ಕುಂದಾಪುರ: ಪತಿಯು ನೇಣಿಗೆ ಶರಣಾದ ಬೆನ್ನಲ್ಲೇ ಪತ್ನಿಯು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಹೊಸಂಗಡಿ ಕೆಪಿಸಿ ಕಾಲನಿಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮೂಲತಃ ಮಾಸ್ತಿಕಟ್ಟೆಯವರಾದ ಸದ್ಯ ಹೊಸಂಗಡಿ ಕೆಪಿಸಿ ನಿವಾಸಿಗಳಾದ ಶಶಿಕುಮಾರ ಯಾನೆ ಈಶ (35)ಎನ್ನುವವರು ಮೃತಪಟ್ಟಿದ್ದಾರೆ. ಪತಿಯ ಸಾವನ್ನು ಅರಗಿಸಿಕೊಳ್ಳಲಾಗದ ಪತ್ನಿ ವಿನಯಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಬಚಾವ್ ಮಾಡಿದ ನೆರೆಕೆರೆಯವರು ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮೂಲತಃ ಮಾಸ್ತಿಕಟ್ಟೆ ಭಾಗದವರಾದ ಶಾರದಮ್ಮ ಹೊಸಂಗಡಿ ಕೆಪಿಸಿ ನಿವಾಸಿಯಾಗಿದ್ದು ಅವರ ಪುತ್ರ ಶಶಿಕುಮಾರ್ ಅವರು ಟೂರ್ಸ್ ಅಂಡ್ ಟ್ರಾವೆಲ್ಸ್ ಉದ್ಯೋಗ ಮಾಡಿದಿಕೊಂಡಿದ್ದು ಪತ್ನಿ, ಮಗು ಹಾಗೂ ತಾಯಿಯೊಂದಿಗಿದ್ದರು. ಪತ್ನಿ ವಿನಯಾ ಶಿಕ್ಷಕಿಯಾಗಿದ್ದು ಇಬ್ಬರಿಗು 8 ತಿಂಗಳ ಮಗುವಿದೆ. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಮನನೊಂದಿದ್ದ ಶಶಿಧರ್ ನಿನ್ನೆ ರಾತ್ರಿ ಖಿನ್ನರಾಗಿದ್ದರು. ಬೆಳಿಗ್ಗೆ ಮನೆಯವರು ಗಮನಿಸುವಾಗ ಬಾತ್ ರೂಂನ ಮೆಲ್ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ.
ಪತಿಯ ಆತ್ಮಹತ್ಯೆ ಕಂಡ ಪತ್ನಿ ವಿನಂತಿ ಕೂಡ ನೇಣು ಬಿಗಿದು ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಅವರನ್ನು ರಕ್ಷಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು ಸದ್ಯ ಅವರು ಚಿಕಿತ್ಸೆ ಪಡೆದಿದ್ದಾರೆ.
ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.