ದಿಲ್ಲಿಯ ಪ್ರತಿಷ್ಠಿತ ಬಡಾವಣೆಗಳಲ್ಲೊಂದು ಗ್ರೇಟರ್ ಕೈಲಾಶ್, ಅದನ್ನು GK1 ಎಂದು ಕರೆಯುತ್ತಾರೆ. ಅಲ್ಲೊಂದು ದೊಡ್ಡ ಬಂಗಲೆ ಇದೆ. ಆ ದೊಡ್ಡ ಬಂಗಲೆಗೆ ಹೋಗುವುದಕ್ಕೆ ಹೆದರುತ್ತಿದ್ದಾರೆ ಜನರು.
ಹೌಸ್ ನಂ. W-3 ಎಂದು ಹೇಳಿದರೆ ಸಾಕು ಜನ ಬೆಚ್ಚಿ ಬೀಳುತ್ತಾರೆ. ಯಾವುದೋ ಅತಿಮಾನುಷ ಶಕ್ತಿಯಿದೆಯೆಂದು ಹೇಳಲಾಗುತ್ತಿದೆ.
1986ರಲ್ಲಿ ಈ ದೊಡ್ಡ ಬಂಗಲೆಯಲ್ಲಿ ಕೃಷ್ಣನ್ ಕೌಲ್ ಮತ್ತು ಮಧು ಕೌಲ್ ಎಂಬ ವೃದ್ಧ ದಂಪತಿ ವಾಸುತ್ತಿದ್ದರು. ಒಂದು ದಿನ ಆ ದಂಪತಿ ಕಣ್ಮರೆಯಾದರು.
ನಿಗೂಢವಾಗಿ ಕಣ್ಮರೆಯಾದ ದಂಪತಿ ಕುರಿತು ನೆರೆ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಬಂದು ನೋಡಿದರೆ ಆ ದಂಪತಿಯನ್ನು ಕೊಲೆ ಮಾಡಿ, ಅಲ್ಲೇ ಇದ್ದ ವಾಟರ್ ಟ್ಯಾಂಕ್ ಅಡಿಯಲ್ಲಿ ಮಣ್ಣು ಮಾಡಿರುವ ವಿಷಯ ಬೆಳಕಿಗೆ ಬಂತು.
ಪೊಲೀಸರು ಆ ದಂಪತಿಯ ಸಂಬಂಧಿಕರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸುತ್ತಾರೆ. ಆಗ ಆಸ್ತಿ ಆಸೆಗೆ ಕೆಲವರು ನಾವು ಸಂಬಂಧಿಕರೆಂದು ಸುಳ್ಳು ಹೇಳಿ ಬರುತ್ತಾರೆ.
ದಂಪತಿಗೆ ಯೋಗ ಕಲಿಸುತ್ತಿದ್ದ ನಂಬಿಕಸ್ಥ ವ್ಯಕ್ತಿ ಆಸ್ತಿ ಆಸೆಗೆ ಕೊಲೆ ಮಾಡಿ, ನಂತರ ಪರಾರಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿ ಅವನನ್ನು ಬಂಧಿಸಲಾಗುವುದು.
ಆ ದಂಪತಿಯ ಸಾವಿನ ನಂತರ ಆ ಬಂಗಲೆಗೆ ಕಾಲಿಡಲು ಯಾರೂ ಧೈರ್ಯ ಮಾಡುತ್ತಿಲ್ಲ.
ಇಲ್ಲಿಗೆ ಭೇಟಿ ನೀಡಿದವರಿಗೆ ತುಂಬಾ ವಿಚಿತ್ರ ಅನುಭವಗಳಾಗುತ್ತವೆ, ಯಾರನ್ನೂ ಇಲ್ಲಿ ವಾಸ ಮಾಡಲು ಬಿಡುವುದಿಲ್ಲ. ಆ ವೃದ್ಧ ದಂಪತಿ ದೆವ್ವವಾಗಿ ಕಾಡುತ್ತಿದ್ದಾರೆ ಎಂಬ ಕತೆಗಳು ಈ ಭಾಗದಲ್ಲಿ ಹರಿದಾಡುತ್ತಿವೆ.
Comments are closed.