ಹಾವು ಎಂದ ಕೂಡಲೇ ಎಲ್ಲರೂ ಮಾರು ದೂರ ಓಡೋದೆ ಹೆಚ್ಚು. ಆದರೆ ಇಲ್ಲೊಬ್ಬ ಬಾಲಕ ಇದ್ಯಾವುದಕ್ಕೂ ಹೆದರುತ್ತಿಲ್ಲ. ವಿಷ ತುಂಬಿಕೊಂಡಿರುವ ನಾಗನೇ ಈತನಿಗೆ ಸ್ನೇಹಿತನಾಗಿದ್ದು, ಈತನ ಆಟ, ಪಾಠ, ಊಟ, ನಿದ್ದೆ ಎಲ್ಲವೂ ಹಾವುಗಳ ಜೊತೆಯಲ್ಲಿಯೇ.
ಉತ್ತರಪ್ರದೇಶದ ಬಸ್ತಿ ಎಂಬಲ್ಲಿ ಈ ಬಾಲಕನಿದ್ದಾನೆ. ಶೋಯಬ್ ಆಲಂ ಹೆಸರಿನ ಬಾಲಕ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ. ಬಾಲಕನ ಅಭ್ಯಾಸ ಸಮಯದಲ್ಲಿಯೂ ಹಾವುಗಳು ಈತನ ಸುತ್ತ ಸುತ್ತುತ್ತಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
ಆಲಂಗೆ ಸದಾ ಹಾವುಗಳು ಸುತ್ತುವರಿದು ರಕ್ಷಣೆ ನೀಡುತ್ತಿರುತ್ತವೆ. ಹೀಗಾಗಿ ಸ್ನೇಹಿತರು ಇವನ ಬಳಿ ಮಾತನಾಡಿಸಲು ಅನುಮತಿ ಪಡೆಯಲೇಬೇಕು. ಅನುಮತಿ ಪಡೆಯದೇ ಬರಲು ಸಾಧ್ಯವಿಲ್ಲ. ಒಂದುವೇಳೆ ಬಂದರೆ ನಾಗರ ಹಾವುಗಳಿಂದ ಅನಾಹುತ ಆಗುವುದು ಖಂಡಿತ.
ಶೋಯಬ್ ಆಲಂರ ತಂದೆ ಹಾವು ಹಿಡಿಯುವ ಕೆಲಸ ಮಾಡುತ್ತಾರೆ. ಈ ಪ್ರದೇಶದಲ್ಲಿ ಯಾವುದಾದರೂ ಹಾವುಗಳು ಕಂಡಬಂದಲ್ಲಿ ಆಲಂಗೆ ಮತ್ತು ಅವರ ತಂದೆಗೆ ಮಾಹಿತಿ ನೀಡುತ್ತಾರೆ. ಇವರು ಆ ಹಾವುಗಳನ್ನು ಹಿಡಿದು ತಮ್ಮಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾರೆ.
ತಂದೆಯ ಈ ಒಂದು ಹಾವಿನ ಸಂಬಂಧ ಮತ್ತು ಪ್ರೀತಿ ನೋಡಿ ಆಲಂ ಸಹ ಹಾವುಗಳ ಜೊತೆ ಬೆರೆಯಲು ಆರಂಭ ಮಾಡಿದ್ದಾನೆ. ಹೀಗಾಗಿ ಆಲಂಗೆ ಹಾವುಗಳೆಂದರೇ ಪ್ರಾಣ. ಅದರ ಜೊತೆನೇ ಊಟ, ಅಭ್ಯಾಸ, ಆಟ ಮಾಡುತ್ತಾನೆ. ಶೋಯಬ್ ಆಲಂಗೆ ಇಬ್ಬರು ಸಹೋದರರಿದ್ದು, ಅವರಿಗೂ ಹಾವಿನ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ.
Comments are closed.