ಅಂತರಾಷ್ಟ್ರೀಯ

ಹುಡುಗಿ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ 7 ವಿಚಾರವನ್ನು ತಪ್ಪದೇ ಯೋಚಿಸುತ್ತಾಳೆ…..!

Pinterest LinkedIn Tumblr

girl

ಸಂಗಾತಿಯ ಅವಶ್ಯಕತೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ ನಮ್ಮ ಸಂಗಾತಿ ಹೇಗಿರಬೇಕು ಎಂಬುವುದು ಅತಿ ಮುಖ್ಯ. ಅವರ ಗುಣ, ಆಗು-ಹೋಗುಗಳು, ಇತರರೊಡನೆ ಹೇಗೆ ಬೆರೆತುಕೊಳ್ಳುತ್ತಾರೆ ಎನ್ನುವುದು ಮುಖ್ಯ.

ಇನ್ನು ಹುಡುಗಿಯರ ವಿಚಾರವಾಗಿ ಹೇಳುವುದಾದರೆ ಅವರು ಯಾವುದೇ ಸಂಭಂದವನ್ನು ಮಾಡಿಕೊಳ್ಳುವ ಮೊದಲು ಬಹಳ ಯೋಚಿಸುತ್ತಾರೆ. ಹುಡುಗನೊಂದಿಗೆ ಸಂಭಂದವೇರ್ಪಡಿಸುವ ಮೊದಲು ಇಲ್ಲವೇ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೇಳೆ ಏನಿಲ್ಲವೆಂದರೂ ಈ ಆಕೆ 7 ವಿಚಾರಗಳ ಕುರಿತಾಗಿ ತಪ್ಪದೇ ಯೋಚಿಸುತ್ತಾಳೆ.

‘ನಾನು ಅವನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆಯೇ?’
ಆ ಹುಡುಗನನ್ನು ಆಕೆ ಈ ಮೊದಲಿನಿಂದಲೂ ನೋಡಿ ಬಲ್ಲವಳಾಗಿದ್ದರೂ, ಆತನನ್ನು ತನ್ನ ಸಂಗಾತಿಯನ್ನಾಗಿಸುವ ಮೊದಲು ಆಕೆ ಆತನ ಪ್ರತಿ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ. ಕಠಿಣ ಪರಿಸ್ಥಿತಿಯ ಸಂದರ್ಭವನ್ನು ಆತ ಹೇಗೆ ನಿಭಾಯಿಸುತ್ತಾನೆ? ಆತ ತಮ್ಮಿಬ್ಬರ ನಡುವಿನ ಸಂಭಂದದ ಕುರಿತಾಗಿ ಆತನ ಕುಟುಂಬಸ್ಥರು ಹಾಗೂ ಗೆಳೆಯರಲ್ಲಿ ಏನು ಹೇಳಿಕೊಂಡಿದ್ದಾನೆ? ತಮ್ಮಿಬ್ಬರ ನಡುವಿ ನಡೆದ ವಿಚಾರಗಳನ್ನು ಎಷ್ಟು ಹೇಳಿಕೊಂಡಿದ್ದಾನೆ? ಎಂಬಿತ್ಯಾದಿ ವಿಚಾರಗಳನ್ನು ಆಕೆ ಯೋಚಿಸುತ್ತಾಳೆ.

‘ಹುಡುಗನ ಕುಟುಂಬದವರು ಹಾಗೂ ಗೆಳೆಯರು ಹೇಗಿದ್ದಾರೆ?’
ನಾವು ಶಿಕ್ಷಣಕ್ಕಾಗಿ ಮನೆಯಿಂದ ದೂರವಿದ್ದರೂ ಮನೆ ಮಂದಿ ಮಾತ್ರ ಯಾವತ್ತೂ ನಮ್ಮ ಮನದಲ್ಲಿರುತ್ತಾರೆ. ನಾವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಮ್ಮ ಕುಟುಂಬಸ್ಥರ ಕಾಳಜಿ ಹಾಗೂ ಅವರ ಪ್ರಭಾವ ಬಹಳಷ್ಟಿರುತ್ತದೆ. ಹೀಗಾಗಿಯೇ ಹುಡುಗನ ಮನೆಯವರು ಹೇಗೆ ಯೋಚಿಸುತ್ತಾರೆ? ಬದಲಾವಣೆಯನ್ನು ಅವರು ಎಷ್ಟು ಒಪ್ಪಿಕೊಳ್ಳುತ್ತಾರೆ? ಹುಡುಗನಿಗೆ ಅವರು ಎಷ್ಟು ಸ್ವಾತಂತ್ರ್ಯ ನೀಡುತ್ತಾರೆ? ಹುಡುಗನಿಗೆ ಆತನ ಮನೆಯವರು ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ? ಈ ಎಲ್ಲಾ ವಿಚಾರಗಳನ್ನೂ ಹುಡುಗಿ ಗಮನಿಸುತ್ತಿರುತ್ತಾಳೆ.

