ಶಾರ್ಜಾ ಕರ್ನಾಟಕ ಸಂಘದ ಆಶ್ರದಲ್ಲಿ 61ನೇ ಕರ್ನಾಟಕ ರಾಜ್ಯೋತ್ಸವ ಮತ್ತು 14ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ 2016 ನವೆಂಬರ್ 18ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಮಯೂರ ಪ್ರಶಸ್ತಿ ಸಮಾರಂಭ “ಮಯೂರ ರಾಜ, ಮಯೂರ ರಾಣಿ, ಮಯೂರ ಕುಮಾರ, ಮಯೂರ ಕುಮಾರಿ” ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಯು.ಎ.ಇ ಮಟ್ಟದ ಕನ್ನಡ ಚಲನಚಿತ್ರ ಗೀತಾ ಗಾಯನ ಸ್ಪರ್ಧೆ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳು ನಡೆಯಲಿದೆ, ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಪ್ರಖ್ಯಾತ ಗಾಯಕರು, ಹಿನ್ನೆಲೆ ಸಂಗೀತ ತಂಡದ ನುರಿತ ಕಲಾವಿದರು ಊರಿನಿಂದ ಆಗಮಿಸಲಿದ್ದಾರೆ.
ಮರಳುನಾಡಿನಲ್ಲಿ ಪ್ರತಿಧ್ವನಿಸಲಿರುವ ಸಂಗೀತ ರಸಮಂಜರಿ
ಸುಮಧುರ ಗೀತೆಗಳ ಸಂಗೀತ ರಸಮಂಜರಿಯಲ್ಲಿ ವಿಶ್ವದ ಹಲವು ದೇಶಗಳಲ್ಲಿ ತನ್ನ ಕಂಠಸಿರಿಯ ಮೂಲಕ ಪ್ರಸಿದ್ದಿಯನ್ನು ಪಡೆದಿರುವ ಒಂಬತ್ತು ಭಾಷೆಗಳಲ್ಲಿ ಸುಶ್ರಾವ್ಯವಾಗಿ ಹಾಡುವ ಗಾಯಕಿ ಮಂಗಳೂರಿನ ಅನಿತಾ ಡಿಸೋಜಾ, ಹಾಗೂ ಪ್ರಖ್ಯಾತ ಗಾಯಕಿ ಮಾನಸ ಹೊಳ್ಳ, ಯು.ಎ.ಇ.ಯಲ್ಲಿ ಕಳೆದ ಎರಡು ಮೂರು ದಶಕಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಸಂಗೀತ ರಸಮಂಜರಿಯಲ್ಲಿ ಹಾಗೂ “ಧೂಮ್ ದಮಾಕ” ಖ್ಯಾತಿಯ ಗಾಯಕ ಹರೀಶ್ ಶೇರಿಗಾರ್ ಹಾಗೂ ಮಂಗಳೂರಿನಿಂದ ಆಗಮಿಸಿರುವ ಪ್ರತಿಭಾನ್ವಿತ ಕಲಾವಿದರಾದ ರಾಜ್ ಗೋಪಾಲ್ ಮತ್ತು ತಂಡದವರ ವಾಧ್ಯಗೋಷ್ಠಿಯಂದಿಗೆ ಕನ್ನಡ ಗೀತೆಗಳು ಮರಳುನಾಡಿನಲ್ಲಿ ಪ್ರತಿಧ್ವನಿಸಲಿದೆ.
ಮತ್ತೊರ್ವ ಪ್ರಸಿದ್ದ ಕಲಾವಿದ ರವಿ ಸಂತೋಷ್ ರವರಿಂದ ಮಿಮಿಕ್ರಿ ಹಾಗೂ ಕಾರ್ಯಕ್ರಮ ನಿರೂಪಣೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿ ಕನ್ನಡ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರ್ನಾಟಕ ಸಂಘ ಶಾರ್ಜಾದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಪರವಾಗಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸುಗಂಧರಾಜ್ ಬೇಕಲ್ ರವರು ಮಾಧ್ಯಮದ ಮೂಲಕ ಆಹ್ವಾನಿಸಿದ್ದಾರೆ.
Comments are closed.