ಕರ್ನಾಟಕ

ಸಚಿವ ಎಚ್.ವೈ.ಮೇಟಿ ರಾಸಲೀಲೆ ! ಸಿಡಿ ಬಿಡುಗಡೆ ಮಾಡದಂತೆ ಆರ್ ಟಿಐ ಕಾರ್ಯಕರ್ತನಿಗೆ ಬೆದರಿಕೆ

Pinterest LinkedIn Tumblr

meti

ಬೆಂಗಳೂರು : ರಾಜ್ಯದ ಕಾಂಗ್ರೆಸ್‌ ಸರಕಾರಕ್ಕೆ ಕೀಳು ಮಟ್ಟದ ಹಗರಣವೊಂದು ಅಂಟಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್ತ ಸಚಿವರೊಬ್ಬರು ರಾಸಲೀಲೆ ನಡೆಸಿದ ಸಿಡಿಯೊಂದು ಬಿಡುಗಡೆಗೆ ಸಿದ್ದವಾಗಿದ್ದು. ಸಿಡಿ ಬಿಡುಗಡೆಗೆ ಮಾಡದಂತೆ ಆರ್‌ಟಿಐ ಕಾರ್ಯಕರ್ತನೊಬ್ಬನಿಗೆ ಜೀವ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ.

ಬಳ್ಳಾರಿ ಮೂಲದ ಆರ್‌ಟಿಐ ಕಾರ್ಯಕರ್ತ ರಾಜ್‌ಶೇಖರ್‌ ಎನ್ನುವವರ ಬಳಿ ಸಚಿವರ ರಾಸಲೀಲೆ ಸಿಡಿ ಇದ್ದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡದಂತೆ ಸಚಿವರ ಬೆಂಬಲಿಗರು ಅವರಿಗೆ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ರಾಜ್‌ಶೇಖರ್‌ ಅವರು ಪೊಲೀಸರು ದೂರು ನೀಡಲು ಮುಂದಾಗಿದ್ದಾರೆ.

ರಾಜಶೇಖರ್‌ಗೆ ಬೆದರಿಕೆ ಒಡ್ಡಿದ ವ್ಯಕ್ತಿ ಅಬಕಾರಿ ಸಚಿವ ಎಚ್‌.ವೈ.ಮೇಟಿ ಅವರ ಹೆಸರು ಹೇಳಿರುವುದು ಮಾಧ್ಯಮಗಳಲ್ಲಿ ಪ್ರಸಾರವಾದ ಆಡಿಯೋದಲ್ಲಿ ಕೇಳಿ ಬಂದಿದೆ. ಬೇಕಾದ್ರೆ ಹಣ ತೆಗೊಳ್ಳಿ ಸಿಡಿ ಬಿಡುಗಡೆ ಮಾಡಬೇಡಿ. ಮಾಡಿದ್ರೆ ನಿಮಗೆ ನಿಮ್ಮನೆಯವ್ರಿಗೆ ಚೆನ್ನಾಗಿರಲ್ಲ ಎಂದು ಬೆದರಿಕೆ ಒಡ್ಡಲಾಗಿದೆ.

ಸಹಾಯ ಯಾಚಿಸಿ ಬಂದ 24 ರ ಹರೆಯದ ಯುವತಿಯೊಂದಿಗೆ 70 ರ ಹರೆಯದಲ್ಲಿರುವ ಮೇಟಿ ಅವರು ಸೆಕ್ಸ್‌ ನಡೆಸಿದ್ದು ಇದನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ತಮ್ಮ ವಿರುದ್ಧದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಸಚಿವ ಎಚ್.ವೈ.ಮೇಟಿ ಅವರು, ಯಾವುದೇ ಸಿಡಿ ಬಗ್ಗೆ ಮತ್ತು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ಅವರಿಗೆ ಯಾರೂ ಧಮ್ಕಿ ಹಾಕಿದ್ದಾರೆ ಎಂಬುದುರ ಬಗ್ಗೆಯೂ ತಮಗೆ ಗೊತ್ತಿಲ್ಲ ಎಂದಿದ್ದಾರೆ.

Comments are closed.