ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಗುರುವಾರ ಇಲ್ಲಿ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆಯಲ್ಲಿ ಶಾಲಾ ಮಕ್ಕಳ ಜೊತೆಗೆ ರಕ್ಷಾಬಂಧನವನ್ನೂ ಆಚರಿಸಿದರು.
ಶಾಲಾ ಮಕ್ಕಳಿಂದ ತಮ್ಮ ಕೈಗೆ ರಾಕಿ ಕಟ್ಟಿಸಿಕೊಂಡ ಪ್ರಧಾನಿ ಅವರನ್ನ ಹರಸಿದರು. ಒಲಿಂಪಿಕ್ಸ್ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದು ಕೊಟ್ಟ ಸಾಕ್ಷಿ ಮಾಲಿಕ್ ಅವರನ್ನು ಇದೇ ಸಂದರ್ಭದಲ್ಲಿ ಮೋದಿ ಅವರು ಅಭಿನಂದಿಸಿದರು. ‘ಭಾರತದ ಪುತ್ರಿ ಸಾಕ್ಷಿಗೆ ನನ್ನ ಶುಭಾಶಯ ಮತ್ತು ಅಭಿನಂದನೆಗಳು. ಆಕೆ ತ್ರಿವರ್ಣ ಧ್ವಜಕ್ಕೆ ಹೊಸ ಶಕ್ತಿ ಮತ್ತು ಗೌರವವನ್ನು ತಂದು ಕೊಟ್ಟಿದ್ದಾಳೆ’ ಎಂದು ಅವರು ನುಡಿದರು.
Comments are closed.