ಪ್ರಮುಖ ವರದಿಗಳು

ದಲಿತರಿಬ್ಬರನ್ನು ತೆಂಗಿನಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಗೋ ರಕ್ಷಣಾ ಸಮಿತಿ ಕಾರ್ಯಕರ್ತರು

Pinterest LinkedIn Tumblr

andhra-dalit

ವಿಜಯವಾಡ: ದಲಿತರಿಬ್ಬರನ್ನು ತೆಂಗಿನಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಗೋ ರಕ್ಷಣಾ ಸಮಿತಿ ಕಾರ್ಯಕರ್ತರು ಈ ಇಬ್ಬರು ಅಕ್ರಮ ಗೋಹತ್ಯೆ ಮಾಡುತ್ತಿದ್ದರೆಂದು ಆರೋಪಿಸಿದ್ದಾರೆ.

ಆಂಧ್ರ ಪ್ರದೇಶದ ಅಮಲಾಪುರದ ಮೊಕಾತಿ ಎಲಿಸಾ ಮತ್ತು ಲಾಜರ್ ಎಂಬ ಇಬ್ಬರು ದಲಿತ ಸೋದರರು ಸತ್ತ ಹಸುವಿನ ಚರ್ಮ ಬೇರ್ಪಡಿಸುತ್ತಿದ್ದಾಗ ಸ್ಥಳಕ್ಕಾಗಮಿಸಿದ 100 ಕ್ಕೂ ಅಧಿಕ ಗೋರಕ್ಷಕರು ಸಹೋದರರನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಆದರೆ, ಹಸು ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಸುವಿನ ಮಾಲಿಕ ಸಸ್ಯಾಹಾರಿಯಾಗಿದ್ದು, ಸತ್ತ ಹಸುವಿನ ಚರ್ಮ ಬೇರ್ಪಡಿಸುವಂತೆ ದಲಿತ ಯುವಕರಿಗೆ ಬಾಡಿಗೆ ನೀಡಿ ಕಳುಹಿಸಿದ್ದ ಎನ್ನಲಾಗಿದೆ. ಥಳಿತಕ್ಕೊಳಗಾದ ದಲಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನದ ಹಿಂದೆ ಗುಜರಾತಿನ ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ.

ಸದನದಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣದ ಬಿಸಿ ಚರ್ಚೆ ಕೂಡ ಏರ್ಪಟ್ಟಿತ್ತು. ಪ್ರಧಾನಿ ಮೋದಿ ಸಹ ದಲಿತ ಸಹೋದರರ ಮೇಲೆ ಹಲ್ಲೆ ಮಾಡುವ ಬದಲು ನನ್ನನ್ನು ಕೊಲ್ಲಿ ಎಂದು ಭಾಷಣದಲ್ಲಿ ಹೇಳಿದ್ದರು. ಅಲ್ಲದೆ ಕಪಟ ಗೋರಕ್ಷಕ ವೇಷ ಧರಿಸಿ ಅಕ್ರಮವೆಸಗುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Comments are closed.