ಪ್ರಮುಖ ವರದಿಗಳು

ವಿಶೇಷವಾದ ಪ್ರತಿಭೆಗಳನ್ನು ಹೊಂದಿರುವ ಈ ಕುಟುಂಬವನ್ನೊಮ್ಮೆ ನೋಡಿ ! 4 ರ ಬಾಲೆ 9ನೇ ತರಗತಿಯಲ್ಲಿ…15ರ ಪ್ರಾಯದಲ್ಲಿಯೇ ಪಿಎಚ್​ಡಿ…ಇನ್ನೂ ಇದೆ ಮುಂದೆ ಓದಿ…

Pinterest LinkedIn Tumblr

sooo

ಲಖನೌ: ಆಕೆಗೆ ಈಗ ನಾಲ್ಕು ವರ್ಷ. ಆದರೆ ಓದುತ್ತಿರುವುದು 9ನೇ ತರಗತಿ. ಇದು ಹೇಗೆ ಸಾಧ್ಯ, ಛೆ, ಸಾಧ್ಯವೇ ಇಲ್ಲ ಬಿಡಿ ಎಂದು ನಿರ್ಲಕ್ಷಿಸುತ್ತೀರಾ? ಆದರೂ ನಂಬಲೇಬೇಕು, ಇಲ್ಲಿದೆ ನೋಡಿ ಈ ಬಗ್ಗೆ ಮಾಹಿತಿ.

ಹೌದು, ಮಧ್ಯಪ್ರದೇಶದ 4 ವರ್ಷದ ಬಾಲಕಿ ಅನನ್ಯಾ ತಾನು ಅಸಾಧಾರಣ ಪ್ರತಿಭೆ ಅನ್ನೋದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಅವರೀಗ 9ನೇ ತರಗತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಈಕೆಯ ಅಕ್ಕ ಸುಷ್ಮಾ 15ರ ಪ್ರಾಯದಲ್ಲಿಯೇ ಪಿಎಚ್ಡಿ ಮಾಡುತ್ತಿದ್ದಾರೆ. ಅವರೂ ಸಾಮಾನ್ಯ ಪ್ರತಿಭೆಯಲ್ಲ ಅನ್ನೋದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಅಂತೆಯೇ ಅಣ್ಣ ಶೈಲೇಂದ್ರ ಕೂಡ 9ನೇ ವರ್ಷಕ್ಕೆ ಮೆಟ್ರಿಕ್ಯುಲೇಷನ್ ಪಾಸು ಮಾಡಿ ಅನನ್ಯಾಳ ಹೊಸ ಸಾಧನೆಗೆ ಮಾರ್ಗದರ್ಶಕರಾಗಿದ್ದಾರೆ. ಒಟ್ಟಾರೆ ಇಡೀ ಕುಟುಂಬವೇ ವಿಶೇಷವಾದ ಪ್ರತಿಭೆಯನ್ನು ಹೊಂದಿದ್ದಾರೆ.

ಪ್ರಚಂಡ ಪುಟಾಣಿ ಅನನ್ಯಾ ತಂದೆ ತೇಜ್ ಬಹದ್ದೂರ್ ವರ್ಮಾ ವಿಶ್ವವಿದ್ಯಾಲಯದಲ್ಲಿ ಕೆಲಸದಲ್ಲಿದ್ದಾರೆ. ಮಾರುಕಟ್ಟೆಗೆ ತೆರಳಿದ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯ ಪಠ್ಯಪುಸ್ತಕ ಹಿಡಿದು ಓದಲು ಶುರುವಿಟ್ಟುಕೊಂಡ ಅನನ್ಯಾಳನ್ನು ಶಾಲೆಗೆ ಕರೆಸಿದ ಶಿಕ್ಷಕಿ ಪರೀಕ್ಷೆ ಬರೆಯಲು ಕೊಟ್ಟಿದ್ದಾರೆ, ಸರಾಗವಾಗಿ ಉತ್ತರ ಬರೆದ ಅನನ್ಯಾಳನ್ನು 9ನೇ ತರಗತಿಗೆ ಪ್ರವೇಶ ದೊರಕಿಸಿ ಹೊಸ ದಾಖಲೆ ಬರೆಯಲು ಪ್ರೇರೇಪಿಸಿದ್ದಾರೆ.

ಬಾಲಕಿ ಪ್ರತಿಭೆಗೆ ನೀರೆರೆಯಲು ಶಿಕ್ಷಣ ಸಂಸ್ಥೆ ಆಕೆಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಯಾವುದೇ ತರಬೇತಿ ಪಡೆಯದೆ ಸ್ವ ಅಧ್ಯಯನದಿಂದ ಸಾಧನೆ ಮಾಡುತ್ತಿರುವ ಮೂವರು ಮಕ್ಕಳು ದೇವರು ನೀಡಿದ ವರ ಎಂದು ತಂದೆ ತೇಜ್ ಪ್ರತಾಪ್ ಹೇಳಿದ್ದಾರೆ.

Comments are closed.