Photo: Ashok Belman
ದುಬೈ: ಇಲ್ಲಿನ ಮಾಲ್ ಅಫ್ ಎಮಿರೇಟ್ಸ್ ನ ಡಕ್ಟಾಕ್ ಸೆಂಟರ್ ಪಾಯಿಂಟ್ ಥಿಯೇಟರ್’ನಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಂಗೀತ ಲೋಕದ ದಿಗ್ಗಜ ಡಾ. ಹಂಸಲೇಖ ನೇತೃತ್ವದಲ್ಲಿ ಮೂಡಿಬಂದ ಕನ್ನಡ ಸುಮಧುರ ಗೀತೆಗಳ “ಹಂಸನಾದ” ಕಾರ್ಯಕ್ರಮ ನೆರೆದವರ ಮನ ಮಿಡಿಯುವಂತೆ ಮಾಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುಎಇಯ ಖ್ಯಾತ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿ ಅವರು ಡಾ. ಹಂಸಲೇಖ ಹಾಗು ಅವರ ಧಾರ್ಮ ಪತ್ನಿ ಲತಾ ಹಂಸಲೇಖರನ್ನು ಸನ್ಮಾನಿಸಿದರು.
ದಕ್ಷಿಣ ಭಾರತದ ತ್ರಿಭಾಷಾ ಸಂಗೀತ ನಿರ್ದೇಶಕರು, ರಾಗ ಸಂಯೋಜಕರು, ಚಿತ್ರಸಾಹಿತಿ, ಸಂಭಾಷಣೆಗಾರ, ನಟ ಬೆಳ್ಳಿತೆರೆಯ ಪ್ರಖ್ಯಾತ ನಾದಬ್ರಹ್ಮ ಡಾ. ಹಂಸಲೇಖ ಹಾಗು ಅವರ ತಂಡದವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಬಹಳ ಮನಮೋಹಕವಾಗಿತ್ತು.
ಗಾಯಕರಾದ ಲತಾ ಹಂಸಲೇಖಾ, ಚಿನ್ಮಯ್, ಮಾನಸ ಹೊಳ್ಳ, ಶಿವ ಕುಮಾರ್ ತಮ್ಮ ಸುಮಧುರ ಕಂಠದ ಮೂಲಕ ಎಲ್ಲರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿದರು. ಆಚಾರ್ಯ ಮೋಹನ್ ಕುಮಾರ್, ಅಶ್ವಿನಿ, ಹರ್ಷವರ್ಧನ್, ಕಾರ್ತಿಕ್, ಬೆನೆಡಿಕ್ಟ್ ಸಂಪತ್, ಅಲ್ಫಾನ್ಸ್ ಸಂಗೀತದ ತಂಡದಲ್ಲಿದ್ದರು. ವಿದ್ಯಾಶಿವಕುಮಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ‘Stoppers ಶೋ’ ತಂಡವರಿಂದ ಮನಮೋಹಕ ಡ್ಯಾನ್ಸ್ ಕೂಡ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದುಕೊಟ್ಟಿತು.
Comments are closed.