ಪ್ರಮುಖ ವರದಿಗಳು

ಒಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ಗೆದ್ದು ಮನೆಗೆ ಬಂದ ಸಿಂಧುಗೆ ಆಕೆಯ ತಾಯಿ ಮೊದಲು ನೀಡಿದ್ದು ಏನು ಗೊತ್ತಾ..?

Pinterest LinkedIn Tumblr

pv_sindhu

ಹೈದರಾಬಾದ್: ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿಪದಕ ಗೆದ್ದು ಮನೆಗೆ ಬಂದಿರುವ ಪಿ.ವಿ.ಸಿಂಧುರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಮ್ಮ ಮೊದಲು ನೀಡಿದ್ದು ಕರ್ನಾಟಕದ ವಿಶೇಷ ತಿನಿಸು ಮೈಸೂರು ಪಾಕ್ ಹಾಗೂ ಹೈದರಾಬಾದ್ ಬಿರಿಯಾನಿ.

ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಿಂಧು ಕಳೆದ ಮೂರು ತಿಂಗಳಿನಿಂದ ಸಿಹಿತಿಂಡಿ, ಮಂಸಾಹಾರ ಮತ್ತು ಮೊಬೈಲ್ ಬಳಕೆಯನ್ನು ನಿಲ್ಲಿಸಿ ಕೇವಲ ಕೋಚ್ ಗೋಪಿಚಂದ್‍ರ ಮಾರ್ಗದರ್ಶನದಂತೆ ನಡೆದಿದ್ದರು. ಮಗಳ ಸಾಧನೆಯಿಂದ ಖುಷಿಪಟ್ಟಿರುವ ಸಿಂಧು ತಾಯಿ ಪಿ.ವಿಜಯಾ ಮಗಳ ಇಷ್ಟದಂತೆ ಮೈಸೂರ್ ಪಾಕ್ ಮತ್ತು ಬಿರಿಯಾನಿ ಮಾಡಿಕೊಟ್ಟಿದ್ದಾರೆ.

ವಿಮಾನ ನಿಲ್ದಾಣದಿಂದ ಸಿಂಧು ಮತ್ತೆ ಕೋಚ್ ಗೋಪಿಚಂದ್‍ರನ್ನು ಮುತ್ತಿನ ನಗರಿ ಹೈದರಾಬಾದ್‍ನ ಲಕ್ಷಾಂತರ ಕ್ರೀಡಾಭಿಮಾನಿಗಳು ಆದರದಿಂದ ಸ್ವಾಗತಿಸಿ, ಸರ್ಕಾರದ ವತಿಯಿಂದ ಗಚ್ಚಿಬೌಲಿ ಸ್ಟೇಡಿಯಮ್‍ನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮನೆಗೆ ಬಂದ ಕೂಡಲೇ ಸಿಂಧು ಬಹುದಿನಗಳಿಂದ ದೂರವಿಟ್ಟಿದ್ದ ಮೊಬೈಲನ್ನು ತೆಗೆದುಕೊಂಡರು. ನಂತರ ಸಿಹಿ ಮೊಸರು, ಐಸ್ ಕ್ರೀಮ್ ಗಳನ್ನು ತಿಂದು ಖುಷಿ ಪಟ್ಟರು. ಮುಂದಿನ ಟೂರ್ನಿಗಾಗಿ ನಾಳೆಯಿಂದ ಪುನಃ ಗೋಪಿಚಂದ್‍ರ ಗರಡಿಯಲ್ಲಿ ಅಭ್ಯಾಸವಿರುವುದರಿಂದ ಸಿಂಧುರವರ ಇಷ್ಟದ ಎಲ್ಲಾ ತಿನಿಸುಗಳನ್ನು ಅಮ್ಮ ತಯಾರಿಸಿದ್ದರು.

Comments are closed.