‘ಹುಡುಗ ನನಗಾಗಿ ಎಷ್ಟು ಖರ್ಚು ಮಾಡಬಲ್ಲ?’
ಹುಡುಗ ಎಷ್ಟು ಶ್ರೀಮಂತ ಎಂಬ ಕಾರಣದಿಂದ ಹುಡುಗಿ ಈ ವಿಚಾರವನ್ನು ಯೋಚಿಸುವುದಿಲ್ಲ ಬದಲಾಗಿ ಆತ ತನಗೆ ಎಷ್ಟು ಮಹತ್ವ ನೀಡುತ್ತಾನೆ ಎಂಬ ದಿಶೆಯಿಂದ ಆಕೆ ಹೀಗೆ ಯೋಚಿಸುತ್ತಾಳೆ. ಹುಡುಗ ಆಕೆಗೆ ಮಹತ್ವ ನೀಡುತ್ತಾನೆಂದಾದರೆ ಆಕೆಯ ಎಲ್ಲಾ ಆಸೆಗಳನ್ನು ಪೂರೈಸಲು ಪ್ರಯತ್ನಿಸುತ್ತಾನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕಾಗಿ ಅದೆಷ್ಟೇ ಹಣ ಖರ್ಚು ಮಾಡಲು ತಯಾರಿರುತ್ತಾನೆ.

‘ನಾನು ಹೇಳದೆಯೇ ಆತ ನನ್ನ ಭಾವನೆಗಳನ್ನು ಅರ್ಥೈಸಿಕೊಳ್ಳಬಲ್ಲನೇ?’
ಹುಡುಗಿಯರು ಯಾವತ್ತೂ ತನ್ನ ಎದುರಿಗಿರುವ ವ್ಯಕ್ತಿಯಿಂದ ಅಪೇಕ್ಷಿಸುವುದನ್ನು ಬಾಯ್ಬಿಟ್ಟು ತಿಳಿಸುವುದಿಲ್ಲ. ವಿಶೇಷವಾಗಿ ತಾನು ಇಷ್ಟಪಡುವ ವ್ಯಕ್ತಿಯ ಬಳಿಯಂತೂ ಆಕೆ ಯಾವತ್ತೂ ತನ್ನ ಭಾವನೆಯನ್ನು ತಿಳಿಸುವುದಿಲ್ಲ. ಅವರಾಗಿಯೇ ತನ್ನ ಭಾವನೆಯನ್ನು ಅರ್ಥೈಸಿಕೊಳ್ಳಬೇಕು ಎನ್ನುವ ಬಯಕೆಯಿಂದ ಆಕೆ ಹೀಗೆ ಮಾಡುತ್ತಾಳೆ. ಹೀಗಾಗಿಯೇ ಓರ್ವ ಹುಡುಗ ಕೇವಲ ಆಕೆಯ ಹಾವ-ಭಾವಗಳಿಂದ ಆಕೆಯ ಭಾವನೆಯನ್ನು ಅರ್ಥೈಸಿಕೊಂಡರೆ ಆಕೆ ಬಹಳ ಖುಷಿಪಟ್ಟುಕೊಳ್ಳುತ್ತಾಳೆ.

‘ಆತ ಖಾಸಗಿ ವಿಚಾರಗಳನ್ನೂ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾನೆಯೇ?’
ಹುಡುಗಿಯರು ತಮ್ಮ ಬಾಯ್’ಫ್ರೆಂಡ್ ಕುರಿತಾದ ಕೆಲವು ಸೀಕ್ರಟ್’ಗಳನ್ನು ತನ್ನ ಬೆಸ್ಟ್ ಫ್ರೆಂಡ್’ಗೆ ತಿಳಿಸುವುದಿಲ್ಲ. ಆದರೆ ಹುಡುಗರು ಹೀಗಲ್ಲ ತನ್ನ ಗರ್ಲ್’ಫ್ರೆಂಡ್’ಗೆ ಸಂಭಂದಿಸಿದ ಪ್ರತಿಯೊಂದು ವಿಚಾರಗಳನ್ನೂ ತನ್ನ ಗೆಳೆಯರಿಗೆ ತಿಳಿಸುತ್ತಾನೆ. ಸಾಮಾನ್ಯವಾಗಿ ಈ ರೀತಿ ವರ್ತಿಸುವ ಹುಡುಗರನ್ನು ಯಾವುದೇ ಹುಡುಗಿ ಇಷ್ಟಪಡುವುದಿಲ್ಲ. ಇಂತಹ ಹುಡುಗರೊಂದಿಗೆ ಇರುವುದು ಅಸುರಕ್ಷಿತ ಎಂಬ ಭಾವನೆ ಆಕೆಯನ್ನು ಕಾಡುತ್ತಿರುತ್ತದೆ.

