ಅಂತರಾಷ್ಟ್ರೀಯ

ವಿದ್ಯಾರ್ಥಿಗಳನ್ನು ಸೆಕ್ಸ್‌ಗೆ ಬಳಸಿಕೊಂಡ ಶಿಕ್ಷಕಿಗೆ ಜೈಲು!

Pinterest LinkedIn Tumblr

teacher

ಪೆನ್ಸಿಲ್‌ವಾನಿಯಾ : ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳನ್ನು ಸೆಕ್ಸ್‌ಗೆ ಬಳಸಿಕೊಂಡ ಶಿಕ್ಷಕಿಯೊಬ್ಬಳಿಗೆ ಜೈಲು ಶಿಕ್ಷೆಯಾದ ಘಟನೆ ಅಮೆರಿಕದಲ್ಲಿ ನಡೆದಿದೆ.

49 ರ ಹರೆಯದ ಮೆಚಿಲ್ಲೆ ಮೆಲಿಂಜರ್‌ಎಂಬ ಹೈಸ್ಕೂಲ್‌ಶಿಕ್ಷಕಿ ವಿದ್ಯಾರ್ಥಿಗಳಾಗಿದ್ದ ಐವರು ಬಾಲಕರನ್ನು ತನ್ನ ವಿಕೃತ ಲೈಂಗಿಕ ತೃಷೆ ಕಳೆದುಕೊಳ್ಳಲು ಬಳಿಸಿಕೊಂಡಿದ್ದು ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಪ್ರಕರಣದ ತೀರ್ಪು ನೀಡಿದ ಕೋರ್ಟ್‌ಶಿಷುಕಾಮಿ ಯಾಗಿರುವ ಶಿಕ್ಷಕಿಗೆ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷಕಿಯ ಕೃತ್ಯವನ್ನು ಬಾಲಕನೊಬ್ಬನ ಪೋಷಕರು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಕಿ ಕಳುಹಿಸಿದ್ದ ಮೆಸೇಜ್‌ಗಳು , ಕರೆಗಳು ಆಕೆಯ ಅಪರಾಧವನ್ನು ಸಾಬೀತು ಪಡಿಸಿದ್ದು , ವಿದ್ಯಾರ್ಥಿಗಳು ಶಿಕ್ಷಕಿಯ ಹೇಯ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಇತರರಿಗೆ ಮಾದರಿಯಾಗಬೇಕಾಗಿದ್ದ ತನ್ನ ಗೌರವಯುತ ಸ್ಥಾನದ ಜವಾಬ್ದಾರಿ ಮರೆತು ಕೆಳಮಟ್ಟದ ವರ್ತನೆ ತೋರಿದ್ದಕ್ಕಾಗಿ ಈಕೆಯನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ತೀರ್ಪಿತ್ತ ನ್ಯಾಯಾಧೀಶರು 23 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವರದಿಯಾಗಿದೆ.

ಆಕೆ ಹದಿ ಹರೆಯಕ್ಕೆ ಕಾಲಿಟ್ಟ ಬಾಲಕರನ್ನು ಹೆಚ್ಚಾಗಿ ಬಯಸುತ್ತಿದ್ದು ಇದನ್ನೇ ಗೀಳಾಗಿ ಸಿಕೊಂಡಿದ್ದಳು ಎಂದು ಕೋರ್ಟ್‌ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

Comments are closed.