ಬೆಳಗಾವಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿನ ಬೆಟಾಲಿಕ್ ಸೆಕ್ಟರ್ ನಲ್ಲಿ ಸಂಭವಿಸಿದ್ದ ನೆಲಬಾಂಬ್ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಯೋಧರಾದ ಬಸವರಾಜ ಚನ್ನಪ್ಪ ಪಾಟೀಲ ಹಾಗೂ ಹಸನ್ ಸಾಬ್ ಇಮಾನ್ ಸಾಬ್ ಖುದಾವಂದ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಬೆಳಗಾವಿ ಜಿಲ್ಲೆ ಗೋಕಾಕದ ನಬಪುರ ಗ್ರಾಮದ ಯೋಧ ಸುಬೇದಾರ 45 ವರ್ಷದ ಬಸವರಾಜ ಬಸಪ್ಪ ಪಾಟೀಲ ಅವರ ಅಂತ್ಯ ಸಂಸ್ಕಾರ ಖನಗಾವಿ ರುದ್ರಭೂಮಿಯಲ್ಲಿ ನೆರವೇರಿತು. ಇನ್ನು ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಸೈದಾಪುರ ಗ್ರಾಮದ ಬಿಎಸ್ಎಫ್ ಯೋಧ 24 ವರ್ಷದ ಹಸನ್ ಸಾಬ್ ಇಮಾನ್ ಸಾಬ್ ಖುದಾವಂದ ಅಂತ್ಯ ಸಂಸ್ಕಾರ ಸ್ವಗ್ರಾಮದಲ್ಲಿ ನಡೆಯಿತು.
ಕಾಶ್ಮೀರ ಬೆಟಾಲಿಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸಪ್ಪ ಪಾಟೀಲ್ ಅವರು 1990ರ ಆಗಸ್ಟ್ ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಆರಂಭಿಸಿದರು. ಯುನಿಟ್-21 ಮದ್ರಾಸ್ 192 ಬ್ರಿಗೇಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವೀರ ಯೋಧರ ಅಂತ್ಯಕ್ರಿಯೆ ಸಂದರ್ಭದಲ್ಲಿ ಕುಟುಂಬಸ್ಥರು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿರಾರು ಜನರು ವೀರ ಯೋಧ ಪಾಟೀಲ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮತ್ತೆ ಹುಟ್ಟಿ ಬನ್ನಿ ಎಂಬ ಘೋಷಣೆಗಳನ್ನು ಕೂಗಿದರು.
Comments are closed.