ಸದಾ ವಿವಾದಗಳ ಸುಳಿಯಲ್ಲಿ ಸಿಲುಕುವ ಬಾಲಿವುಡ್ ನಟಿ ರಾಖಿ ಸಾವಂತ್ ಮತ್ತೊಂದು ಬಿಗ್ ವಿವಾದದಲ್ಲಿ ಸಿಲುಕಿದ್ದಾರೆ. ಈಗ ಅವರ ಟಾರ್ಗೆಟ್ ಪ್ರಧಾನಿ ನರೇಂದ್ರ ಮೋದಿ. ಅಮೆರಿಕಾದ ಇಲಿನಾಯ್ಸ್’ನ ಭಾರತೀಯರು 70ನೇ ಸ್ವಾತಂತ್ರ್ಯ ಸಮಾರಂಭಕ್ಕೆ ಅಹ್ವಾನಿಸಿದಾಗ ಅವರು ಅಲ್ಲಿಗೆ ಹೋದ ವೇಷಾಕೃತಿಯೇ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ಮೋದಿ ಚಿತ್ರವಿರುವ ವಸ್ತ್ರವನ್ನು ಧರಿಸಿಕೊಂಡು ಹೋಗಿದ್ದಾರೆ. ಬಟ್ಟೆಯಲ್ಲಿದ್ದ ಮೋದಿ ಚಿತ್ರ ವಿಚಿತ್ರ ರೀತಿಯಲ್ಲಿತ್ತು. ತನ್ನ ದೇಹದ ಮೇಲ್ಭಾಗ, ಹಿಂಭಾಗ ಎಲ್ಲ ಕಡೆ ಮೋದಿಯವರ ಭಾವಚಿತ್ರವಿದೆ. ಅವೆಲ್ಲ ಅಸಹ್ಯಕರ ರೀತಿಯಲ್ಲಿವೆ. ರಾಖಿ ಫೋಟೊಕ್ಕೆ ನೀಡಿದ ಶೈಲಿಯು ಅಶ್ಲೀಲಕರವಾಗಿದೆ.
ರಾಖಿ ನೀಡಿರುವ ಚಿತ್ರ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ದೇಶದ ಪ್ರಧಾನಿಯವರ ಚಿತ್ರವನ್ನು ಈ ರೀತಿ ಅಂಟಿಸಿಕೊಂಡಿರುವುದಕ್ಕೆ ಹಲವರ ಕಣ್ಣು ಕೆಂಪಗಾಗಿದೆ.
Comments are closed.