ಮುಂಬೈ: ವೃತ್ತಿಯಲ್ಲಿ ರೂಪದರ್ಶಿಯಾಗಿದ್ದ ಯುವತಿ ಅಪಾರ್ಟ್‍ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಅಂಧೇರಿಯಲ್ಲಿ ನಡೆದಿದೆ.
27 ವರ್ಷದ ಮಾಡೆಲ್ ಕಮರ್‍ಜೀತ್ ಕೌರ್ ಅಲಿಯಾಸ್ ನೇಹಾ ಅಂಧೇರಿಯ ಅಪಾರ್ಟ್‍ಮೆಂಟ್‍ನಲ್ಲಿ ನೇಣಿಗೆ ಶರಣಾಗಿದ್ದಾರೆ. ತನ್ನ ಗೆಳೆಯ ದೇವರಾಜ್‍ನೊಂದಿಗೆ ವಾಸವಿದ್ದ ನೇಹಾ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈದ್ ಬಳಿಕ ದೆಹಲಿಯಿಂದ ಮುಂಬೈಗೆ ಬಂದಿದ್ದ ಈಕೆ ದೇವರಾಜ್‍ನೊಂದಿಗೆ ವಾಸವಿದ್ದಳು. ಆದ್ರೆ ಹೊರಗೆ ಹೋಗಿದ್ದ ದೇವರಾಜ್ ಗುರುವಾರ ಮಧ್ಯರಾತ್ರಿ 12.30ಕ್ಕೆ ಅಪಾರ್ಟ್‍ಮೆಂಟ್‍ಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವೃತ್ತಿಯ ಜೊತೆಗೆ ವೈಯಕ್ತಿಕ ಜೀವನದಲ್ಲೂ ಜಿಗುಪ್ಸೆ ಹೊಂದಿದ್ದ ನೇಹಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಹೆಚ್ಚಿನ ತನಿಖೆಯನ್ನ ಅಂಧೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.