ಬರೇಲಿ: ಹಲವರು, ಹಲವು ಕಾರಣಗಳಿಗಾಗಿ ತಾವು ಕಳ್ಳತನ ಮಾಡುತ್ತಿದ್ದುದಾಗಿ ಪೂಲೀಸರೆದುರು ಹೇಳಿದ್ದನ್ನು ಕೇಳುತ್ತೇವೆ. ಇಲ್ಲೊಬ್ಬ ಬಿಎಸ್‍ಪಿ ಪ್ರಥಮ ವರ್ಷದ ವಿದ್ಯಾರ್ಥಿ ತನ್ನ ಗರ್ಲ್‍ಫ್ರೆಂಡ್’ಗೆ ಗರ್ಭಪಾತ ಮಾಡಿಸಲು ಹಣಕ್ಕಾಗಿ ಕಳ್ಳತನಕ್ಕಿಳಿದು ಕಳ್ಳನಾದ ರೋಚಕ ಕಥೆ ಇದು.
20 ವರ್ಷದ ಈ ವಿದ್ಯಾರ್ಥಿಯ ಹೆಸರು ಅಮನ್ ಪಟೇಲ್, ತನ್ನ ಗೆಳೆಯರಾದ ಪವನ್‍ಕುಮಾರ್, ಅನುರಾಗ್ ಶರ್ಮರನ್ನು ಸೇರಿಸಿಕೊಂಡು ಒಂದು ಗ್ಯಾಂಗ್ ಕಟ್ಟುತ್ತಾನೆ. ಮೂವರು ಸೇರಿ ಬೈಕ್‍ಗಳು, ಮೊಬೈಲ್‍ಗಳನ್ನು ಕಳವು ಮಾಡುತ್ತಾನೆ. ಮಹಿಳೆಯರ ಸರಗಳ ಅಪಹರಣವನ್ನೂ ಈ ಗ್ಯಾಂಗ್ ಮಾಡುತ್ತದೆ. ಈಗ ಪೂಲೀಸರ ಅತಿಥಿಗಳಾಗಿರುವ ಈ ತ್ರಿಮೂರ್ತಿಗಳ ಗ್ಯಾಂಗ್‍ನಿಂದ ಪೂಲೀಸರು ಕೆಲವು ಬೈಕ್, ಮೊಬೈಲ್, ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಕೊತ್ವಾಲಿ ಪೂಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿದೆ.
ಬೈಕ್ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಬೈಕ್‍ನ್ನು ಲಟ್‍ಪುಟಕ್ ಪ್ರದೇಶದಲ್ಲಿ ಯಾರೋ ಸವಾರಿ ಮಾಡುತ್ತಿದ್ದುದನ್ನು ನೋಡಿದ್ದಾಗಿ ತಿಳಿಸಿದಾಗ ಕಾರ್ಯಾಚರಣೆ ನಡೆಸಿದ ಪೂಲೀಸರು, ಪವನ್‍ಕುಮಾರ್‍ನನ್ನು ಬಂಧಿಸಿದರು. ನಂತರ ಅವನು ನೀಡಿದ ಸುಳಿವಿನ ಮೇಲೆ ಅಮನ್ ಪಟೇಲ್, ಅನುರಾಗ್ ಶರ್ಮರನ್ನು ಬಂಧಿಸಿದರು. ಆಗ ಪೂಲೀಸರೆದುರು ಅಮನ್ ಪಟೇಲ್ ಹೇಳಿದ್ದಿಷ್ಟು..
ತನ್ನ ಗರ್ಲ್‍ಫ್ರೆಂಡ್ ಗರ್ಭಿಣಿಯಾಗಿದ್ದಳು. ಅವಳಿಗೆ ಗರ್ಭಪಾತ ಮಾಡಿಸಲು ಹಣಬೇಕಾಗಿತ್ತು. ಆಗ ಅವಳಿಗೆ ಹಣ ಹೊಂದಿಸಿಕೊಡಲು ತಾನು ಇತರ ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡು ಕಳ್ಳತನಕ್ಕಿಳಿದೆ ಎಂದು ಒಪ್ಪಿಕೊಂಡಿದ್ದಾರೆ. ಇಲ್ಲಿನ ಕಾಲೇಜುವೊಂದರಲ್ಲಿ ಬಿಎಸ್‍ಪಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೂ-ಖಾಸಗಿ ಕಾಲೇಜೊಂದರ 19 ವರ್ಷದ ವಿದ್ಯಾರ್ಥಿನಿಗೂ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿತು. ನಂತರ ಅವಳು ಗರ್ಭಿಣಿಯಾದಳು. ಅವಳಿಗೆ ಗರ್ಭಪಾತ ಮಾಡಿಸಲು ಹಣ ಬೇಕಾಗಿತ್ತು. ಮನೆಯಲ್ಲಿ ಕೇಳುವಂತಿರಲಿಲ್ಲ. ಹಾಗಾಗಿ ಕಳ್ಳತನ ಮಾಡಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಅವಳಿಗೆ ಅಬಾರ್ಷನ್ ಮಾಡಿಸಿದೆ. ನಾನು ಕಳ್ಳತನ ಆರಂಭಿಸಿದಾಗಿನಿಂದ ಮನೆಯವರ ಬಳಿ ಹಣ ಕೇಳಿಲ್ಲ ಎಂದು ವಿದ್ಯಾರ್ಥಿ ತಿಳಿಸಿದ್ದಾಗಿ ನಗರ ಪೂಲೀಸ್ ಎಸ್‍ಪಿ ಸಮೀರ್ ಸೌರಭ್ ತಿಳಿಸಿದ್ದಾರೆ.
Comments are closed.