ಪ್ರಮುಖ ವರದಿಗಳು

ಪರೀಕ್ಷೆ ವೇಳೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್ ಅರೆಸ್ಟ್

Pinterest LinkedIn Tumblr

gangrape1

ಮುಂಬೈ: ಇಲ್ಲಿನ ವಿಲೆಪಾರ್ಲೆ ಕಾಲೇಜಿನಲ್ಲಿ ನಡೆದ ಪರೀಕ್ಷಾ ವೇಳೆ ಪರೀಕ್ಷಾ ಕೊಠಡಿಯಲ್ಲಿ ಪದವಿ ಪೂರ್ವ ಕಾಲೇಜಿನ 19 ವರ್ಷದ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರೊ.ಮಹೇಂದ್ರ ಭಂಡಾರೆ (45) ಎಂಬುವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ಯುವತಿ ಬೇರೆ ಕಾಲೇಜಿನವಳಾಗಿದ್ದು, ಸೋಮವಾರ ನಡೆದ ಪರೀಕ್ಷೆಗಾಗಿ ವಿಲ್ಲೆಪಾರ್ಲೆ ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ಬರೆಯುತ್ತಿದ್ದ ವೇಳೆ ನನ್ನ ಹಾಲ್‍ಟಿಕೆಟ್ ಚೆಕ್ ಮಾಡಿ ಉತ್ತರ ಪತ್ರಿಕೆಗೆ ಸಹಿ ಮಾಡುವ ನೆಪದಲ್ಲಿ ನನ್ನ ಅಸಭ್ಯವಾಗಿ ಸ್ಪರ್ಶಿಸಿದರು. ನನಗೆ ಅರಿವಿಲ್ಲದೆಯೇ ಈ ಕೃತ್ಯ ನಡೆದಿತ್ತು.

ಇದರಿಂದ ಆಘಾತಕ್ಕೊಳಗಾದ ನಾನು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಷ್ಟನ್ನೇ ಕೊಟ್ಟು ವಾಪಸಾದೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ದೂರನ್ನು ಆಧರಿಸಿ ಪ್ರೊ.ಭಂಡಾರೆ ಅವರನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಪ್ರೊಫೆಸರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಲೆಪಾರ್ಲೆ ಕಾಲೇಜಿನ ಪ್ರಿನ್ಸಿಪಾಲ್ ಕೂಡ ಹೇಳಿದ್ದಾರೆ.

Comments are closed.