ಅಂತರಾಷ್ಟ್ರೀಯ

ರಿಯೋ ಒಲಂಪಿಕ್ಸ್ ಬಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಸಿಂಧು; ಭಾರತಕ್ಕೆ ಮತ್ತೊಂದು ಪದಕ ಖಚಿತ

Pinterest LinkedIn Tumblr

sindhu2

ರಿಯೊ ಡಿ ಜನೈರೊ: ರಿಯೋ ಒಲಂಪಿಕ್ಸ್ ನಲ್ಲಿ ಕುಸ್ತಿ ಪಟು ಸಾಕ್ಷಿ ಮಲಿಕ್ ಪದಕ ಗೆದ್ದ ಬೆನ್ನಲ್ಲೆ, ಮಹಿಳಾ ಬಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ.

ಹೈರದಾಬಾದ್‌ನ ಆಟಗಾರ್ತಿ 21–19, 21–10 ರ ನೇರ ಗೇಮ್‌ಗಳಿಂದ ಜಪಾನ್‌ನ ನೊಜೊಮಿ ಒಕುಹರ ವಿರುದ್ಧ ಆಘಾತ ನೀಡಿದರು.

sindhu4

sindhu3

sindhu1

sindhu

ಸಿಂಧು ಮೊದಲ ಸೆಟ್‌ನಲ್ಲಿ 21–19 ರಿಂದ ಮುನ್ನಡೆ ಸಾಧಿಸಿದ್ದರು. ಎರಡನೇ ಸೆಟ್‌ನ ಆರಂಭದಲ್ಲಿ ಸಿಂಧು ಸತತ 3 ಪಾಯಿಂಟ್‌ಪಡೆದು ಮುನ್ನಡೆ ಕಾಯ್ದುಕೊಂಡರು. ಈ ವೇಳೆ ಚುರುಕಿನ ಆಟ ಆಡಿದ ಒಕುಹರ ಅವರು ಪ್ರತಿರೋಧ ಒಡ್ಡಿ 10–10ರಲ್ಲಿ ಸಮಬಲ ಮಾಡಿಕೊಂಡರು.

ನಂತರ ಅಕ್ರಮಣಕಾರಿ ಆಟ ಆಡಿದ ಸಿಂಧು ಸತತ 11 ಪಾಯಿಂಟ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದರು.

ಸಿಂಧು ಈ ಗೆಲುವಿನ ಮೂಲಕ ಮಹಿಳೆಯರ ಸಿಂಗಲ್ಸ್‌ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಸಿಂಧು ಸ್ಪೇನ್‌ನ ಕೆರೊಲಿನಾ ಮರಿನ್ ಅವರೊಂದಿಗೆ ಚಿನ್ನದ ಪದಕಕ್ಕೆ ಸೆಣಸಲಿದ್ದಾರೆ.

Comments are closed.