ಅಂತರಾಷ್ಟ್ರೀಯ

ದೂರಾದ ಗಂಡನನ್ನು ವಾಪಸ್ ಪಡೆಯಲು ತನ್ನ 17 ತಿಂಗಳ ಹಸುಗೂಸಿಗೆ ವಿಷವುಣಿಸಿದ ತಾಯಿ

Pinterest LinkedIn Tumblr

mart

ವಾಷಿಂಗ್ಟನ್: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಸಂಸಾರವನ್ನು ತನ್ನನ್ನು ತ್ಯಜಿಸಿದ್ದ ಗಂಡನನ್ನು ವಾಪಸ್ ಪಡೆಯಲು ಹವಣಿಸಿದ್ದ ಮಹಿಳೆಯೊಬ್ಬಳು ತನ್ನ 17 ತಿಂಗಳ ಮಗಳನ್ನು ವಿಷವುಣಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಕಿಂಬರ್ಲಿ ಮಾರ್ಟಿನ್ಸ್ ಎಂಬ 23 ವರ್ಷದ ಮಹಿಳೆಯಿಂದ ಈ ಹೃದಯ ವಿದ್ರಾವಕ ಕೃತ್ಯ ಮಾಡಿದ್ದು, ಪ್ರಸ್ತುತ ಪೊಲೀಸರ ಅತಿಥಿಯಾಗಿದ್ದಾರೆ. ಪೊಲೀಸರು ತಿಳಿಸಿರುವಂತೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕಿಂಬರ್ಲಿ ಮಾರ್ಟಿನ್ಸ್ ಅವರ ಪತಿ ಆಕೆಯನ್ನು ತೊರೆದು ಹೋಗಿದ್ದರು. ಆದರೆ ಪತಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಮಾರ್ಟಿನ್ಸ್ ಆತನನ್ನು ಮರಳಿ ಪಡೆಯಲು ಹವಣಿಸುತ್ತಿದ್ದಳು. ಈ ಬಗ್ಗೆ ಒಂದೆರಡು ಸಾರಿ ಪತಿಯನ್ನು ಭೇಟಿ ಮಾಡುವ ಪ್ರಯತ್ನ ಕೂಡ ಮಾಡಿದ್ದಳಾದರೂ, ಅದು ಸಫಲವಾಗಿರಲಿಲ್ಲ.

ಹೀಗಾಗಿ ಹೇಗಾದರೂ ಸರಿ ತನ್ನ ಗಂಡನನ್ನು ವಾಪಸ್ ಪಡೆಯಬೇಕು ಎಂದು ಹವಣಿಸಿದ ಕಿಂಬರ್ಲಿ ತನ್ನ 17 ತಿಂಗಳ ಮಗಳಿಗೆ ಉಪ್ಪಿನಲ್ಲಿ ವಿಷ ಬೆರೆಸಿ ತಿನ್ನಿಸಿದ್ದಾಳೆ. ಬಳಿಕ ಕೆಲವೇ ಗಂಟೆಗಳಲ್ಲಿ ಮಗು ಅನಾರೋಗ್ಯಕ್ಕೀಡಾಗಿದ್ದು, ಕೂಡಲೇ ಆಕೆಯನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ನೀಡಿದ ಪ್ರಾಥಮಿಕ ವರದಿಯನ್ನಾಧರಿಸಿ ತನಿಖೆ ನಡೆಸಿದ ಪೊಲೀಸರು ಅನುಮಾನದ ಮೇರೆಗೆ ತಾಯಿ ಕಿಂಬರ್ಲಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಪ್ರಸ್ತುತ ಮಗುವಿನ ಆರೋಗ್ಯ ತೀರಾ ಚಿಂತಾಜನಕವಾಗಿದ್ದು, ಆಮ್ಲಜನಕದ ನೆರವಿನೊಂದಿಗೆ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಿಂಬರ್ಲಿ ಅವರ ಸಂಬಂಧಿಕರು, ಆಕೆ ತುಂಬಾ ಸೌಮ್ಯ ಸ್ವಭಾವದ ಹುಡುಗಿಯಾಗಿದ್ದಳು. ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದಳು. ಅವಳಿಂದ ಈ ಕೃತ್ಯ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.