ಪ್ರಮುಖ ವರದಿಗಳು

ಮೊಬೈಲ್‍ನನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನ ಅಟ್ಟಾಡಿಸಿಕೊಂಡು ಹಿಡಿದ ಅಕ್ಕ ತಮ್ಮ

Pinterest LinkedIn Tumblr

SIBLINGS

ಮುಂಬೈ: ಮೊಬೈಲ್‍ನನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನ ಅಕ್ಕ ತಮ್ಮ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮುಂಬೈನ ನದರ್ ನಗರದಲ್ಲಿ ನಡೆದಿದೆ.

ವಿನ್ಸಿ(15), ಮ್ಯಾಥ್ಯೂ(11) ತಮ್ಮ ಮೊಬೈಲ್ ಕದ್ದೊಯ್ಯುತ್ತಿದ್ದ ಕಳ್ಳನನ್ನ ಟಾಕ್ಸಿ ಡ್ರೈವರ್‍ಗಳ ಸಹಾಯದಿಂದ ಹಿಡಿದಿದ್ದಾರೆ. ಭಾನುವಾರ ಘಟನೆ ನಡೆದಿದ್ದು, ಸೋನಿ ಎಕ್ಸ್‍ಪಿರಿಯಾ ಮೊಬೈಲ್ ಹಿಡಿದು ಸಾಗುತ್ತಿದ್ದ ವಿನ್ಸಿ ಕೈಯಿಂದ ಕಿತ್ತುಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದ್ರೆ ಅಕ್ಕ ತಮ್ಮ ಧೈರ್ಯ ತೋರಿ ಆ ಕಳ್ಳನನ್ನ ಹಿಡಿದಿದ್ದಾರೆ.

ಹೇಗಾಯ್ತು ಘಟನೆ?: ಜಿಟಿಬಿ ನಗರದಲ್ಲಿದ್ದ ರೈಲ್ವೆ ಸ್ಟೇಷನ್‍ಗೆ ನಾನು ತಮ್ಮ ಮ್ಯಾಥ್ಯೂ ಸಾಗುತ್ತಿದ್ದೇವು. ಆಗ ನಮ್ಮನ್ನ ಯಾರೋ ಒಬ್ಬ ವ್ಯಕ್ತಿ ತುಂಬಾ ದೂರದಿಂದಲೇ ಹಿಂಬಾಲಿಸುತ್ತಿದ್ದದ್ದು ಕಂಡುಬಂತು. ಹೀಗಾಗಿ ನಾವು ಬೇಗ ಬೇಗನೇ ಹೆಜ್ಜೆ ಹಾಕಿದೆವು. ಅಷ್ಟರಲ್ಲಿ ಆತ ನನ್ನ ಕೈಯಲ್ಲಿದ್ದ ಮೊಬೈಲ್ ಕಿತ್ತು ಓಡಲು ಶುರುಮಾಡಿದ. ತಕ್ಷಣ ನಾವಿಬ್ಬರು ಕಳ್ಳ ಕಳ್ಳ ಎಂದು ಆತನನ್ನ ಹಿಡಿಯಲು ಓಡಿದೆವು. 100 ಮೀಟರ್ ದೂರ ಓಡುತ್ತಿದ್ದಾಗ ಅಲ್ಲಿದ್ದ ಟ್ಯಾಕ್ಸಿ ಡ್ರೈವರ್‍ಗಳು ಆತನನ್ನು ಹಿಡಿದರು.

ಸದ್ಯ ಕಳ್ಳತನ ಮಾಡಿದವ ಕಣನ್ ಮರಿಯಪ್ಪ ದೇವೇಂದ್ರ(31) ಎಂದು ತಿಳಿದುಬಂದಿದ್ದು, ಆತನನ್ನ ಅಂಟಪ್ ಹಿಲ್ ಪೊಲೀಸ್ ಬಂಧಿಸಿದ್ದಾರೆ.

ಶೌರ್ಯ ಪ್ರಶಸ್ತಿ: ಸದ್ಯ ಧೈರ್ಯದಿಂದ ಕಳ್ಳನನ್ನ ಹಿಡಿದ ಅಕ್ಕ ತಮ್ಮನ ಸಾಧನೆಯನ್ನ ಮುಂಬೈ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಬ್ಬರ ಹೆಸರನ್ನ ರಾಷ್ಟ್ರಪತಿ ಅವರು ನೀಡುವ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲು ನಿರ್ಧರಿಸಿದ್ದಾರೆ.

Comments are closed.