ಪ್ರಮುಖ ವರದಿಗಳು

ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಈ ಮಹಿಳೆ ತನ್ನ ಮಗುವನ್ನು ಕೆಳಗೆ ಮಲಗಿಸಿದ್ದೇಕೆ ಗೊತ್ತಾ..? ಈಕೆಯ ಸಂದೇಶ ಕೇಳಿ ನಿಮಗೆ ಏನನಿಸುತ್ತೆ…?

Pinterest LinkedIn Tumblr

1

ಪುಣೆ: ಎಷ್ಟೋ ಮಂದಿ ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳನ್ನ ನೋಡಿ ಕೊಳ್ಳಲು ಸರಿಯಾದ ಸಮಯ ಸಿಗದೇ ಪರದಾಡುತ್ತಾರೆ. ಇಂತಹದ್ದೇ ಸಮಸ್ಯೆಗೆ ಸಿಲುಕಿದ್ದ ಬ್ಯಾಂಕ್ ಉದ್ಯೋಗಿ ಮಹಿಳೆಯೊಬ್ಬರು ಹಾಕಿದ ಫೇಸ್‍ಬುಕ್ ಪೋಸ್ಟ್ ವೊಂದು ತುಂಬಾನೇ ವೈರಲ್ ಆಗಿದೆ.

ಪುಣೆ ನಿವಾಸಿಯಾಗಿರುವ ಸ್ವಾತಿ ಚಿತಲ್‍ಕರ್ ಎಂಬುವವರು ಮಹಾರಾಷ್ಟ್ರದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಸ್ವಾತಿ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವಾಗ ಅವರ ಸೀಟಿನ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ತಮ್ಮ ಮಗುವನ್ನ ನೆಲದ ಮೇಲೆ ಮಲಗಿಸಿದ ಫೋಟೋವೊಂದನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.

ಪೋಸ್ಟ್ ನಲ್ಲಿ ಏನಿದೆ?: ನೆಲದ ಮೇಲೆ ಮಲಗಿರುವುದು ನನ್ನ ಮಗುವಲ್ಲ, ನನ್ನ ಹೃದಯ, ನನ್ನ ಮಗನಿಗೆ ವಿಪರೀತ ಜ್ವರವಿದ್ದು, ಆತ ಯಾರ ಬಳಿಯೂ ಹೋಗೋದಕ್ಕೆ ಸಿದ್ದವಿಲ್ಲ. ಅಲ್ಲದೇ ನಾನು ಬ್ಯಾಂಕ್‍ನಲ್ಲಿ ಲೋನ್ ಅಪ್ರೂವಲ್ ಮಾಡಬೇಕಾಗಿರುವುದರಿಂದ ರಜೆಯನ್ನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ರೂ ನಾನು ನನ್ನ ಎರಡೂ ಜವಬ್ದಾರಿಯನ್ನ ನಿಭಾಯಿಸುತ್ತಿದ್ದೇನೆ. ಆದ್ರೆ ಈ ಸಂದೇಶವನ್ನ ವಿಧಾನಸಭೆಯಲ್ಲಿ ಕುಳಿತು ನಿದ್ದೆ ಮಾಡುವ ಸಚಿವರಿಗೆ ಮುಟ್ಟಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇವರ ಈ ಸಂದೇಶ ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಮೂಲಕ ಇಲ್ಲಿನ ಸ್ಥಳೀಯ ರಾಜಕಾರಣಿಗಳಿಗೆ ಉದ್ಯೋಗಿ ಮಹಿಳೆಯರು ಎದುರಿಸಬೇಕಾದ ಕಷ್ಟಗಳನ್ನ ತಮ್ಮದೇ ಶೈಲಿಯಲ್ಲಿ ತಿಳಿಸಿದ್ದಾರೆ.

Comments are closed.