‘ನಾನು ಹೇಗಿದ್ದೇನೋ ಹಾಗೆಯೇ ಆತ ನನ್ನನ್ನು ಇಷ್ಟಪಡುತ್ತಾನೆಯೇ?’
ಪ್ರತಿಯೊಬ್ಬ ಹುಡುಗಿಯೂ ತನ್ನ ಎದುರಿಗಿರುವ ಯುವಕ ತನ್ನೆಡೆಗೆ ಆಕರ್ಷಿತನಾಗಿದ್ದಾನೆಯೇ? ಆಗಿದ್ದಾನಾದರೆ ಯಾಕೆ? ಎಂಬುವುದನ್ನು ತಿಳಿದುಕೊಳ್ಳಲು ಬಯಸುತ್ತಾಳೆ. ಆತ ಆಕರ್ಷಿತನಾಗಲು ತಾನು ಹೊಂದಿರುವ ಗುರಿ, ತನ್ನ ಯೋಚನೆಗಳು ಇಲ್ಲವೇ ತಾನಿರುವ ರೀತಿ ಕಾರಣವಾ ಎಂದು ತಿಳಿದುಕೊಳ್ಳಲು ಇಷ್ಟಪಡುತ್ತಾಳೆ. ಸುಧಾರಣೆ ಹಾಗೂ ಬದಲಾವಣೆಯಲ್ಲಿ ಬಹಳಷ್ಟು ಅಂತರಗಳಿರುತ್ತವೆ. ಈ ಎರಡನ್ನೂ ಪರಿಗಣಿಸಿ ಪ್ರತಿಯೊಬ್ಬ ಹುಡುಗಿ, ಹುಡುಗರ ನಿರೀಕ್ಷೆಗಳನ್ನು ಗಮನಿಸುತ್ತಿರುತ್ತಾಳೆ.

‘ಆತನ ಹಾಗೂ ತನ್ನ ಫ್ಯೂಚರ್ ಪ್ಲಾನಿಂಗ್’ನಲ್ಲಿ ಹೊಂದಾಣಿಕೆಯಾಗುತ್ತದೆಯೇ?’
ತನ್ನೆದುರಿಗಿರುವ ಹುಡುಗ ತನ್ನ ಮುಂದಿನ ಜೀವನ, ಮದುವೆ ಹಾಗೂ ಮಕ್ಕಳ ಕುರಿತಾಗಿ ಏನು ಯೋಚಿಸಿದ್ದಾನೆ. ಇದು ತನ್ನ ಫ್ಯೂಚರ್ ಪ್ಲಾನಿಂಗ್ ಜೊತೆಗೆ ಹೊಂದಿಕೊಳ್ಳುತ್ತದೆಯೇ? ಈ ಕುರಿತಾಗಿ ಪ್ರತಿಯೊಬ್ಬ ಹುಡುಗಿಯೂ ಗಂಭೀರವಾಗಿ ಯೋಚಿಸುತ್ತಾಳೆ, ಹೀಗೆ ಯೋಚಿಸುವುದರಲ್ಲಿ ತಪ್ಪು ಕೂಡಾ ಇಲ್ಲ. ಯಾಕೆಂದರೆ ಯಾವೊಬ್ಬ ಹುಡುಗಿಯೂ ತನ್ನ ಸಂಗಾತಿ ಇಲ್ಲವೇ ಗಂಡನಿಂದಾಗಿ ತನ್ನ ಭವಿಷ್ಯದ ಗುರಿ ಹಾಗೂ ಕನಸುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯಾವತ್ತೂ ಬಯಸುವುದಿಲ್ಲ. ಕನಿಷ್ಟ ಪಕ್ಷ ಹೀಗಾಗುತ್ತದೆ ಎಂದು ಮೊದಲೇ ಆಕೆಗೆ ತಿಳಿದರೆ ಅಂತಹ ಹುಡುಗನೊಂದಿಗೆ ಆಕೆ ಯಾವುದೇ ಕಾರಣಕ್ಕೂ ಮದುವೆಯಾಗಬಯಸುವುದಿಲ್ಲ.

ಈ ಏಳು ವಿಷಯಗಳ ಕುರಿತು ಗಂಭೀರವಾಗಿ ಯೋಚಿಸಿದ ಬಳಿಕವೇ ಓರ್ವ ಹುಡುಗಿ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ.

Comments are closed.