ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ನಡೆಸಿದ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಿಚ್ಚ ಸುದೀಪ್, ವೆಂಕಟ್’ಗೆ ಶಿಕ್ಷೆ ಆಗುವವರೆಗೆ ತಾನು ಕಾರ್ಯಕ್ರಮ ನಿರೂಪಣೆ ಮಾಡಲ್ಲ ಎಂದು ಹೇಳಿಕೆ ನೀಡಿದ್ದು, ಇದೀಗ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮೊನ್ನೆ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ನಟ, ನಿರ್ದೇಶಕ ಮತ್ತು ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ‘ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರ ಮೇಲೆ ನಡೆದ ಹಲ್ಲೆಗೆ ನ್ಯಾಯ ದೊರೆಯುವ ವರೆಗೂ ಕಾರ್ಯಕ್ರಮವನ್ನು ಹೊಸ್ಟ್ ಮಾಡುವುದಿಲ್ಲ’ ಎಂದು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಆದರೆ ಇದು ಎಷ್ಟು ಮಟ್ಟಕ್ಕೆ ಸಾಧ್ಯ ಎನ್ನುವುದನ್ನು ಕಾದು ನೋಡಬೇಕು ಏಕೆಂದರೆ ಬಿಗ್ ಬಾಸ್ ನಲ್ಲಿ ಸುದೀಪ್ ಅವರದ್ದು ಕೇವಲ ನಿರೂಪಣೆಯ ಕೆಲಸ ಮಾತ್ರ ಅದುವೆ ವಾರದ ಕೊನೆಯ ಎರಡು ದಿನಗಳು ಮಾತ್ರ ಬಿಗ್ ಬಾಸ್ ಮನೆಯೊಂದಿಗೆ ಅವರಿಗೆ ಸಂಬಂಧ ಇರುತ್ತದೆ. ಮಿಕ್ಕಂತೆ ಬೇರೆ ಎಲ್ಲಾ ನಿರ್ಧಾರಗಳು ನಿರ್ದೇಶಕ ಮತ್ತು ಚಾನಲ್ ಮಂದಿಗೆ ಸಂಬಂಧಿಸಿದ್ದು.
ಹಾಗಾಗಿ ಒಂದು ವೇಳೆ ಪ್ರಥಮ್ ಮೇಲೆ ಹಲ್ಲೆ ನಡೆಸಿದ ಹುಚ್ಚ ವೆಂಕಟ್ ಗೆ ಶಿಕ್ಷೆಯಾಗದೇ ಹೊದರು ಈ ವಾರದ ಕೊನೆಯಲ್ಲಿ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳಲೇ ಬೇಕು. ಕಾರಣ ಈಗಾಗಲೇ ಅ ಕೆಲಸಕ್ಕೆ ಒಪ್ಪಂದ ಆಗಿರುತ್ತೆ, ಮತ್ತು ಅದಕ್ಕೆ ಸಲ್ಲುವ ಸಂಭಾವನೆಯನ್ನು ತಲುಪಿಸಲಾಗಿರುತ್ತೆ.
ಒಂದು ವೇಳೆ ಚಾನಲ್ ಮಂದಿ ಸುದೀಪ್ ಮಾತಿಗೆ ಬೆಲೆ ನೀಡಿ ವೆಂಕಟ್’ಗೆ ಶಿಕ್ಷೆಯಾಗುವಂತೆ ಮಾಡಬಹುದಾಗಿದೆ. ಈ ಹಿಂದೆ ಒಮ್ಮೆ ಬಿಗ್ ಬಾಸ್ ವಿಜೇತರನ್ನು ಘೋಷಿಸುವ ಸಂದರ್ಭದಲ್ಲಿ ಸುದೀಪ್ `ಬಿಗ್ ಬಾಸ್’ನ ಯಾವುದೇ ವಿಷಯದಲ್ಲೂ ತಮ್ಮ ಪಾತ್ರವಿಲ್ಲ’ ಎಂದಿದ್ದರು ಹಾಗಾಗಿ ಇಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡ ಬೇಕು.
ಸುದೀಪ್ ಬರುವುದಿಲ್ಲ ಎಂದ್ರೆ ಕಲರ್ಸ್ ಚಾಲನ್’ನವರು ಏನು ಮಾಡುವರು ಎಂಬುದು ಈ ವಾರದ ಕೊನೆಯಲ್ಲಿ ತಿಳಿಯಲಿದೆ ಅಲ್ಲಿಯವರೆಗೂ ತಾಳ್ಮೆ ಇಂದ ಕಾಯಲೇಬೇಕು.
Comments are closed.