ಅಂತರಾಷ್ಟ್ರೀಯ

ವಿದ್ಯಾರ್ಥಿನಿ ಜೊತೆ ಹಾಸಿಗೆ ಹಂಚಿಕೊಂಡ ಉಸೇನ್ ಬೋಲ್ಟ್ ಫೋಟೋ ವೈರಲ್ !

Pinterest LinkedIn Tumblr

bolt

ರಿಯೋ ಡಿ ಜನೈರೋ: ಉಸೇನ್ ಬೋಲ್ಟ್.. ರಿಯೋ ಒಲಿಂಪಿಕ್ಸ್ ಸೇರಿದಂತೆ ಸತತ ಮೂರೂ ಒಲಿಂಪಿಕ್ಸ್`ನಲ್ಲಿ ಮೂರ್ಮೂರು ಚಿನ್ನದ ಪದಕ ಗೆದ್ದಿರುವ ಜಮೈಕಾದ ಚಿರತೆ. ಮೈದಾನದಲ್ಲಿ ಚಿರತೆಯಂತೆ ಓಡಿ ಬಂಗಾರದ ಪದಕಗಳನ್ನ ಜಯಿಸಿದ ಈ ಚಿರತೆ ಈಗ ತನ್ನ ಹಾಸಿಗೆ ಪುರಾಣದ ಮೂಲಕ ಸುದ್ದಿ ಮಾಡಿದೆ.

ಜಮೈಕಾದ ಉಸೇನ್ ಬೋಲ್ಟ್ 20 ವರ್ಷದ ಬ್ರೆಜಿಲ್ ವಿದ್ಯಾರ್ಥಿನಿ ಜೊತೆ ಹಾಸಿಗೆ ಹಂಚಿಕೊಂಡು ಹುಟ್ಟುಹಬ್ಬ ಸೆಲಬ್ರೇಟ್ ಮಾಡಿರುವ ದೃಶ್ಯಗಳು ಆನ್`ಲೈನ್`ನಲ್ಲಿ ಭಾರೀ ಸುದ್ದಿ ಮಾಡುತ್ತಿವೆ. ಅಂದಹಾಗೆ, ಈ ಸುದ್ದಿ ಮತ್ತು ಫೋಟೋಗಳನ್ನ ಲೀಕ್ ಮಾಡಿರುವುದು ಬೇರಾರೂ ಅಲ್ಲ. ಬೋಲ್ಟ್ ಜೊತೆ ರಾತ್ರಿ ಕಳೆದ ವಿದ್ಯಾರ್ಥಿನಿ ಜೇಡಿ ಡ್ಯೂರ್ಟೆ. ಸಾಮಾಜಿಕ ಜಾಲತಾಣದಲ್ಲಿ ಹಸಿಬಿಸಿ ಫೋಟೊಗಳನ್ನ ಶೇರ್ ಮಾಡಿದ್ದಾಳೆ.

ಈ ಮೂಲಕ ಬೋಲ್ಟ್ ಮತ್ತೊಮ್ಮೆ ತನ್ನ ಗರ್ಲ್ ಫ್ರೆಂಡ್ 26 ವರ್ಷದ ಕಸೆ ಬೆನೆಟ್`ಗೆ ಚೀಟ್ ಮಾಡಿರುವುದು ಸ್ಪಷ್ಟವಾಗಿದೆ. ಬೋಲ್ಟ್ ಬೇರೋಬ್ಬ ಯುವತಿಗೆ ಕಿಸ್ ಮಾಡುತ್ತಿರುವ ಈ ಫೋಟೋಗಳು ಮತ್ತಷ್ಟು ಟ್ರಬಲ್ ನೀಡುವುದರಲ್ಲಿ ಸಂದೇಹವೇ ಇಲ್ಲ.

Comments are closed.