ನವದೆಹಲಿ: ಬಹುದಿನಗಳಿಂದ ಹರಿದಾಡುತ್ತಿದ್ದ ವಾಟ್ಸ್ ಆಪ್ ವಾಯ್ಸ್ ಮೇಲ್ ಮತ್ತು ಕಾಲ್ ಬ್ಯಾಕ್ ಸೇವೆಯನ್ನು ವಾಟ್ಸ್ ಆಪ್ ತನ್ನ ಹೊಸ ಬೀಟಾ ವರ್ಶಿನ್ನಲ್ಲಿ ಪ್ರಾರಂಭಿಸಿದೆ.
ಗೂಗಲ್ ಪ್ಲೇಸ್ಟೋರ್ನಲ್ಲಿ ಈ ಹೊಸ ಮಾದರಿ ವಾಟ್ಸ್ ಆಪ್ ಸೇವೆ ಸದ್ಯಕ್ಕೆ ಲಭ್ಯವಿಲ್ಲ. ವಾಟ್ಸ್ ಆಪ್ನ ಬೀಟಾ ವರ್ಶಿನ್ 2.16.189 ನಲ್ಲಿ ಮಾತ್ರ ಈ ಸೇವೆ ಲಭ್ಯವಿರುತ್ತದೆ. ವಾಯ್್ಸ ಮೇಲ್ ಮತ್ತು ಕಾಲ್ ಬ್ಯಾಕ್ ಸೇವೆಗಳು ವಾಟ್ಸ್ ಆಪ್ ಕರೆ ಸ್ವೀಕರಿಸದೇ ಇದ್ದಲ್ಲಿ ಮೊಬೈಲ್ ಪರದೆ ಮೇಲೆ ಗೋಚರವಾಗಲಿವೆ.
ಇನ್ನು ವಾಯ್ಸ್ ಮೇಲ್ ಸೇವೆ ವಾಟ್ಸ್ ಆಪ್ನಲ್ಲಿ ನಿಮ್ಮ ಧ್ವನಿ ರೆಕಾರ್ಡ್ ಮಾಡಿದಷ್ಟೆ ಸುಲಭವಾಗಿ ಉಪಯೋಗಿಸಬಹುದಾದ ಸೇವೆಯಾಗಿದೆ. ಎಪಿಕೆ ಮಿರರ್ ವೆಬ್ಸೈಟ್ನಿಂದ ಮಾತ್ರ ಈ ನೂತನ ವಾಟ್ಸ್ ಆಪ್ ವರ್ಶಿನ್ ಡೌನ್ಲೋಡ್ ಮಾಡಬಹುದಾಗಿದೆ.
Comments are closed.