ನವದೆಹಲಿ: ಮನೆಯೊಂದಕ್ಕೆ ನುಗ್ಗಿದ ಕಾಮುಕರಿಬ್ಬರು ಅಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಕಠಿಣವಾಗಿ ಅತ್ಯಾಚಾರಗೈದು, ಹತ್ಯೆ ನಡೆಸಿದ್ದು, ಮೃತದೇಹವನ್ನು ಸುಟ್ಟು ಹಾಕಿದ ಅಮಾನವೀಯ ಘಟನೆ ಪೂರ್ವ ದಿಲ್ಲಿಯಲ್ಲಿ ನಡೆದಿದೆ.
ಬಾಲಕಿ ಮನೆಯಲ್ಲಿ ಒಟಬಟಂಟಿಯಾಗಿದ್ದಾಗ ಈ ಘಟನೆ ನಡೆದಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತಾದರೂ ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ತಿಳಿದು ಬಂದಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಗುರುತಿಸಲು ಸಹಾಯ ಮಾಡಿದ ಮೃತ ಬಾಲಕಿಯ ಗೆಳತಿಯೊಬ್ಬಳು, ‘ಈ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು’ ಎಂಬುವುದನ್ನು ತಿಳಿಸಿದ್ದಾಳೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇಬ್ಬರ ವಿರುದ್ಧ ಪ್ರತ್ಯೇಕ ಕೇಸ್’ಗಳನ್ನು ದಾಖಲಿಸಿದ್ದಾರೆ.
Comments are closed.