ಪ್ರಮುಖ ವರದಿಗಳು

ಥಾಣೆಯಲ್ಲೊಂದು ಮರ್ಯಾದಾ ಹತ್ಯೆ; ಮೇಲ್ವರ್ಗದ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ 16 ವರ್ಷದ ದಲಿತ ಬಾಲಕನ ಹತ್ಯೆ

Pinterest LinkedIn Tumblr

murder

ಥಾಣೆ: ಮೇಲ್ವರ್ಗದ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ 16 ವರ್ಷದ ದಲಿತ ಬಾಲಕನೊಬ್ಬನನ್ನು ಹತ್ಯೆ ಮಾಡಿರುವ ಮತ್ತೊಂದು ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದ್ದು, 17 ವರ್ಷದ ಬಾಲಕಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಬಳಿಕ ಹುಡುಗನ ಕಡೆಯವರು ದೂರು ನೀಡಲು ಹೋದಾಗ ಅವರ ದೂರನ್ನು ಸ್ವೀಕರಿಸದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಿನ್ನೆ ಸಂಜೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‍ಪಿಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ನೇವಿ ಮುಂಬೈ ಪೊಲೀಸ್ ಅಧಿಕಾರಿಗಳು ನೆರುಲ್‍ಠಾಣೆ ಅಧಿಕಾರಿಗಳಿಬ್ಬರನ್ನು ರಾತ್ರಿ ಅಮಾನತು ಮಾಡಿದ್ದರು.

ಮೃತ ಬಾಲಕನನ್ನು ನೇವಿ ಮುಂಬೈ ಪ್ರದೇಶದ ಧರಾವೆ ಗ್ರಾಮದ ಸ್ವಪ್ನಿಲ್ ಸೊನಾವನೆ ಎಂದು ಗುರುತಿಸಲಾಗಿದೆ. ಸ್ವಪ್ನಿಲ್ ತನ್ನ ಶಾಲೆಯ 17 ವರ್ಷದ ಮೇಲ್ಜಾತಿಯ ಬಾಲಕಿಯನ್ನು ಪ್ರೀತಿಸಿದ್ದ.

ಬಂಧಿತರಾಗಿರುವವರನ್ನು ಸಾಗರ್ ನಾಯಕ್, ಸುಜೇಶ್ ನಾಯಕ್ (ಹುಡುಗಿ ಸಹೋದರರು), ತಂದೆ ರಾಜೇಂದ್ರ ನಾಯರ್, ತಾಯಿ ಮಾಲ್ತಿನಾಯಕ್, ಸಹೋದರರ ಗೆಳೆಯರಾದ ಆಶಿಷ್ ಠಾಕೂರ್, ದುರ್ಗೇಶ್ ಪಾಟೀಲ್ ಮತ್ತು ಆಟೋ ಡ್ರೈವರ್ ಸಮೀರ್ ಶೇಕ್ ಎಂದು ಹೇಳಲಾಗಿದೆ.

Comments are closed.