ಪ್ರಮುಖ ವರದಿಗಳು

ನಿವೃತ್ತ ಸೇನಾಧಿಕಾರಿ ಮನೆ ಮೇಲೆ ಆಕಾಶದಿಂದ ಬೀಳುತ್ತಿದೆ ಮಲ- ಮೂತ್ರ !

Pinterest LinkedIn Tumblr

palam

ನವದೆಹಲಿ: ತಮ್ಮ ನಿವಾಸದ ಮೇಲೆ ಆಕಾಶದಿಂದ ಮಲ- ಮೂತ್ರ ಬೀಳುತ್ತಿದೆ ಎಂದು ಆಪಾದಿಸಿ ನಿವೃತ್ತ ಸೇನಾಧಿಕಾರಿಯೊಬ್ಬರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೊರೆ ಹೋಗಿದ್ದಾರೆ.

ಕಳೆದೊಂದು ವಾರದಿಂದ ಪ್ರತಿದಿನ ಬೆಳಗ್ಗೆ ಎದ್ದು ನೋಡಿದಾಗ ನಮ್ಮ ಮನೆಯ ಗೋಡೆ, ಮಹಡಿಯ ಮೇಲೆ ಮಾನವರ ಮಲಮೂತ್ರ ಚದುರಿದಂತೆ ಬಿದ್ದಿರುತ್ತದೆ. ತಮ್ಮ ನಿವಾಸ ಪಾಲಂ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ವಿಮಾನಗಳು ರಾತ್ರಿ ವೇಳೆ ಹಾರಾಡುವಾಗ ಮಲ-ಮೂತ್ರ ಸುರಿಯುತ್ತಿವೆ ಎಂದು ನಿವೃತ್ತ ಸೇನಾಧಿಕಾರಿ ಸತ್ವಂತ ಸಿಂಗ್‌ ದಹಿಯಾ ನ್ಯಾಯಾಧಿಕರಣದ ಕದ ಬಡಿದಿದ್ದಾರೆ. ಇದು ಸ್ವತ್ಛ ಭಾರತ ಅಭಿಯಾನದ ಉಲ್ಲಂಘನೆಯಾಗಿದ್ದು, ವಿಮಾನ ಕಂಪನಿಗಳ ವಿರುದ್ಧ ಕ್ರಿಮಿನಲ್‌ ವಿಚಾರಣೆ ಆರಂಭಿಸಿ ಭಾರಿ ದಂಡ ಹೇರಬೇಕು ಎಂದು ಮನವಿ ಮಾಡಿದ್ದಾರೆ.

ಹಿರಿಯ ಪರಿಸರ ವಿಜ್ಞಾನಿಯನ್ನು ಸೇನಾಧಿಕಾರಿಯ ಮನೆಗೆ ಕಳುಹಿಸಿ, ಮಾನವರ ತ್ಯಾಜ್ಯ ಕಂಡುಬಂದರೆ ಅದನ್ನು ವಿಶ್ಲೇಷಣೆಗೊಳಪಡಿಸುವಂತೆ ನ್ಯಾಯಾಧಿಕರಣ ಸೂಚಿಸಿದೆ.

ಪ್ರಯಾಣಿಕರ ಮಲ-ಮೂತ್ರ ಶೇಖರಣೆಗೆ ವಿಮಾನಗಳಲ್ಲಿ ವಿಶೇಷ ಟ್ಯಾಂಕ್‌ ಇರುತ್ತದೆ. ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕವಷ್ಟೇ ಆ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತದೆ. ಒಂದು ವೇಳೆ ಟ್ಯಾಂಕ್‌ಗಳಲ್ಲಿ ಸೋರಿಕೆಯಾಗುತ್ತಿದ್ದರೆ ಈ ರೀತಿ ಮಲ-ಮೂತ್ರ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸೋರಿಕೆಯಿಂದ ಭಾರತೀಯರು ಗಾಯಗೊಂಡ ಉದಾಹರಣೆ ಇವೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.