ಸೂರತ್: ಪಟೇಲ್ ಸಮುದಾಯದ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ದೇಶದ್ರೋಹದ ಆರೋಪದ ಮೇಲೆ ಜೈಲು ಸೇರಿದ್ದ ಹಾರ್ದಿಕ್ ಪಟೇಲ್‍ಗೆ 9 ತಿಂಗಳ ನಂತರ ಜಾಮೀನು ಮಂಜೂರಾಗಿದೆ. ಆದ್ರೆ ಹಾರ್ದಿಕ್ ಪಟೇಲ್ ಬಿಡುಗಡೆಗೆ ಅವರು ಇಂದಿನಿಂದ 6 ತಿಂಗಳವರೆಗೆ ಗುಜರಾತ್ ಬಿಟ್ಟು ಹೋಗಬೇಕು ಅಂತ ಕಂಡೀಷನ್ ಹಾಕಲಾಗಿದೆ.
ಇಂದು ಬೆಳಿಗ್ಗೆ ಬಿಳಿ ಅಂಗಿ ಮತ್ತು ಮಫ್ಲರ್ ತೊಟ್ಟು ಜೈಲಿನಿಂದ ಹೊರಬಂದ ಹಾರ್ದಿಕ್ ಪಟೇಲ್ ಗೆ ಬೆಂಬಲಿಗರು ಸಿಹಿ ತಿನಿಸಿ ಸಂಭ್ರಮಿಸಿದ್ರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಅಂತ ಒತ್ತಾಯಿಸಿ ಹರ್ದಿಕ್ ಪಟೇಲ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಾಗ ಕಳೆದ ಅಕ್ಟೋಬರ್‍ನಲ್ಲಿ ಹಾರ್ದಿಕ್‍ರನ್ನು ಬಂಧಿಸಲಾಗಿತ್ತು.
ಮುಂದಿನ ವರ್ಷ ಚುನಾವಣೆ ಇರುವುದರಿಂದ ಹಾರ್ದಿಕ್ ಪಟೇಲ್ ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ನೆಲೆಸಲಿದ್ದಾರೆ ಅಂತ ಪಟೇಲ್ ಅವರ ಆಪ್ತರಿಂದ ತಿಳಿದುಬಂದಿದೆ.
Comments are closed.