ಲಕ್ನೋ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಲಕರಿಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಗೌರಕ್ಪುರ್ನಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಬಾಲಕರನ್ನು ಅರೆಸ್ಟ್ ಮಾಡಲು ಮುಂದಾಗಿದ್ದು, 4 ವರ್ಷ ಹಾಗೂ 6 ವರ್ಷದ ಬಾಲಕರಿಬ್ಬರು ತಲೆಮರೆಸಿಕೊಂಡಿದ್ದಾರೆ.
ಏನಿದು ಪ್ರಕರಣ? ನಿರ್ಮಲಾ ದೇವಿ ಎಂಬಾಕೆ ತನ್ನ ಮಗಳನ್ನು 6 ವರ್ಷದ ಸೋನು ಹಾಗೂ 4 ವರ್ಷದ ಮೋನು ವಿವಸ್ತ್ರಗೊಳಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗೌರಕ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಜುಲೈ 27 ರಂದು ಪ್ರಕರಣ ದಾಖಲಾಗಿದೆ.
ಇತ್ತ ಬಾಲಕರ ಕುಂಟಬದವರು, ಇದೊಂದು ಸುಳ್ಳು ಆರೋಪವಾಗಿದ್ದು, ಈ ಕೇಸ್ ದಾಖಲಾಗಿದ್ದರಿಂದ ಮಕ್ಕಳು ಕಣ್ಮರೆಯಾಗಿದ್ದು, ಅವರ ಶಿಕ್ಷಣದ ಭವಿಷ್ಯವೂ ಹಾಳಾಗಿದೆ ಎಂದು ದೂರಿದ್ದಾರೆ.
Comments are closed.