಗದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು.
ಮಿಸ್ಸೆಸ್ ಮಂಗಳೂರು ವಿನ್ನರ್, ಮಿಸ್ಸೆಸ್ ಕರ್ನಾಟಕ ಬೆಂಗಳೂರು ರನ್ನರ್, ರಾಜಸ್ಥಾನದ ರಣ ಥಂಬೋರ್ ನಲ್ಲಿ ರನ್ನರ್,ಬ್ಯಾಂಕ್ ಆಫ್ ಥೈಲ್ಯಾಂಡ್ ನಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಪಡೆದಿದ್ದಲ್ಲದೆ
ಇತ್ತೀಚಿಗೆ ದುಬೈನ ಹೋಟೆಲ್ ಅಜ್ಮಾನ್ ಪ್ಯಾಲೇಸ್ ನಲ್ಲಿ ನಡೆದ ಮೈಲ್ ಸ್ಟೋನ್ ಮಿಸ್ ಮತ್ತು ಮಿಸ್ಸೆಸ್ ಗ್ಲೋಬಲ್ ಇಂಟರ್ ನ್ಯಾಷನಲ್ ವರ್ಲ್ಡ್ ಪೇಜಂಟ್ 2024 ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ “ದಿ ಮೈಲ್ಡ್ ಸ್ಟೋನ್ ಮಿಸ್ಸೆಸ್ ಗ್ಲೋಬಲ್ ಇಂಟರ್ ನ್ಯಾಷನಲ್ ವರ್ಲ್ಡ್ ಪೇಜಂಟ್ 2024” ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಅಂಗವಾಗಿ ನೀಡುವ ಗ್ಲೋಬಲ್ ಇಂಟರ್ ನ್ಯಾಷನಲ್ ಈ ಎರಡು ಪ್ರಶಸ್ತಿಯನ್ನ ತಮ್ಮದಾಗಿಸಿ ಕೊಂಡಿದ್ದಾರೆ. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ವಿಶ್ವದ ಸುಮಾರು 40 ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಇವರು ಪ್ರಸ್ತುತ ಮುಂಬೈನ ಬಿಲ್ಲವ ಸಮಾಜದ ಸಕ್ರಿಯ ಸದಸ್ಯರಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ.
Comments are closed.