ಗಲ್ಫ್

ಬಹ್ರೇನ್​ನಲ್ಲಿ ಅಪಹರಿಸಲಾಗಿದ್ದ ಭಾರತೀಯ ಮೂಲದ 5 ವರ್ಷದ ಬಾಲಕಿಯ ರಕ್ಷಣೆ ! ಇಬ್ಬರು ಅಪಹರಣಕಾರರ ಬಂಧನ

Pinterest LinkedIn Tumblr

Bahrain

ಮನಾಮ: ಬಹ್ರೇನ್ನಲ್ಲಿ 5 ವರ್ಷದ ಭಾರತೀಯ ಬಾಲಕಿಯ ಅಪಹರಣ ಪ್ರಕರಣ ಸುಖಾಂತ್ಯವಾಗಿದ್ದು, ಪೊಲೀಸರು ಅಪಹರಣ ನಡೆದ 24 ಗಂಟೆಯೊಳಗೆ ಇಬ್ಬರು ಅಪಹರಣಕಾರರನ್ನು ಬಂಧಿಸಿ ಬಾಲಕಿ ‘ಸಾರಾ’ಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮಂಗಳವಾರ ರಾತ್ರಿ ಬಾಲಕಿಯ ತಾಯಿ ಹೂರ ಎಂಬಲ್ಲಿ ಕಾರು ನಿಲ್ಲಿಸಿ ಮಾರುಕಟ್ಟೆಗೆ ತೆರಳಿದ್ದಾಗ ಇಬ್ಬರು ದುಷ್ಕರ್ವಿುಗಳು ಸಾರಾಳನ್ನು ಆಕೆಯ ತಾಯಿಯ ಕಾರಿನಲ್ಲೇ ಅಪಹರಿಸಿದ್ದರು. ದೂರು ಬಂದ ನಂತರ ಕಾರ್ಯಾಚರಣೆ ಆರಂಭಿಸಿದ ಪೊಲೀಸರು 25 ಪೊಲೀಸ್ ವಾಹನಗಳ ಸಹಾಯದಿಂದ ಬಾಲಕಿಯ ಹುಡುಕಾಟ ಆರಂಭಿಸಿದ್ದರು. ದುರ್ಷ್ಕರ್ವಿುಗಳು ನಂತರ ಕಾರನ್ನು ಹೂರಾದ ರಸ್ತೆಯೊಂದರಲ್ಲಿ ಬಿಟ್ಟು ತೆರಳಿದ್ದರು.

ಓರ್ವ ಪುರುಷ ಮತ್ತು ಓರ್ವ ಮಹಿಳೆ ಮಗುವನ್ನು ಅಪಹರಣ ಮಾಡಿದ್ದಾರೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತ ಪುರಷ ಬಹ್ರೇನಿ ಪ್ರಜೆಯಾಗಿದ್ದು, ಮಹಿಳೆ ಏಷ್ಯಾದ ರಾಷ್ಟ್ರಕ್ಕೆ ಸೇರಿದವಳು ಎಂದು ಕರ್ನಲ್ ಅಲ್ ತಾವಡಿ ತಿಳಿಸಿದ್ದಾರೆ.

ಪೊಲೀಸರು ಆರೋಪಿ ಮಹಿಳೆಯ ಮನೆಯಿಂದ ಸಾರಾಳನ್ನು ಸುರಕ್ಷಿತವಾಗಿ ರಕ್ಷಿಸಿ ತಾಯಿಯ ಬಳಿ ಸೇರಿಸಿದ್ದಾರೆ.

ಅಪಹರಣಕಾರರು ಬಾಲಕಿಯನ್ನು ಏತಕ್ಕಾಗಿ ಅಪಹರಿಸಿದ್ದರು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.